Site icon Vistara News

Viral Video: ಫ್ಯಾಶನ್​ ಶೋದಲ್ಲಿ ಮಾಡೆಲ್​ ಮೈಮೇಲಿದ್ದ ಜಾಕೆಟ್​ ತೆಗೆದುಹಾಕಿದ ರೋಬೋಟ್​; ಇಷ್ಟವಾಗಿಲ್ಲವೆಂದ ನೆಟ್ಟಿಗರು

Robots stride with models In Fashion Show Video Viral

#image_title

ಸದಾ ಹೊಸದನ್ನು ಪ್ರಯೋಗ ಮಾಡುವ ಅಮೆರಿಕದ ಸೂಪರ್ ಮಾಡೆಲ್​ ಬೆಲ್ಲ ಹಾಡಿದ್ ಅವರು ಪ್ಯಾರಿಸ್​​ನಲ್ಲಿ ನಡೆದ ಕೋಪರ್ನಿ ಫ್ಯಾಷನ್ ಶೋದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಷ್ಟೇ ಗಮನ ಸೆಳೆದಿದ್ದು, ಫ್ಯಾಶನ್​ ಶೋ ವೇದಿಕೆ ಮೇಲಿದ್ದ ಐದು ರೋಬೋಟ್​​ಗಳು. ಆ ರೋಬೋಟ್​ಗಳಿಗೆ ನಾಲ್ಕು ಕಾಲುಗಳು ಇದ್ದವು. ಹಾವಿನ ಹೆಡೆಯಂಥ ಉದ್ದನೆಯ ಮುಖವಿತ್ತು. ನರಿ-ಶ್ವಾನದ ಪ್ರಾಣಿಗಳಂತೆಯೂ ಗೋಚರವಾಗುತ್ತಿದ್ದವು. ಹಳದಿ-ಕಪ್ಪು ಬಣ್ಣದ ಈ ಹಳದಿ-ಕಪ್ಪು ಬಣ್ಣದಲ್ಲಿರುವ ರೋಬೋಟ್​ಗಳು ಜೆಸಿಬಿಯಂತೆಯೂ ಕಾಣುತ್ತಿದ್ದವು. ಅದರ ಬಾಯಿ ದೊಡ್ಡದಾಗುತ್ತಿತ್ತು. ಅದರಲ್ಲೊಂದು ರೋಬೋಟ್​, ರೂಪದರ್ಶಿ ಬೆಲ್ಲ ಹಾಡಿದ್​ ಮೈಮೇಲಿದ್ದ ಕಪ್ಪು ಜಾಕೆಟ್​​ನ್ನು ಕಿತ್ತೆಸೆದಿದೆ. ಅಷ್ಟೇ ಅಲ್ಲ, ಹಾಡಿದ್​ ಅವರು ಶೋದಲ್ಲಿ ಹೆಜ್ಜೆ ಹಾಕುತ್ತ ಹೋಗುತ್ತಿದ್ದಂತೆ ಐದೂ ರೋಬೋಟ್​​ಗಳು ಕುಣಿದಿವೆ. ಈ ವಿಡಿಯೊ ವೈರಲ್ ಆಗಿದ್ದು, ಸಖತ್ ಕ್ಯೂಟ್ ಎನ್ನಿಸಿದೆ.

coperni ಫ್ಯಾಶನ್​ ಬ್ರ್ಯಾಂಡ್ ಈ ಶೋದ ಕೆಲವು ವಿಡಿಯೊ-ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಮನುಷ್ಯರು ಮತ್ತು ಯಂತ್ರಗಳ ನಡುವೆ ಸಾಮರಸ್ಯ ಬೆಳೆಯಬಲ್ಲದು ಎಂಬ ಥೀಮ್ ಇಟ್ಟುಕೊಂಡು ಇದನ್ನು ಮಾಡಲಾಗಿದೆ. ಮಾನವರು ಮತ್ತು ತಂತ್ರಜ್ಞಾನದ ನಡುವಿನ ಸಜಜೀವನವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಆದರೆ ನೆಟ್ಟಿಗರು ಈ ಥೀಮ್​​ನ್ನು ಅಷ್ಟೊಂದು ಇಷ್ಟಪಟ್ಟಿಲ್ಲ. ‘ಈ ರೋಬೋಟ್​​ ಯಂತ್ರಗಳನ್ನು ಪ್ರಚಾರ ಮಾಡಲು ಹೀಗೆಲ್ಲ ಮಾಡುತ್ತಿರುವಂತೆ ಅನ್ನಿಸುತ್ತಿದೆ’ ಎಂದು ಒಬ್ಬರು ಹೇಳಿದ್ದಾರೆ. ಹಾಗೇ, ಇನ್ನೊಬ್ಬರು ಕಮೆಂಟ್ ಮಾಡಿ, ‘ಫ್ಯಾಶನ್​ ಶೋದಲ್ಲಿ ನಿಜಕ್ಕೂ ಇದು ಅಗತ್ಯವಿತ್ತಾ? ಭಯ ಆಗುತ್ತದೆ’ ಎಂಬಿತ್ಯಾದಿ ಕಮೆಂಟ್ ಬರೆದಿದ್ದಾರೆ.

Exit mobile version