Site icon Vistara News

Priti Patel | ಲಿಜ್‌ ಟ್ರಸ್‌ ಪ್ರಧಾನಿಯಾದ ಬೆನ್ನಲ್ಲೇ ಮಂತ್ರಿ ಸ್ಥಾನಕ್ಕೆ ಭಾರತ ಮೂಲದ ಪ್ರೀತಿ ಪಟೇಲ್‌ ರಾಜೀನಾಮೆ, ಕಾರಣವೇನು?

Priti

ಲಂಡನ್‌: ಲಿಜ್‌ ಟ್ರಸ್‌ ಅವರು ಬ್ರಿಟನ್‌ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ದೇಶದಲ್ಲಿ ಕೆಲ ತಿಂಗಳುಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಶಮನವಾಗಿದೆ ಎನ್ನುವಷ್ಟರಲ್ಲಿಯೇ ಗೃಹಮಂತ್ರಿ ಸ್ಥಾನಕ್ಕೆ ಭಾರತ ಮೂಲದ ಪ್ರೀತಿ ಪಟೇಲ್‌ (Priti Patel) ಅವರು ರಾಜೀನಾಮೆ ನೀಡಿದ್ದಾರೆ.

ಭಾರತ ಮೂಲದ ರಿಷಿ ಸುನಕ್‌ ಅವರು ಪ್ರಧಾನಿ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಮತ್ತೊಬ್ಬ ಭಾರತ ಮೂಲದ ಸಚಿವೆಯು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ, ಇದು ನೂತನ ಪ್ರಧಾನಿ ಅವರಿಗೆ ಭಿನ್ನಮತ ಎದುರಾಗುವುದರ ಸಂಕೇತ ಎಂದೂ ವಿಶ್ಲೇಷಿಸಲಾಗುತ್ತಿದೆ.

“ಪ್ರಧಾನಿಯಾಗಿ ಆಯ್ಕೆಯಾದ ಲಿಜ್‌ ಟ್ರಸ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರಿಗೆ ನನ್ನ ಬೆಂಬಲ, ಸಹಕಾರ ಇದ್ದೇ ಇರುತ್ತದೆ. ಆದರೆ, ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಕ್ಷೇತ್ರವಾದ ವಿಥ್ಯಾಮ್‌ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಲೇ ಇರುತ್ತೇನೆ” ಎಂದು ಪ್ರೀತಿ ಪಟೇಲ್‌ ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೂತನ ಪ್ರಧಾನಿಯಾಗಿ ಆಯ್ಕೆಯಾದ ಲಿಜ್‌ ಟ್ರಸ್‌ ಅವರು ಬುಧವಾರ ಸಂಪುಟ ಸಭೆ ನಡೆಸಲಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು, ಆರ್ಥಿಕ ಬಿಕಟ್ಟು ಶಮನಗೊಳಿಸುವ ಯೋಚನೆಯಲ್ಲಿದ್ದಾರೆ. ಇದರ ಮಧ್ಯೆಯೇ ಪ್ರೀತಿ ಪಟೇಲ್‌ ಅವರು ರಾಜೀನಾಮೆ ನೀಡಿದ್ದಾರೆ. ಲಿಜ್‌ ಟ್ರಸ್‌ ಅವರ ಸಂಪುಟದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸದ ಕಾರಣ ಪ್ರೀತಿ ಪಟೇಲ್‌ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೇ ಭಿನ್ನಮತಕ್ಕೂ ಕಾರಣವಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ | Britain PM Race | ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಸೋಲಿಗೆ 10 ಕಾರಣಗಳು

Exit mobile version