ಲಂಡನ್: ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾಗಿರುವ ಬ್ರಿಟನ್ ಪ್ರಧಾನಿ ಹುದ್ದೆಗಾಗಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಭಾರತೀಯ ಮೂಲದ ಮಾಜಿ ವಿತ್ತ ಸಚಿವ ರಿಷಿ ಸುನಕ್ (Rishi Sunak) ಅವರು ಆರಂಭಿಕ ಮೇಲುಗೈ ಸಾಧಿಸಿದ್ದಾರೆ. ಮತ್ತೊಂದೆಡೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇಂಗ್ಲೆಂಡ್ ಅನ್ನು ಆರ್ಥಿಕ ದುಃಸ್ಥಿತಿಯಿಂದ ಪಾರು ಮಾಡಲು ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಆರಂಭಿಕ ಮೇಲಗೈ ಪಡೆದುಕೊಂಡಿರುವ ರಿಷಿ ಸುನಕ್ ಅವರಿಗೆ ಕನ್ಸರ್ವೇಟಿವ್ ಪಕ್ಷದ ಕನಿಷ್ಠ 100 ಸಂಸದರ ಬೆಂಬಲ ವ್ಯಕ್ತವಾಗಿದೆ. ಹಾಗಾಗಿ, ಮುಂದಿನ ವಾರ ಅಧಿಕೃತವಾಗಿ ಪಿಎಂ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಪ್ರಕಟಿಸಲಿದ್ದಾರೆ. ಈ ವರೆಗಿನ ಮಾಹಿತಿಯ ಪ್ರಕಾರ, ಈ ಹಿಂದೆ ಮೂರನೇ ಸ್ಥಾನಗಳಿಸಿದ್ದ ಪೆನ್ನಿ ಮೋರ್ಡಾಂಟ್ ಅವರು ಅಧಿಕೃತವಾಗಿಯೇ ಟೋರಿ ಪಕ್ಷದ ನಾಯಕತ್ವದ ರೇಸಿನಲ್ಲಿದ್ದಾರೆ. ಆದರೆ, ಕೆಲವು ಪತ್ರಿಕೆಗಳ ವರದಿಗಳ ಪ್ರಕಾರ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.
ಸಮೀಕ್ಷೆಯಲ್ಲಿ ಸುನಕ್‌ಗೆ ಬಂಬಲ
ರಿಷಿ ಸುನಕ್ ಪರವಾಗಿ ಇಂಗ್ಲೆಂಡ್ ಮತದಾರರು ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ. ಓಪಿನಿಮಯ್ ಕೈಗೊಂಡಿದ್ದ ಸಮೀಕ್ಷೆಯಲ್ಲಿ ಬ್ರಿಟನ್ ಮುಂದಿನ ಪ್ರಧಾನಿಯಾಗಿ ಸುನಕ್ ಅವರನ್ನು ಶೇ.44 ಮತದಾರರು ಇಷ್ಟಪಟ್ಟಿದ್ದಾರೆ. ಶೇ.31ರಷ್ಟು ಮತದಾರರು ಬೋರಿಸ್ ಜಾನ್ಸನ್ ಪರವಾಗಿದ್ದಾರೆ.
ಇದನ್ನೂ ಓದಿ | Britain PM | ಬ್ರಿಟನ್ ಪಿಎಂ ಯಾರು? ಸುನಕ್, ಬೋರಿಸ್, ಪೆನ್ನಿ- ಯಾರು ಹಿತವರು ಈ ಮೂವರೊಳಗೆ!