ಬರ್ಲಿನ್: ಜರ್ಮನಿಯ ಮ್ಯಾನ್‌ಹೆಮ್‌ನಲ್ಲಿ ನಡೆದ ಇಸ್ಲಾಂ ಹಿಂಸಾಚಾರ ವಿರೋಧಿ ರ‍್ಯಾಲಿಯಲ್ಲಿ (Anti Islam Rally) ದುಷ್ಕರ್ಮಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ರ‍್ಯಾಲಿಯ ಮಧ್ಯೆ ಏಕಾಏಕಿ ನುಗ್ಗಿ, ಚಾಕು ಇರಿದ ಕಾರಣ ಒಬ್ಬ ಪೊಲೀಸ್ ಅಧಿಕಾರಿ ಸೇರಿ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನಗರದ ಮಾರ್ಕ್ಟ್‌ಪ್ಲಾಟ್ಜ್ ಪ್ರದೇಶದ ಬಳಿ ಇಸ್ಲಾಂ ಹಿಂಸಾಚಾರ ವಿರೋಧಿಸಿ ರ‍್ಯಾಲಿ ನಡೆಯುತ್ತಿರುವಾಗ ದುಷ್ಕರ್ಮಿಯು ದಾಳಿ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ವ್ಯಕ್ತಿಯೊಬ್ಬರು ಸಮಾವೇಶವನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಇಸ್ಲಾಮಿಕ್ ಹಿಂಸಾಚಾರ ಖಂಡಿಸಿ ಅವರು ಭಾಷಣ ಮಾಡುವವರಿದ್ದರು. ಆದರೆ, ಇದೇ ವೇಳೆ ವ್ಯಕ್ತಿಯು ದಾಳಿ ಮಾಡಿದ್ದಾನೆ. ಆತನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಇನ್ನು, ಮತ್ತೊಬ್ಬ ಪೊಲೀಸ್ ಅಧಿಕಾರಿಯು ದುಷ್ಕರ್ಮಿಯ ಮೇಲೆ ಗುಂಡು ಹಾರಿಸುವ ಮೂಲಕ ಆತನನ್ನು ಹಿಡಿದಿದ್ದಾರೆ. ಪೊಲೀಸ್ ಗುಂಡಿನ ದಾಳಿಗೆ ಗಾಯಗೊಂಡಿರುವ ದುಷ್ಕರ್ಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Stabbing frenzy at anti-Islam rally in Germany https://t.co/86Pjlh5gts pic.twitter.com/bKT78Oquev
— Rosalina Kile (@rosalinakile) May 31, 2024
“ಇಸ್ಲಾಂ ವಿರೋಧಿ ರ‍್ಯಾಲಿಯ ವೇಳೆ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿ ಸೇರಿ ಹಲವರ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಹಾಗೊಂದು ವೇಳೆ, ದಾಳಿಯ ಹಿಂದೆ ಇಸ್ಲಾಮಿಕ್ ಕೈವಾಡ ಇದೆ ಎಂಬುದು ಗೊತ್ತಾದರೆ ದೇಶದಲ್ಲಿ ಮತ್ತೊಂದು ಇಸ್ಲಾಮಿಕ್ ಹಿಂಸಾಚಾರ ನಡೆಯಲಿದೆ. ಇಂತಹ ಹಿಂಸಾಚಾರದ ಬಗ್ಗೆ ನಾವು ಮೊದಲಿನಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿದ್ದೇವೆ” ಎಂಬುದಾಗಿ ಜರ್ಮನಿ ಗೃಹ ಸಚಿವ ನ್ಯಾನ್ಸಿ ಫೇಸರ್ ಪ್ರಕಟಣೆ ಹೊರಡಿಸಿದ್ದಾರೆ.
ಇಸ್ಲಾಂ ವಿರೋಧಿ ಹೋರಾಟಗಾರ ಮೈಕೆಲ್ ಸ್ಟುಯೆರ್‌ಜೆನ್‌ಬರ್ಗರ್ ಕರೆ ನೀಡಿದ ಕಾರಣ ನಗರದಲ್ಲಿ ಸಾವಿರಾರು ಜನ ರ‍್ಯಾಲಿಯಲ್ಲಿ ಪಾಲ್ಗೊಂಡರು. ಇಸ್ಲಾಂಅನ್ನು ಟೀಕಿಸುವ ಪತ್ರಕರ್ತ ಎಂದೇ ಕರೆದುಕೊಳ್ಳುವ ಮೈಕೆಲ್ ಸ್ಟುಯೆರ್‌ಜೆನ್‌ಬರ್ಗರ್ ಅವರು ಬಲಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದಾರೆ. ಪೂರ್ವ ಜರ್ಮನಿಯಲ್ಲಿ ಇಸ್ಲಾಂ ಧರ್ಮೀಯರ ಉಪಟಳ ಖಂಡಿಸಿ ಪೆಜಿಡಾ (PEGIDA) ಎಂಬ ಸಂಘಟನೆಯು ನಿಯಮಿತವಾಗಿ ಇಸ್ಲಾಂ ವಿರುದ್ಧ ರ‍್ಯಾಲಿಗಳನ್ನು ನಡೆಸುತ್ತಲೇ ಇರುತ್ತದೆ. ಮೈಕೆಲ್ ಸ್ಟುಯೆರ್‌ಜೆನ್‌ಬರ್ಗರ್ ಈ ಸಂಘಟನೆಯ ಸದಸ್ಯರೂ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!