ಲಂಡನ್: ಸೆಪ್ಟೆಂಬರ್ ೮ರಂದು ನಿಧನರಾದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ II (Queen Elizabeth II Funeral) ಅವರ ಅಂತ್ಯಕ್ರಿಯೆಯು ಲಂಡನ್‌ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ನೆರವೇರಲಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಜಗತ್ತಿನ ೫೦೦ ನಾಯಕರು ಒಳಗೊಂಡ ಎರಡು ಸಾವಿರ ಗಣ್ಯರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.
ಮೊದಲ ಬಾರಿಗೆ ನೇರಪ್ರಸಾರ
ಇದೇ ಮೊದಲ ಬಾರಿಗೆ ಬ್ರಿಟನ್ ರಾಣಿ ಅಥವಾ ರಾಜರೊಬ್ಬರ ಅಂತ್ಯಕ್ರಿಯೆಯ ನೇರಪ್ರಸಾರ ಮಾಡಲಾಗುತ್ತಿದೆ. ಬಿಬಿಸಿ ಒನ್ ಹಾಗೂ ಬಿಬಿಸಿ ನ್ಯೂಸ್‌ನಲ್ಲಿ ಅಂತ್ಯಸಂಸ್ಕಾರದ ಎಲ್ಲ ಪ್ರಕ್ರಿಯೆಯ ನೇರ ಪ್ರಸಾರ ಇರಲಿದೆ.
೧೦ ಲಕ್ಷ ಜನ ಭಾಗಿ ಸಾಧ್ಯತೆ
ರಾಣಿಯ ಅಂತ್ಯಸಂಸ್ಕಾರ ಇರುವುದರಿಂದ ಸೋಮವಾರ ಲಂಡನ್‌ನಲ್ಲಿ ಸುಮಾರು ೧೦ ಲಕ್ಷ ಜನ ಭಾಗಿಯಾಗುವ ಸಾಧ್ಯತೆ ಇದೆ. ೧೦ ಸಾವಿರ ಪೊಲೀಸರು, ೧,೬೦೦ ಸೇನಾ ಸಿಬ್ಬಂದಿಯನ್ನು ಭದ್ರತೆ, ಜನರ ನಿರ್ಹವಣೆಗಾಗಿ ನೇಮಕ ಮಾಡಲಾಗಿದೆ.
ಅಂತ್ಯಸಂಸ್ಕಾರ ಪ್ರಕ್ರಿಯೆಯ ಸಮಯ (ಭಾರತೀಯ ಕಾಲಮಾನ)
ಬೆಳಗ್ಗೆ 11: ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಕೊನೆಯ ಅವಕಾಶ, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಅಂತಸಂಸ್ಕಾರ ಸಿದ್ಧತೆ ಆರಂಭ
ಮಧ್ಯಾಹ್ನ 12.30: ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಗಣ್ಯರು, ಪ್ರಮುಖ ನಾಯಕರು ಆಸನದಲ್ಲಿ ಕುಳಿತುಕೊಳ್ಳುವ ಪ್ರಕ್ರಿಯೆಗೆ ಚಾಲನೆ
ಮಧ್ಯಾಹ್ನ 3: ಕ್ವೀನ್ ಎಲಿಜಬೆತ್ ಪಾರ್ಥಿವ ಶರೀರ ವೆಸ್ಟ್ ಮಿನಿಸ್ಟರ್ ಹಾಲ್‌ನಿಂದ ಸ್ಟೇಟ್ ಗನ್ ಕ್ಯಾರೇಜ್‌ಗೆ ರವಾನೆ
3.10: ಗಾಳಿಯಲ್ಲಿ ಗುಂಡು ಹಾರಿಸಿ ರಾಣಿಗೆ ಗೌರವ, ರಾಣಿಯ ಎಲ್ಲ ಕುಟುಂಬಸ್ಥರ ಜಮಾವಣೆ
3.30: ವೆಸ್ಟ್ ಮಿಸ್ಟರ್ ಡೀನ್‌ರಿಂದ ಅಂತ್ಯಸಂಸ್ಕಾರ ಪ್ರಕ್ರಿಯೆಗೆ ಚಾಲನೆ
ಸಂಜೆ 4.25: ಎರಡು ನಿಮಿಷ ಮೌನಾಚರಣೆ, ರಾಷ್ಟ್ರಗೀತೆ ಗಾಯನ
4.30: ವೆಲ್ಲಿಂಗ್ಟನ್ ಆರ್ಚ್‌ವರೆಗೆ ಪಾರ್ಥಿವ ಶರೀರದ ಮೆರವಣಿಗೆ, ಕಿಂಗ್, ಅವರ ಪತ್ನಿ ಸೇರಿ ಕುಟುಂಬಸ್ಥರು ಭಾಗಿ
೪.೪೫: ವಿಂಡ್ಸರ್ ಕ್ಯಾಸಲ್‌ಗೆ ಪಾರ್ಥಿವ ಶರೀರ ರವಾನೆ
ರಾತ್ರಿ ೮.೩೦: ಸಮಾಧಿ ಪ್ರಕ್ರಿಯೆ ಆರಂಭ
ರಾತ್ರಿ ೧೨: ಕ್ವೀನ್ ಎಲಿಜಬೆತ್ II ಪತಿ ಕಿಂಗ್ ಜಾರ್ಜ್ VI ಮೆಮೋರಿಯಲ್ ಚಾಪೆಲ್ ಬಳಿ ರಾಣಿಯ ಸಮಾಧಿ
ಇದನ್ನೂ ಓದಿ | Queen Elizabeth’s Death | ಶ್ವಾನ ಪ್ರಿಯೆ ಕ್ವೀನ್ ಎಲಿಜಬೆತ್; ಹನಿಮೂನ್ಗೂ ಹೋಗಿತ್ತು ಒಂದು ನಾಯಿ !