ನವದೆಹಲಿ: ಬಲ್ಗೇರಿಯಾದ ಬಾಬಾ ವಂಗಾ (Baba Vanga) ಎಂಬ ಅಂಧ ಮಹಿಳೆಯು ಪ್ರತಿ ವರ್ಷ ನುಡಿಯುವ ಭವಿಷ್ಯಕ್ಕೆ ಜಗತ್ತೇ ಕಾಯುತ್ತದೆ. ಇದುವರೆಗೆ ಬಾಬಾ ವಂಗಾ ಅವರು ನುಡಿದ ಭವಿಷ್ಯಗಳಲ್ಲಿ ಶೇ.85ರಷ್ಟು ನಿಜವಾಗಿರುವ ಕಾರಣ ಜಗತ್ತು ಅವರ ಭವಿಷ್ಯಕ್ಕೆ ಕಿವಿಯಾಗುತ್ತದೆ. ಬಾಬಾ ವಂಗಾ ಅವರು 2024ರ ಕುರಿತು ಭವಿಷ್ಯ ನುಡಿದಿದ್ದು, ಹಲವು ದುರಂತಗಳ ಮುನ್ಸೂಚನೆ ನೀಡಿದ್ದಾರೆ.
ಬಾಬಾ ವಂಗಾ ಭವಿಷ್ಯದ ಪ್ರಮುಖಾಂಶಗಳು
- ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಗೆ 2024ರಲ್ಲಿ ಭಾರಿ ಯತ್ನ ನಡೆಯಲಿದೆ
- ಯುರೋಪ್‌ನಲ್ಲಿ ಉಗ್ರರ ದಾಳಿಗಳು ಹೆಚ್ಚಾಗಲಿವೆ. ದೊಡ್ಡ ದೇಶವೊಂದು ಜೈವಿಕ ಸಮರ (ಕೊರೊನಾ ರೀತಿ ವೈರಸ್ ಹರಡುವುದು) ಸಮರ ಸಾರಲಿದೆ.
- ಮುಂದಿನ ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ. ಸಾಲದ ಪ್ರಮಾಣ ಹೆಚ್ಚಾಗುವುದು, ಭೌಗೋಳಿಕ ವಿಷಯಕ್ಕೆ ಬಿಕ್ಕಟ್ಟು ಸೃಷ್ಟಿಯಾಗುತ್ತದೆ.
- ಹವಾಮಾನ ವೈಪರೀತ್ಯಗಳು ಜಗತ್ತನ್ನು ಬಾಧಿಸಲಿವೆ.
- ಪವರ್ ಗ್ರಿಡ್‌ಗಳು, ಅಣೆಕಟ್ಟುಗಳು ಸೇರಿ ಹಲವು ಮೂಲ ಸೌಕರ್ಯಗಳ ಮೇಲೆ ದಾಳಿ. ಸೈಬರ್ ದಾಳಿ ಕೂಡ ಹೆಚ್ಚಾಗಲಿವೆ.
ಸಕಾರಾತ್ಮಕ ಅಂಶಗಳೂ ಇವೆ
ಬಾಬಾ ವಂಗಾ ಅವರು ನುಡಿದ ಈ ಮೇಲಿನ ಅಂಶಗಳೆಲ್ಲ ನಕಾರಾತ್ಮಕ, ದುರಂತಕ್ಕೆ ಸಂಭವಿಸಿವೆ. ಆದರೆ, ಸಕಾರಾತ್ಮಕ ಅಂಶಗಳ ಕುರಿತು ಕೂಡ ಬಾಬಾ ವಂಗಾ ಪ್ರಸ್ತಾಪಿಸಿದ್ದಾರೆ. 2024ರಲ್ಲಿ ಕ್ಯಾನ್ಸರ್, ಅಲ್ಝಿಮರ್ಸ್‌ನಂತಹ ಮಾರಕ ಕಾಯಿಲೆಗಳಿಗೆ ಔಷಧ, ಚಿಕಿತ್ಸೆ ಸಿಗಲಿದೆ ಎಂದಿದ್ದಾರೆ. ಹಾಗೆ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಮಹತ್ವದ ಮುನ್ನಡೆ ಸಿಗಲಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Karnataka Election Results: ಕಾಂಗ್ರೆಸ್‌ಗೆ ಬಹುಮತ; ನಿಜವಾಯ್ತಾ ಬೊಂಬೆ, ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ?
ಬಾಬಾ ವಂಗಾ ನುಡಿದ ಯಾವ ಭವಿಷ್ಯ ನಿಜ?
ಇದಕ್ಕೂ ಮೊದಲು ಬಾಬಾ ವಂಗಾ ಅವರು ನುಡಿದ ಹಲವು ಭವಿಷ್ಯವಾಣಿ ನಿಜವಾಗಿವೆ. ಅಮೆರಿಕದ ಮೇಲೆ ಉಗ್ರರ ದಾಳಿ, ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗುವುದು, ಬ್ರೆಕ್ಸಿಟ್, ಡಯಾನಾ ಸಾವು ಸೇರಿ ಹಲವು ಭವಿಷ್ಯ ನಿಜವಾಗಿವೆ. 1911ರಲ್ಲಿ ಬಾಬಾ ವಂಗಾ ಅವರು ಜನಿಸಿದ್ದಾರೆ ಎಂದು ಹೇಳಲಾಗುತ್ತದೆ. ಅವರು 12ನೇ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ