Site icon Vistara News

ದುಬೈನಿಂದ ಟೇಕ್​ ಆಫ್​ ಆಗಿ, 13 ತಾಸು ಹಾರಾಡಿ ವಾಪಸ್​ ದುಬೈಗೇ ಬಂದು ಲ್ಯಾಂಡ್ ಆದ ವಿಮಾನ!

plane Tookoff From Dubai Airport flies 13 hours And Again Land in Dubai

#image_title

ದುಬೈ ಏರ್​ಪೋರ್ಟ್​​ನಿಂದ ಟೇಕ್ ಆಫ್ ಆಗಿದ್ದ ಪ್ರಯಾಣಿಕರ ವಿಮಾನವೊಂದು ಸುಮಾರು 13 ತಾಸು ಹಾರಾಟ ನಡೆಸಿದ ಬಳಿಕ ಮತ್ತೆ ವಾಪಸ್ ದುಬೈಗೇ ಬಂದು ಲ್ಯಾಂಡ್ ಆಗಿದೆ. ಅಂದಹಾಗೇ ಈ ವಿಮಾನ ನ್ಯೂಜಿಲ್ಯಾಂಡ್​​ನ ಆಕ್ಲೆಂಡ್​​ಗೆ ಹೋಗಬೇಕಿತ್ತು. ಆದರೆ ದುಬೈನಿಂದ ಸುಮಾರು 9000 ಮೈಲಿಗಳಷ್ಟು ದೂರ ಸಂಚಾರ ಮಾಡಿಯಾದ ಮೇಲೆ ಮತ್ತೆ ದುಬೈ ಏರ್ ಪೋರ್ಟ್ ಗೇ ಬಂದು ನಿಂತಿದೆ.

ಎಮಿರೇಟ್ಸ್ ಏರ್​​ಲೈನ್ಸ್​​ಗೆ​​​ ಸೇರಿದ EK 448 ವಿಮಾನ ಬೆಳಗ್ಗೆ 10.30ರ ಹೊತ್ತಿಗೆ ದುಬೈ ಏರ್​​ಪೋರ್ಟ್​​​​ನಿಂದ ಟೇಕ್​​ಆಫ್​​ ಆಗಿತ್ತು. ಆದರೆ ಏಕಾಏಕಿ ನ್ಯೂಜಿಲ್ಯಾಂಡ್​​​ನ ಆಕ್ಲೆಂಡ್​​​ ಏರ್​​​ಪೋರ್ಟ್​​​ನಿಂದ ಬಂದ ಒಂದು ಸಂದೇಶದಿಂದ ಆ ವಿಮಾನದ ಪೈಲಟ್ ಮತ್ತೆ ಅದನ್ನು ಯೂಟರ್ನ್ ಮಾಡಿ, ದುಬೈಗೆ ತರಬೇಕಾಯಿತು.

‘ಆಕ್ಲೆಂಡ್​​ನಲ್ಲಿ ವಿಪರೀತ ಮಳೆ ಬಂದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಏರ್​​​ಪೋರ್ಟ್​​ಗೂ ನೀರು ನುಗ್ಗಿದೆ. ಇಲ್ಲಿನ ಪ್ರತಿಕೂಲ ಹವಾಮಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರು ನಿಂತ ಕಾರಣ ನಮ್ಮಲ್ಲಿಂದ ಹೊರಡಬೇಕಿದ್ದ ಮತ್ತು ಇಲ್ಲಿಗೆ ಆಗಮಿಸಬೇಕಿದ್ದ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸುತ್ತಿದ್ದೇವೆ’ ಎಂದು ಆಕ್ಲೆಂಡ್​ ಏರ್​ಪೋರ್ಟ್​ ಪ್ರಕಟಣೆ ಹೊರಡಿಸಿತ್ತು, ಮತ್ತು ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಸಂದೇಶ ರವಾನೆ ಮಾಡಿತ್ತು ಇದೇ ಕಾರಣಕ್ಕೆ EK 448 ವಿಮಾನದ ಪೈಲಟ್​ ಅದನ್ನು ವಾಪಸ್​ ದುಬೈಗೆ ತೆಗೆದುಕೊಂಡು ಹೋಗಿದ್ದ. ಇದರಿಂದ ಪ್ರಯಾಣಿಕರಿಗೆ ಅನನುಕೂಲವಾಗಿದೆ. ಅಷ್ಟೇ ಅಲ್ಲ, ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಮಳೆ-ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಕಾರಣಕ್ಕೆ ಆ ನಿಲ್ದಾಣದಲ್ಲಿ ಸುಮಾರು 2000 ಪ್ರಯಾಣಿಕರು ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: Air India Urination Case: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಆರೋಪಿ ಶಂಕರ್‌ ಮಿಶ್ರಾಗೆ ಜಾಮೀನು

Exit mobile version