ಅಮೆರಿಕ: ಮಾಧ್ಯಮ ಲೋಕದ ಅನಭಿಷಿಕ್ತ ದೊರೆ ರೂಪರ್ಟ್ ಮುರ್ಡೋಕ್(Rupert Murdoch) ತಮ್ಮ 93ನೇ ವಯಸ್ಸಿನಲ್ಲಿ ಐದನೇ ಮದುವೆ ಮಾಡಿಕೊಂಡಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ರಷ್ಯಾ(Russia) ಮೂಲದ 67 ವರ್ಷದ ಎಲೆನಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯ(California)ದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಈ ವಿವಾಹ ಸಮಾರಂಭ ನೆರವೇರಿದೆ. ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಬ್ಬರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಬಹುತೇಕರು ಇದು ಸುಳ್ಳು ಸುದ್ದಿ ಎಂದೇ ನಂಬಿದ್ದರು. ಆದರೆ ಇದೀಗ ಜೂನ್ 1ರಂದು ಈ ಜೋಡಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.
ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ನೂತನ ದಂಪತಿಯ ಸಂಬಂಧವು ಪ್ರಾರಂಭವಾಯಿತು. 1991 ರಲ್ಲಿ ಮಾಸ್ಕೋದಿಂದ ಅಮೆರಿಕಗೆ ವಲಸೆ ಬಂದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞ ಝುಕೋವಾ ಅವರು ಹಿಂದೆ ಬಿಲಿಯನೇರ್ ಇಂಧನ ಹೂಡಿಕೆದಾರ ಅಲೆಕ್ಸಾಂಡರ್ ಝುಕೋವ್ ಅವರನ್ನು ವಿವಾಹವಾಗಿದ್ದರು. ಆಗಾಗ ಇಬ್ಬರು ಕೆಲವು ಪ್ರಸಿದ್ಧ ಹೋಟೆಲ್‌ಗಳು, ಹಾಲಿಡೆ ಡೆಸ್ಟಿನೇಷನ್‌ಗಳಲ್ಲಿ ಕಂಡುಬಂದಿದ್ದರು.
ಆರು ಮಕ್ಕಳನ್ನು ಹೊಂದಿರುವ ರೂಪರ್ಟ್ ಮುರ್ಡೋಕ್ ಮೊದಲಿಗೆ ಆಸ್ಟ್ರೇಲಿಯನ್ ಫ್ಲೈಟ್ ನಲ್ಲಿ ಪರಿಚಾರಿಕೆಯಾಗಿದ್ದ ಪೆಟ್ರಿಷಿಯಾ ಜೊತೆ ಮದುವೆಯಾಗಿದ್ದು, 1960ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಅನ್ನಾ ಎಂಬ ವರದಿಗಾರ್ತಿಯನ್ನು ರೂಪರ್ಟ್ ಮುರ್ಡೂಕ್ ಮದುವೆ ಮಾಡಿಕೊಂಡಿದ್ದು ಅವರೊಂದಿಗೆ ಸುಧೀರ್ಘ 30 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ 1999 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮುರ್ಡೂಕ್ ಅವರ ಮೂರನೇ ಮದುವೆ 2013ರಲ್ಲಿ ಮುರಿದು ಬಿದ್ದಿತ್ತು. ಮಾಡೆಲ್ ಜೆರ್ರಿ ಜೊತೆ ನಾಲ್ಕನೇ ಬಾರಿಗೆ ಮದುವೆಯಾಗಿದ್ದ ರೂಪರ್ಟ್ ಮುರ್ಡೋಕ್ ಬಳಿಕ ವಿಚ್ಛೇದನ ಪಡೆದುಕೊಂಡಿದ್ದು, ವಾಲ್ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ನಂತಹ ಬಹುದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯರಾಗಿರುವ ಮುರ್ಡೋಕ್ ಈಗ ಐದನೇ ಮದುವೆ ಮಾಡಿಕೊಂಡಿದ್ದಾರೆ.
ಯಾರು ಈ ರೂಪರ್ಟ್ ಮುರ್ಡೋಕ್?
ರೂಪರ್ಟ್ ಮುರ್ಡೋಕ್ ದಿ ವಿಲ್ ಸ್ಟ್ರೀಟ್ ಜರ್ನಲ್, ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಪ್ರಸಿದ್ಧ ಸುದ್ದಿ ಮಾಧ್ಯಮಗಳ ಒಡೆಯರಾಗಿದ್ದರು. ಇವರು ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 2022ರಲ್ಲಿ 31ನೇ ಸ್ಥಾನ ಪಡೆದಿದ್ದರು. ರೂಬರ್ಟ್ ಮುರ್ಡೋಕ್ ಅವರ ನಿವ್ವಳ ಆಸ್ತಿ ಮೌಲ್ಯವು 21.7 ಬಿಲಿಯನ್ ಡಾಲರ್ ಆಗಿದೆ. ಆಸ್ಟ್ರೇಲಿಯಾದಲ್ಲಿ 1952 ರಲ್ಲಿ ತನ್ನ ತಂದೆಯಿಂದ ವಾರ್ತಾಪತ್ರಿಕೆಯನ್ನು ಪಡೆದ ಮುರ್ಡೋಕ್ ತನ್ನ ಸಾಮ್ರಾಜ್ಯವನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ಗೂ ವಿಸ್ತರಿಸಿದ್ದರು. ಮುರ್ಡೋಕ್ 1996ರಲ್ಲಿ ಫಾಕ್ಸ್ ನ್ಯೂಸ್ ಚಾನೆಲ್ ಅನ್ನು ಸ್ಥಾಪಿಸಿದರು. ಬಳಿಕ ಫಾಕ್ಸ್ ನ್ಯೂಸ್ ಸಂಸ್ಥೆ ದೊಡ್ಡ ಜಾಲವಾಗಿ ಹರಡಿತು. ಫಾಕ್ಸ್ ನ್ಯೂಸ್‌ನ ಪೋಷಕ ಕಂಪನಿ ಮತ್ತು ನ್ಯೂಸ್ ಕಾರ್ಪೊರೇಷನ್‌ನ ಹುದ್ದೆಗಳಿಂದ ಅವರು ನಿವೃತ್ತಿ ಪಡೆದರು. ಬಳಿಕ ಅವರ ಪುತ್ರ ಲಾಚ್ಲಾನ್ ಮುರ್ಡೋಕ್, ಆಧುನಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ ವ್ಯವಹಾರದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ:Lok Sabha Election 2024: ವಿಜಯೋತ್ಸವಕ್ಕೆ ಬಿಜೆಪಿ ಪ್ಲ್ಯಾನ್ ಹೇಗಿದೆ? ಈಗಿನಿಂದಲೇ ಶುರು ಭರ್ಜರಿ ತಯಾರಿ