ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ (PM Rishi Sunak) ಅವರು ಕನ್ಸರ್ವೇಟಿವ್ ಪಕ್ಷದ ಚೇರ್ಮನ್ ನಧೀಮ್ ಜಹಾವಿ(Nadhim Zahawi) ಅವರನ್ನು ಹುದ್ದೆಯಿಂದ ಕಿತ್ತು ಹಾಕಿದ್ದಾರೆ. ವೈಯಕ್ತಿಕ ತೆರಿಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಕಳೆದ ವಾರ ಜವಾಹಿ ಅವರ ತೆರಿಗೆ ವ್ಯವಹಾರಗಳ ಕುರಿತು ತನಿಖೆಗೆ ರಿಷಿ ಸುನಕ್ ಅವರು ಆದೇಶಿಸಿದ್ದರು. ಈ ವೇಳೆ ಜವಾಹಿ ಅವರು ಸಚಿವ ಸಂಹಿತೆಯ ಗಂಭೀರ ಉಲ್ಲಂಘನೆ ಮಾಡಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕನ್ಸರ್ವೇಟಿವ್ ಪಕ್ಷದ ಚೇರ್ಮನ್ ಹುದ್ದೆಯಿಂದ ಕಿತ್ತು ಹಾಕಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Rishi Sunak | ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ವಿಷಯದಲ್ಲಿ ಭಾರತ ಪ್ರಧಾನಿ ಪರ ನಿಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಸಂಹಿತೆ ಸಲಹೆಗಾರರಿಗೆ ಜವಾಹಿ ಅವರ ತೆರಿಗೆ ವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ರಿಷಿ ಸುನಕ್ ಅವರು ತಿಳಿಸಿದ್ದರು. ಸೆಟಲ್‌ಮೆಂಟ್‌ನ ಭಾಗವಾಗಿ ಜವಾಹಿ 4.8 ಮಿಲಿಯನ್ ಪೌಂಡ್ ದಂಡವನ್ನು ಪಾವತಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ದಂಡದ ಕುರಿತಾದ ಮಾಹಿತಿಯನ್ನು ಅವರು ಬಹಿರಂಗಪಡಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.