ಲಂಡನ್: ಕೇವಲ 44 ದಿನ ಪ್ರಧಾನಿಯಾಗಿ ಆಡಳಿತ ನಡೆಸಿದ ಲಿಜ್ ಟ್ರಸ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬ್ರಿಟನ್‌ನ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಅದರಲ್ಲೂ, ಕಳೆದ ಬಾರಿ ಅವಕಾಶ ಕಳೆದುಕೊಂಡ ಭಾರತ ಮೂಲದ ರಿಷಿ ಸುನಕ್ (Rishi Sunak) ಅವರು ಈ ಬಾರಿಯಾದರೂ ಪ್ರಧಾನಿಯಾಗಿ ಆಯ್ಕೆಯಾಗುತ್ತಾರಾ ಎಂಬ ನಿರೀಕ್ಷೆ ಹುಟ್ಟಿದೆ. ಹಾಗೆಯೇ, ರಿಷಿ ಸುನಕ್ ಅವರೇ ಪ್ರಧಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.
ರಿಷಿ ಸುನಕ್ ಅವರು ಸದ್ಯ 142 ಸಂಸದರ ಬೆಂಬಲ ಹೊಂದಿದ್ದಾರೆ. ಸೋಮವಾರ (ಅಕ್ಟೋಬರ್ 24) ಸಂಜೆಯೊಳಗೆ ಪ್ರಧಾನಿ ಹುದ್ದೆ ಸ್ಪರ್ಧಿಗಳಾದ ಬೋರಿಸ್ ಜಾನ್ಸನ್ ಹಾಗೂ ಪೆನ್ನಿ ಮೊರ್ಡೌಂಟ್ ಅವರು 100 ಸದಸ್ಯರ ಬೆಂಬಲ ಪಡೆಯದಿದ್ದರೆ, ಸುನಕ್ ಅವರೇ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ಸದ್ಯ ಜಾನ್ಸನ್ 59 ಹಾಗೂ ಪೆನ್ನಿ 29 ಸಂಸದರ ಬಲ ಹೊಂದಿದ್ದಾರೆ. ಇಬ್ಬರೂ 100 ಶಾಸಕರ ಬೆಂಬಲ ಪಡೆಯದಿದ್ದರೆ ಸುನಕ್ ನಿರಾಯಾಸವಾಗಿ ಪ್ರಧಾನಿಯಾಗಲಿದ್ದಾರೆ.
ಕನ್ಸರ್ವೇಟಿವ್ ಪಕ್ಷದಲ್ಲಿ ಒಟ್ಟು 357 ಸಂಸದರು ಇದ್ದಾರೆ. ಪ್ರಧಾನಿ ಹುದ್ದೆಗೆ ಮೂವರು ಕಣದಲ್ಲಿದ್ದು, ಇಬ್ಬರು ಕನಿಷ್ಠ 100 ಸಂಸದರ ಬೆಂಬಲ ಪಡೆಯದಿದ್ದರೆ, ಹೆಚ್ಚು ಬೆಂಬಲ ಇರುವವರು ಪ್ರಧಾನಿ ಆಗಲಿದ್ದಾರೆ. ಹಾಗೊಂದು ವೇಳೆ ತ್ರಿಕೋನ ಕದನ ನಡೆದು, ಫಲಿತಾಂಶ ಪ್ರಕಟಿಸುವುದು ಕಷ್ಟವಾದರೆ ಪಕ್ಷದ ಆಯ್ದ 1.7 ಲಕ್ಷ ಸದಸ್ಯರು ಮತದಾನದ ಮೂಲಕ ಮುಂದಿನ ಶುಕ್ರವಾರ (ಅಕ್ಟೋಬರ್ 28) ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ.
ಇದನ್ನೂ ಓದಿ | Rishi Sunak | ರಿಷಿ ಸುನಕ್‌ಗೆ 100 ಸಂಸದರ ಬೆಂಬಲ, ಸಮೀಕ್ಷೆಯಲ್ಲೂ ನಂ.1