Site icon Vistara News

ರಾಮ ಚಂದ್ರ ಪೌಡೇಲ್ ನೇಪಾಳದ ನೂತನ ಅಧ್ಯಕ್ಷ

Ram Chandra Paudel is new president of election

ಕಾಠ್ಮಂಡು, ನೇಪಾಳ: ನೇಪಾಳಿ ಕಾಂಗ್ರೆಸ್ ನಾಯಕ ರಾಮ ಚಂದ್ರ ಪೌಡೇಲ್ (Ram Chandra Paudel) ಅವರು ನೇಪಾಳದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇವರ ವಿರುದ್ಧ ಸಿಪಿಎನ್(ಯುಎಂಎಲ್) ಉಪಾಧ್ಯಕ್ಷ ಸುಭಾಶ್ ಚಂದ್ರ ನೆಂಬಾಂಗ್ (Subash Chandra Nembang) ಅವರು ಸ್ಪರ್ಧಿಸಿದ್ದರು.

ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್(ಮಾವೋವಾದಿ ಸೆಂಟರ್) ಸೇರಿ 8 ಪಕ್ಷಗಳ ಒಮ್ಮತ ಅಭ್ಯರ್ಥಿಯಾಗಿ ಪೌಡೇಲ್ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. 214 ಸಂಸದರು ಮತ್ತು 352 ಅಸೆಂಬ್ಲಿ ಸದಸ್ಯರ ಮತಗಳನ್ನು ಪಡೆದುಕೊಂಡು ಪೌಡೇಲ್ ಅವರು ಜಯಶಾಲಿಯಾಗಿದ್ದಾರೆ.

ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದೂರ್ ದೇವಬಾ ಟ್ವೀಟ್

ನೇಪಾಳದ ಮೂರನೇ ಅಧ್ಯಕ್ಷರಾಗಿ ಆಯ್ಕೆಯಾದ ನನ್ನ ಗೆಳೆಯ ರಾಮಚಂದ್ರ ಪೌಡೇಲ್ ಅವರಿಗೆ ಹಾರ್ದಿಕ ಶುಭಾಶಯಗಳು ಎಂದು ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದೂರ್ ದೇವಬಾ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer | ಹಿಂದು ರಾಷ್ಟ್ರ ನೇಪಾಳದಲ್ಲಿ ಮತಾಂತರ ಮಹಾತ್ಮೆ: 1951ರಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ಇರಲಿಲ್ಲ, ಈಗ 5.45 ಲಕ್ಷ ಕ್ರೈಸ್ತರು! ಒಂದು ದಶಕದಲ್ಲಿ ಶೇ.68 ಏರಿಕೆ

ಅಧ್ಯಕ್ಷರ ಚುನಾವಣೆಯಲ್ಲಿ 882 ಚುನಾಯಿತ ಪ್ರತಿನಿಧಿಗಳ ಮತದಾರ ವರ್ಗವಿತ್ತು. ಈ ಪೈಕಿ 332 ಸಂಸತ್ ಸದಸ್ಯರಾದರೆ, 550 ಅಸೆಂಬ್ಲಿ ಸದಸ್ಯರಾಗಿದ್ದಾರೆ.

Exit mobile version