Site icon Vistara News

Russian Spy Plane:‌ ಡ್ರೋನ್‌ನಿಂದ ರಷ್ಯಾದ 2,737 ಕೋಟಿ ರೂ. ಮೌಲ್ಯದ ಬೇಹುಗಾರಿಕೆ ವಿಮಾನ ಹೊಡೆದುರುಳಿಸಿದ ಬೆಲಾರಸ್

Russian Spy Plane

Russian Spy Plane

ಮಿನ್‌ಸ್ಕ್‌: ಕೆನಡಾ ಗಡಿಯಲ್ಲಿ ಚೀನಾ ಹಾರಲು ಬಿಟ್ಟಿದ್ದ ಗೂಢಚಾರ (Russian Spy Plane) ಬಲೂನ್‌ಗಳನ್ನು ಅಮೆರಿಕ ಹೊಡೆದುರುಳಿಸಿದ ಬೆನ್ನಲ್ಲೇ ಬೆಲಾರಸ್‌ನಲ್ಲಿ ರಷ್ಯಾದ ಗೂಢಚಾರ ವಿಮಾನವನ್ನು ಡ್ರೋನ್‌ಗಳ ಮೂಲಕವೇ ಹೊಡೆದುರುಳಿಸಲಾಗಿದೆ. ಅದರಲ್ಲೂ, ರಷ್ಯಾದ ೨,೭೩೭ ಕೋಟಿ ರೂ. ಮೌಲ್ಯದ ವಿಮಾನವನ್ನು ಡ್ರೋನ್‌ಗಳ ಮೂಲಕವೇ ಹೊಡೆದುರುಳಿಸುವುದು ಅಚ್ಚರಿ ಮೂಡಿಸಿದೆ.

ಬೆಲಾರಸ್‌ನಲ್ಲಿರುವ ರಷ್ಯಾದ ವಾಯುನೆಲೆಯ ಬಳಿ ಎರಡು ಡ್ರೋನ್‌ಗಳನ್ನು ಬಳಸಿ ದೈತ್ಯ ವಿಮಾನವನ್ನು ಹೊಡೆದುರುಳಿಸಲಾಗಿದೆ. ವಿಮಾನದ ಬಹುತೇಕ ಭಾಗ ಧ್ವಂಸವಾಗಿದೆ. ಸರ್ಕಾರಿ ವಿರೋಧಿ ಕಾರ್ಯಕರ್ಕತರು ಇದನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ. ಇವರು ಉಕ್ರೇನ್‌ಗೆ ಬೆಂಬಲ ಸೂಚಿಸಿದ್ದು, ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ಕಾರಣ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ.

ರಷ್ಯಾದ ವಿಮಾನವನ್ನು ಎಡಬ್ಲ್ಯೂಎಸಿಎಸ್‌ ಬೆರೀವ್‌ ಎ-೫೦ಯು ಎಂಬುದಾಗಿ ಗುರುತಿಸಲಾಗಿದೆ. ಆದಾಗ್ಯೂ, ವಿಮಾನ ಹೊಡೆದುರುಳಿಸಿರುವ ಕುರಿತು ಬೆಲಾರಸ್‌ ಆಗಲಿ, ರಷ್ಯಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಬೆಲಾರಸ್‌ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: China Spy Balloon: ಚೀನಾದ ಸ್ಪೈ ಬಲೂನ್‌ಅನ್ನು ಅಮೆರಿಕ ಹೊಡೆದುರುಳಿಸಿದ್ದು ಹೇಗೆ? ಇಲ್ಲಿದೆ ರೋಚಕ ವಿಡಿಯೊ

Exit mobile version