ರಿಯಾಧ್: ಜಗತ್ತಿನಲ್ಲಿ ಹೆಂಡತಿಯರ ಕುರಿತು ಲಕ್ಷಾಂತರ ಹಾಸ್ಯ ಚಟಾಕಿಗಳಿವೆ. ಹೆಂಡತಿ ನಾಲ್ಕು ದಿನ ತವರಿಗೆ ಹೋದರೆ ಖುಷಿ ಪಡುವವರೂ ಇದ್ದಾರೆ. ಪುರುಷರ ಪರಿಸ್ಥಿತಿ ಹೀಗಿರುವಾಗ ಸೌದಿ ಅರೇಬಿಯಾದಲ್ಲೊಬ್ಬ ಭೂಪ, ಕಳೆದ ೪೩ ವರ್ಷದಲ್ಲಿ ೫೩ ಮಹಿಳೆಯರನ್ನು ಮದುವೆಯಾಗುವ (Polygamist) ಮೂಲಕ ಎಲ್ಲ ಪತಿಯರಿಗೂ ಅಚ್ಚರಿ ಮೂಡಿಸಿದ್ದಾನೆ.
ಅಬು ಅಬ್ದುಲ್ಲಾ (೬೩) ಎಂಬಾತನೇ ಸಾಲು ಸಾಲು ಮದುವೆಯಾಗಿ ಖ್ಯಾತಿಯಾಗಿದ್ದಾನೆ. ಈತನನ್ನು ಜನ “ಶತಮಾನದ ಬಹುಪತ್ನಿತ್ವವಾದಿ” (Polygamist of the Century) ಎಂದೇ ಕರೆಯುತ್ತಿದ್ದಾರೆ. ಅಷ್ಟಕ್ಕೂ, ನೀವು ಇಷ್ಟೊಂದು ಮದುವೆಯಾಗಲು ಕಾರಣ ಏನು ಎಂದು ಕೇಳಿದರೆ, “ಮನಸ್ಸಿನ ಶಾಂತಿ ಹಾಗೂ ಸಮಚಿತ್ತತೆಗಾಗಿ ಮದುವೆಯಾಗಿದ್ದೇನೆ” ಎಂದೇ ಹೇಳುತ್ತಾನೆ. ಮತ್ತೂ ಅಚ್ಚರಿ ಮೂಡಿಸುತ್ತಾನೆ.
“ನಾನು ೨೦ ವರ್ಷದವನಾಗಿದ್ದಾಗ ಮೊದಲ ಬಾರಿಗೆ ಮದುವೆಯಾದೆ. ಆಗ, ಮತ್ತೊಂದು ಮದುವೆಯಾಗುವ ಯೋಚನೆ ಮಾಡಿರಲಿಲ್ಲ. ಆದರೆ, ನನ್ನ ಪತ್ನಿ ಜತೆ ಭಿನ್ನಾಭಿಪ್ರಾಯ ಮೂಡಿದಾಗ ಬೇರೆ ಮದುವೆಯಾದೆ. ಇದನ್ನು ಮೊದಲನೇ ಪತ್ನಿಗೂ ಹೇಳಿದೆ. ಆಗ, ಇಬ್ಬರೂ ಜಗಳ ಆಡಲು ಆರಂಭಿಸಿದರು. ನಾನಾಗ, ಮೂರನೇ ಹಾಗೂ ನಾಲ್ಕನೇ ಮದುವೆಯಾದೆ. ಮೊದಲಿನ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದೆ. ಆದರೂ ಮನಸ್ಸಿಗೆ ಶಾಂತಿ ದೊರಕದ ಕಾರಣ ಹೆಚ್ಚೆಚ್ಚು ಮಹಿಳೆಯರನ್ನು ಮದುವೆಯಾದೆ” ಎಂದು ತಿಳಿಸಿದ್ದಾನೆ.
“ಪ್ರತಿಯೊಬ್ಬ ಪುರುಷನೂ ಜೀವಮಾನವಿಡೀ ಪ್ರೀತಿಸುವ, ಕಾಳಜಿ ತೋರುವ, ಆತ್ಮಸಂಗಾತಿಯಾಗಿ ಇರುವ ಮಹಿಳೆಯನ್ನು ಬಯಸುತ್ತಾನೆ. ಅಂತಹವರು ಸಿಗದೆ ಇದ್ದಾಗ ಅನಿವಾರ್ಯವಾಗಿ ಬೇರೆಯವರ ಪ್ರೀತಿಯ ಬಲೆಗೆ ಬೀಳುತ್ತಾನೆ. ಆತ್ಮಶಾಂತಿಯನ್ನು ಹುಡುಕುತ್ತ ಹೊರಡುತ್ತಾನೆ” ಎಂದೂ ಅನುಭವ ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ | HS Prannoy | ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾದ ಬ್ಯಾಡ್ಮಿಂಟನ್ ತಾರೆ ಎಚ್ ಎಸ್ ಪ್ರಣಯ್!