Site icon Vistara News

Narendra Modi: ಮೋದಿಯನ್ನು ಬಾಸ್‌ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್‌ ಜನಪ್ರಿಯತೆಗೆ ಹೋಲಿಕೆ

Narendra Modi

Narendra Modi

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಸ್ಟ್ರೇಲಿಯಾದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಅದರಲ್ಲೂ, ಸಿಡ್ನಿಯ ಫುಟ್ಬಾಲ್‌ ಮೈದಾನದಲ್ಲಿ ಸುಮಾರು 20 ಸಾವಿರ ಅನಿವಾಸಿ ಭಾರತೀಯರು ಮೋದಿ (Narendra Modi) ಅವರನ್ನು ಕಂಡು ಪುಳಕಿತರಾಗಿದ್ದಾರೆ. ಮೋದಿ ಅವರ ನಿರರ್ಗಳ ಭಾಷಣ ಕೇಳಿ ಮಂತ್ರಮುಗ್ಧಗೊಂಡಿದ್ದಾರೆ. ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಅವರು ವೇದಿಕೆ ಮೇಲೆ ನಿಂತಾಗ, ಸ್ಟೇಡಿಯಂ ತುಂಬ ಮೋದಿ ಮೋದಿ ಘೋಷಣೆ ಮೊಳಗಿದೆ. ಜನರ ಘೋಷಣೆ ಕಂಡ ಆಸ್ಟ್ರೇಲಿಯಾ ಪ್ರಧಾನಿ, ನರೇಂದ್ರ ಮೋದಿ ಅವರನ್ನು ಬಾಸ್‌ ಎಂದು ಕರೆದಿದ್ದಾರೆ.

ಮೋದಿ ಅವರನ್ನು ಬಾಸ್‌ ಎಂದು ಕರೆಯಲು ಆಂಥೋನಿ ಅಲ್ಬನೀಸ್‌ ಅವರು ಕಾರಣವನ್ನೂ ಕೊಟ್ಟಿದ್ದಾರೆ. “ಅಮೆರಿಕದ ರಾಕ್‌ಸ್ಟಾರ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರು ಇಲ್ಲಿಗೆ ಬಂದಾಗಲೂ ಇಷ್ಟೊಂದು ಅದ್ಧೂರಿ ಸ್ವಾಗತ ದೊರೆತಿರಲಿಲ್ಲ. ಹಾಗಾಗಿ, ನರೇಂದ್ರ ಮೋದಿ ಅವರೇ ಬಾಸ್‌” ಎಂದು ಆಂಥೋನಿ ಅಲ್ಬನೀಸ್‌ ಹೇಳಿದ್ದಾರೆ. ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರನ್ನು ಅವರ ಅಭಿಮಾನಿಗಳು ‘ದಿ ಬಾಸ್‌’ ಎಂದು ಕರೆಯುತ್ತಾರೆ. ಹಾಗಾಗಿ, ಅಲ್ಬನೀಸ್‌ ಅವರು ಮೋದಿ ಅವರನ್ನು ಬಾಸ್‌ ಎಂದು ಕರೆದಿದ್ದಾರೆ.

ಬಾಸ್‌ ಎಂದು ಕರೆದಾಗ ಏನಾಯಿತು ನೋಡಿ

ಆಂಥೋನಿ ಅಲ್ಬನೀಸ್‌ ಅವರು ಮೋದಿ ಅವರನ್ನು ಬಾಸ್‌ ಎಂದು ಕರೆಯುತ್ತಲೇ ಮೈದಾನದ ತುಂಬ ಕರತಾಡನ ಕೇಳಿಬಂತು. ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ, ಮೋದಿ ಮೋದಿ ಎಂದು ಜನ ಜೈಕಾರ ಕೂಗಿದರು. ಆಂಥೋನಿ ಅಲ್ಬನೀಸ್‌ ಮಾತು ಮುಗಿಸುತ್ತಲೇ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದರು. ಮೋದಿ ಭಾಷಣದುದ್ದಕ್ಕೂ ಜನರ ಘೋಷಣೆಗಳು ಕೇಳಿಬಂದವು.

ಮೋದಿ ಭಾಷಣದ ಮೋಡಿ

ಜನರನ್ನು ಮೋಡಿ ಮಾಡಿದ ಮೋಡಿ

ಸ್ಟೇಡಿಯಂನಲ್ಲಿ ಮೋದಿ ಭಾಷಣವು ಮೋಡಿ ಮಾಡಿತು. ಇಡೀ ಅನಿವಾಸಿ ಭಾರತೀಯರನ್ನು ಒಳಗೊಳ್ಳಿಸುವ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. “ಜಗತ್ತಿನಲ್ಲೇ ಹಾಲಿನ ಉತ್ಪಾದನೆಯಲ್ಲಿ ನಂಬರ್‌ ಒನ್‌ ಇದೆ, ಅದು ಯಾವ ದೇಶ” ಎಂದು ಪ್ರಶ್ನಿಸಿದರು. ಆಗ ಎಲ್ಲರೂ ಇಂಡಿಯಾ ಇಂಡಿಯಾ ಎಂದು ಘೋಷಣೆ ಕೂಗಿದರು.

ಹಾಗೆಯೇ, ಮೊಬೈಲ್‌ ಉತ್ಪಾದನೆಯಲ್ಲಿ ಎರಡನೇ ಸ್ಥಾನ, ಸ್ಟಾರ್ಟಪ್‌ ಎಕೋ ಸಿಸ್ಟಂನಲ್ಲಿ ನಂಬರ್‌ ಒನ್‌ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದಾಗಲೂ ಜನ ಇಂಡಿಯಾ ಇಂಡಿಯಾ ಎಂದು ಘೋಷಿಸಿದರು.

ಇದನ್ನೂ ಓದಿ: Narendra Modi: ಆಸ್ಟ್ರೇಲಿಯಾದಲ್ಲಿ ಮೋದಿ ಮೋಡಿ, ಬ್ರಿಸ್ಬೇನ್‌ನಲ್ಲಿ ಶೀಘ್ರವೇ ಕಾನ್ಸುಲೇಟ್‌ ಸ್ಥಾಪನೆ ಘೋಷಣೆ

Exit mobile version