ಸಿಡ್ನಿ, ಆಸ್ಟ್ರೇಲಿಯಾ: ಸಾಮಾನ್ಯ ಮಹಿಳೆಯರು ಲೈಂಗಿಕ ಶೋಷಣೆಗೆ (Sexually Assault) ಒಳಗಾಗುವುದು ಆಗಾಗ ಕೇಳುತ್ತೇವೆ. ಯಾಕೆಂದರೆ, ಅವರಿಗೆ ಯಾವುದೇ ಭದ್ರತೆಯೇ ಇರುವುದಿಲ್ಲ. ಆದರೆ, ದೇಶದ ಅತ್ಯುನ್ನತ ಸ್ಥಾನ್ಕಕೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರಿಗೇ ಲೈಂಗಿಕ ಕಿರುಕುಳವಾದ್ರೆ? ಹೌದು, ಆಸ್ಟ್ರೇಲಿಯಾದಂಥ (Australia) ಅತ್ಯಂತ ಮುಂದುವರಿದ ದೇಶದಲ್ಲಿ ಮಹಿಳಾ ಜನಪ್ರತಿನಿಧಿಯೊಬ್ಬರು (Australian woman lawmaker) ಸಂಸತ್ತಿನಲ್ಲೇ (Parliament) ಪುರುಷ ಜನಪ್ರತಿನಿಧಿಗಳಿಂದ ಲೈಂಗಿಕ ಶೋಷಣೆಯನ್ನು ಎದುರಿಸಿದ್ದಾರೆ. ಈ ವಿಷಯವನ್ನು ಅವರೇ ಸ್ವತಃ ಹೊರಗೆ ಹಾಕಿದ್ದಾರೆ. ಸೆನೆಟ್ ಉದ್ದೇಶಿಸಿ ಕಣ್ಣೀರು ತುಂಬಿದ ಕಣ್ಣುಗಳಿಂದ ಮಾತನಾಡಿದ ಆಸ್ಟ್ರೇಲಿಯಾ ಸ್ವತಂತ್ರ ಮಹಿಳಾ ಜನಪ್ರತಿನಿಧಿ ಲಿಡಿಯಾ ಥೋರ್ಪ್ (Lidia Thorpe) ಅವರು, ತಾವು ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದನ್ನು ಹೇಳಿಕೊಂಡಿದ್ದಾರೆ. ಮೆಟ್ಟಿಲುಗಳ ಮೇಲೆ ತನ್ನನ್ನು ಮೂಲೆಗೆ ತಳ್ಳಿದ ‘ಪ್ರಭಾವಿ ವ್ಯಕ್ತಿಗಳು’ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಎಲ್ಲೆಂದರಲ್ಲಿ ನನ್ನ ದೇಹವನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಥೋರ್ಪ್ ಬುಧವಾರ ತನ್ನ ಸಹ ಸೆನೆಟರ್ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಸೆನೆಟರ್ ಒಬ್ಬರು “ಲೈಂಗಿಕವಾಗಿ ಹಲ್ಲೆ” ಮಾಡಿದ್ದಾರೆ. ಅಲ್ಲದೇ ಸಂಸತ್ತಿನ ಅನುಮತಿಯ ಬೆದರಿಕೆಯ ಅಡಿಯಲ್ಲಿ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
ಅಂದ ಹಾಗೆ, ಮಹಿಳಾ ಸೆನೆಟರ್ ಥೋರ್ಪ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದು ಕನ್ಸರ್ವೇಟಿವ್ ಡೇವಿಡ್ ವ್ಯಾನ್ ಎಂಬ ಜನಪ್ರತಿನಿಧಿ. ಆದರೆ, ಥೋರ್ಪ್ ಅವರ ಆರೋಪಗಳ್ನು ವ್ಯಾನ್ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಥೋರ್ಪ್ ಅವರ ಆರೋಪಗಳಿಂದ ನಾನು ಕುಗ್ಗಿ ಹೋಗಿದ್ದೇನೆ ಮತ್ತು ಜರ್ಜರಿತನಾಗಿದ್ದೇನೆ. ಈ ವಿಷಯದಲ್ಲಿ ಸ್ಥಳೀಯ ಮಾಧ್ಯಮಗಳೂ ಕೂಡ ಅಸತ್ಯವನ್ನು ಬರೆಯುತ್ತಿವೆ ಎಂದು ಹೇಳಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ವ್ಯಾನ್ ಅವರನ್ನು ಲಿಬರಲ್ ಪಾರ್ಟಿ, ಪಕ್ಷದ ಅವರನ್ನು ಸಸ್ಪೆಂಡ್ ಮಾಡಿದೆ.
ಈ ಸುದ್ದಿಯನ್ನೂ ಓದಿ: Molestation Case: ಬಾಲಕಿಗೆ ಲೈಂಗಿಕ ಕಿರುಕುಳ; ಪೊಲೀಸರ ಅತಿಥಿಯಾದ ಜಿಮ್ನಾಸ್ಟಿಕ್ ಟ್ರೈನರ್
ಆಸ್ಟ್ರೇಲಿಯದ ತೀವ್ರ ಮಾನನಷ್ಟ ಕಾನೂನುಗಳಿಂದ ಆಪಾದನೆಗಳನ್ನು ರಕ್ಷಿಸಲಾಗಿದ್ದರೂ, ವ್ಯಾನ್ ಈ ವಿಷಯದಲ್ಲಿ ವಕೀಲರನ್ನು ನೇಮಿಸಿಕೊಂಡಿದ್ದಾರೆ. ಹಾಗಾಗಿ, ಸಂಸದೀಯ ನಿಯಮಗಳ ಅನುಸಾರ ಈ ಪ್ರಕರಣವನ್ನು ವಿಚಾರಣೆ ನಡೆಸಬೇಕೆಂದು ಥೋರ್ಪ್ ಮತ್ತೊಮ್ಮೆ ಒತ್ತಾಯ ಮಾಡಿದ್ದಾರೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.