Site icon Vistara News

Madinah Gold | ಮದೀನಾದಲ್ಲಿ ಚಿನ್ನದ ಉತ್ಖನನಕ್ಕೆ ಸೌದಿ ಆದೇಶ, ಪೆಟ್ರೋಲ್‌ ನಾಡಲ್ಲಿ ಎಷ್ಟಿದೆ ಬಂಗಾರ?

Gold

ಅಬುಧಾಬಿ: ಇದುವರೆಗೆ ಸೌದಿ ಅರೇಬಿಯಾ ಅಂದರೆ ಇಂಧನವನ್ನು ಒಡಲಲ್ಲಿ ಇಟ್ಟುಕೊಂಡಿರುವ ದೇಶ ಎಂಬುದು ಅಷ್ಟೇ ಗೊತ್ತಿತ್ತು. ಆದರೆ, ಮುಸ್ಲಿಮರ ಪವಿತ್ರ ಸ್ಥಳ, ಸೌದಿ ಅರೇಬಿಯಾದ ಮದೀನಾ ಪ್ರದೇಶ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪಗಳು (Madinah Gold) ಇರುವುದು ಪತ್ತೆಯಾಗಿದೆ. ಹಾಗಾಗಿ, ಚಿನ್ನದ ಉತ್ಖನನಕ್ಕೆ ಸೌದಿ ಅರೇಬಿಯಾ ಸರ್ಕಾರ ಆದೇಶಿಸಿದೆ.

ಮೆದೀನಾ ಪ್ರದೇಶದ ಅಬಾ ಅಲ್‌-ರಹಾ ಗಡಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಚಿನ್ನ ಹಾಗೂ ತಾಮ್ರವಿದೆ ಎಂದು ಸೌದಿ ಭೌಗೋಳಿಕ ಸಮೀಕ್ಷೆ ತಿಳಿಸಿದ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಉತ್ಖನನಕ್ಕೆ ಆದೇಶಿಸಿದೆ. ಹಾಗೊಂದು ವೇಳೆ ಉತ್ಖನನದಿಂದ ಅಪಾರ ಪ್ರಮಾಣದ ಚಿನ್ನ ಸಿಕ್ಕರೆ ಸೌದಿ ಅರೇಬಿಯಾದ ಆರ್ಥಿಕತೆ ಮತ್ತಷ್ಟು ಸುಧಾರಿಸಲಿದೆ ಎಂದೇ ಹೇಳಲಾಗುತ್ತಿದೆ.

೫೩೩ ದಶಲಕ್ಷ ಡಾಲರ್‌ ಹೂಡಿಕೆ

ಚಿನ್ನದ ನಿಕ್ಷೇಪದಲ್ಲಿ ಉತ್ಖನನ ಮಾಡಲು ಸೌದಿ ಅರೇಬಿಯಾ ೫೩೩ ದಶಲಕ್ಷ ಡಾಲರ್‌ ಹೂಡಿಕೆ ಮಾಡಲು ಸೌದಿ ಸರ್ಕಾರ ತೀರ್ಮಾನಿಸಿದೆ. ಉತ್ಖನನ ನಿರ್ಧಾರದಿಂದ ೪ ಸಾವಿರ ಜನರಿಗೆ ಉದ್ಯೋಗವೂ ಸಿಗಲಿದೆ. ಹಾಗೆಯೇ, ಚಿನ್ನ ಸಿಕ್ಕರೆ ವಿದೇಶಗಳೂ ಸೌದಿ ಅರೇಬಿಯಾದಲ್ಲಿ ಹೂಡಿಕೆ ಮಾಡಬಹುದಾಗಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ | ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರವಾಗಿ ಹೊರಹೊಮ್ಮಿದ ರಷ್ಯಾ

Exit mobile version