ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth II) ಅವರು ನಿಧನರಾಗಿ ಎರಡು ದಿನ ಕಳೆದಿದ್ದು, ಈಗಾಗಲೇ ಚಾರ್ಲ್ಸ್ III ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ, ಎಲಿಜಬೆತ್ ಅವರ ಅಂತ್ಯಕ್ರಿಯೆ ಯಾವಾಗ ಹಾಗೂ ಎಲ್ಲಿ ನಡೆಯುತ್ತದೆ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಬಕಿಂಗ್‌ಹ್ಯಾಮ್ ಪ್ಯಾಲೇಸ್ ಉತ್ತರ ನೀಡಿದ್ದು, ಸೆಪ್ಟೆಂಬರ್ ೧೯ರಂದು ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಿದೆ.
“ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಸೆ.೧೯ರಂದು ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು” ಎಂದು ಬಕಿಂಗ್‌ಹ್ಯಾಮ್ ಪ್ಯಾಲೇಸ್ ತಿಳಿಸಿದೆ. ೧೯೫೨ರಲ್ಲಿ ಬ್ರಿಟನ್ ರಾಣಿಯಾಗಿ ಆಯ್ಕೆಯಾಗಿದ್ದ ಕ್ವೀನ್ ಎಲಿಜಬೆತ್ ಅವರು ಕಳೆದ ಗುರುವಾರ ನಿಧನರಾಗಿದ್ದಾರೆ. ಇವರ ಅಂತ್ಯಸಂಸ್ಕಾರಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Kohinoor Diamond | ಕೊಹಿನೂರು ವಜ್ರ, ಟಿಪ್ಪು ಉಂಗುರ ಸೇರಿ ಬ್ರಿಟಿಷರು ಹೊತ್ತೊಯ್ದ ವಿಶ್ವದ ಅಮೂಲ್ಯ ವಸ್ತು ಯಾವವು?