Site icon Vistara News

Israel Palestine War: ಗಾಜಾ ಆಸ್ಪತ್ರೆ ಮೇಲೆ ಡೆಡ್ಲಿ ಅಟ್ಯಾಕ್, ಸಾಮಾನ್ಯರ ಸಾವಿಗೆ ಮರುಗಿದ ಮೋದಿ

PM Modi expressed shock at the loss of lives in an attack on a Gaza hospital

ನವದೆಹಲಿ: ಗಾಜಾ ಪಟ್ಟಿಯ ಆಸ್ಪತ್ರೆಯ (Gaza Hospital Attack) ಮೇಲೆನ ಬಾಂಬ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ದಾಳಿ ವೇಳೆ, ಸಾಮಾನ್ಯರ ಸಾವಿನ ಬಗ್ಗೆ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಸಾವುನೋವುಗಳಲ್ಲಿ ಭಾಗಿಯಾಗಿರುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ(Israel Palestine War).

ಗಾಜಾ ಪಟ್ಟಿಯಲ್ಲಿರುವ ಆಂಗ್ಲಿಕನ್ ಚರ್ಚ್ ನಡೆಸುತ್ತಿದ್ದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಸ್ಫೋಟದಲ್ಲಿ ಸುಮಾರು 500 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸ್ಫೋಟಕ್ಕೆ ಇಸ್ರೇಲ್ ಸೇನೆ ಕಾರಣ ಎಂದು ಹಮಾಸ್ ಬಂಡುಕೋರರು ಆರೋಪಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಇಸ್ರೇಲ್ ಸರ್ಕಾರ, ಹಮಾಸ್ ಸ್ವತಃ ದಾಳಿ ನಡೆಸಿದೆ ಎಂದು ತಿರುಗೇಟು ನೀಡಿದೆ.

ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಸಾವುಗಳಿಗೆ ತೀವ್ರ ಆಘಾತವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥನೆ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಸಾವುನೋವುಗಳು ಗಂಭೀರ ಮತ್ತು ನಿರಂತರ ಕಳವಳದ ವಿಷಯವಾಗಿದೆ. ಇದರಲ್ಲಿ ಭಾಗಿಯಾದವರು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ, ಈ ಘಟನೆ ಕುರಿತು ವಿದೇಶಾಂಗ ಸಚಿವಾಲಯವು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಉಗ್ರಗಾಮಿ ಗುಂಪಿನ ದಾಳಿಯ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಹಿಂಸಾಚಾರ ನಡೆಯುತ್ತಿದೆ. ಈ ಹಂತದಲ್ಲಿ ಮೋದಿ ಅವರ ಖಂಡನಾರ್ಹ ಹೇಳಿಕೆಗಳು ಗಮನ ಸೆಳೆದಿವೆ.

ಅಮೆರಿಕ ಮಾಡಿದ ತಪ್ಪನ್ನೇ ನೀವು ಮಾಡಬೇಡಿ

ಹಮಾಸ್ ಬಂಡುಕೋರರ (Hamas Attack) ವಿರುದ್ಧ ಇಸ್ರೇಲ್ ಯುದ್ಧ (Israel Palestine War)ನಡೆಸುತ್ತಿರುವ ಸಂದರ್ಭದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್(US President Joe Biden), ಇಸ್ರೇಲಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಕಿವಿ ಮಾತು ಕೂಡ ಹೇಳಿದ್ದಾರೆ. 9/11ರ ಉಗ್ರ ಕೃತ್ಯ ಬಳಿಕ ಅಮೆರಿಕ ಮಾಡಿದ ತಪ್ಪುಗಳನ್ನೇ ನೀವು ಮಾಡಬೇಡಿ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. ಅತ್ಯಂತ ಮಾರಣಾಂತಿಕ ದಾಳಿಯ ಬಳಿಕ, ನೀವು ಕ್ರೋಧದಿಂದ ಕುರುಡರಾಗಬೇಡಿ ಎಂದು ಅವರು ಹೇಳಿದ್ದಾರೆ. ಸಪ್ಟೆಂಬರ್ 11ರ ಬಳಿಕ ಅಮೆರಿಕ ಕೂಡ ಇಂಥದ್ದೇ ತಪ್ಪು ಮಾಡಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Palestine War: ನಮ್ಮ ಕೈ ಟ್ರಿಗರ್ ಮೇಲಿದೆ! ಇಸ್ರೇಲ್‌ಗೆ ನೇರ ಎಚ್ಚರಿಕೆ ನೀಡಿದ ಇರಾನ್

ನೀವು ಸಿಟ್ಟಿನಿಂದ ಕುದಿಯುತ್ತಿರುವಾಗ ನಾನು ನಿಮಗೆ ಎಚ್ಚರಿಸುತ್ತಿದ್ದೇನೆ. ಕ್ರೋಧವನ್ನೇ ಸೇವಿಸಬೇಡಿ. 9/11ರ ನಂತರ ಅಮೆರಿಕ ಕೂಡ ಕ್ರೋಧದಲ್ಲಿ ಮುಳುಗಿತ್ತು. ಉಗ್ರ ದಾಳಿಗೆ ಪ್ರತಿಯಾಗಿ ನಾವು ನ್ಯಾಯಕ್ಕೆ ಹೋರಾಡಿದೆವು ಮತ್ತು ನ್ಯಾಯ ಕೂಡ ಸಿಕ್ಕಿತು. ಆದರೂ ನಾವು ಕೆಲವು ತಪ್ಪುಗಳನ್ನು ಮಾಡಿದೆವು ಎಂದು ಟೆಲ್ ಅವಿವ್‌ನಲ್ಲಿ ಇಸ್ರೇಲ್ ಆಡಳಿತಕ್ಕೆ ಎಚ್ಚಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version