Site icon Vistara News

Anoushka Sunak Kuchipudi | ಲಂಡನ್‌ನಲ್ಲಿ ಕೇರಳದ ಕೂಚಿಪುಡಿ ನೃತ್ಯ ಮಾಡಿದ ರಿಷಿ ಸುನಕ್‌ ಪುತ್ರಿ

Rishi Sunak Daughter Kuchipudi

ಲಂಡನ್‌: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಬ್ರಿಟನ್‌ನಲ್ಲಿ ನೆಲೆಸಿದರೂ, ಅವರು ಹಾಗೂ ಅವರ ಮಕ್ಕಳು ಭಾರತೀಯತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಇಲ್ಲಿನ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಯನ್ನು ಮರೆಯದೆ, ಅವುಗಳನ್ನು ಪಾಲಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ರಿಷಿ ಸುನಕ್‌ ಪುತ್ರಿ ಅನೌಷ್ಕಾ ಸುನಕ್‌ (Anoushka Sunak Kuchipudi) ಅವರು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇರಳದ ಸಾಂಪ್ರದಾಯಿಕ ‘ಕೂಚಿಪುಡಿ’ ನೃತ್ಯ ಮಾಡಿದ್ದಾರೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ‘ಕೂಚಿಪುಡಿ ನೃತ್ಯೋತ್ಸವ-ರಂಗ್‌ 2022’ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ 9 ವರ್ಷದ ಅನೌಷ್ಕಾ ನೃತ್ಯ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ 4 ವರ್ಷದಿಂದ 85 ವರ್ಷ ವಯೋಮಾನದ ಸುಮಾರು 100 ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನನಗೆ ಭಾರತ, ಕೂಚಿಪುಡಿ ತುಂಬ ಇಷ್ಟ ಎಂದ ಅನೌಷ್ಕಾ

ಕೂಚಿಪುಡಿ ನೃತ್ಯೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನೌಷ್ಕಾ, “ನನಗೆ ಭಾರತ ಹಾಗೂ ಕೂಚಿಪುಡಿ ನೃತ್ಯ ಎಂದರೆ ತುಂಬ ಇಷ್ಟ” ಎಂದಿದ್ದಾರೆ. “ಭಾರತ ಎಂದರೆ ನನ್ನ ಕುಟುಂಬ, ಸಂಸ್ಕೃತಿ, ಆಚಾರ-ವಿಚಾರಗಳ ಸಮ್ಮಿಲನವಾಗಿದೆ. ಪ್ರತಿ ವರ್ಷವೂ ಭಾರತಕ್ಕೆ ಹೋಗುವುದು ಎಂದರೆ ತುಂಬ ಖುಷಿಯಾಗುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Rishi Sunak | ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೈಯಲ್ಲಿ ಪವಿತ್ರ ಕೆಂಪು ದಾರ ಕಲಾವಾ!

Exit mobile version