Site icon Vistara News

Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್‌ ವಿಡಿಯೋ

Sharia law

ಅಮೆರಿಕ: ಇದೇ ಮೊದಲ ಬಾರಿಗೆ ಷರಿಯಾ ಕಾನೂನು(Sharia Law) ಬಗ್ಗೆ ಅಮೆರಿಕ(America)ದಲ್ಲಿ ದನಿ ಎತ್ತಿ ಎದ್ದಿದೆ. ಮುಂದಿನ ದಿನಗಳಲ್ಲಿ ಷರಿಯಾ ಕಾನೂನನ್ನು ಅಮೆರಿಕನ್ನರ ಮೇಲೆ ಹೇರಲಾಗುವಂತಹ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ರಿಪಬ್ಲಿಕ್‌ ಪಕ್ಷದ ಸದಸ್ಯ ಚಿಪ್‌ ರಾಯ್‌(Rep. Chip Roy) ಕಳವಳ ವ್ಯಕ್ತಪಡಿಸಿದ್ದಾರೆ. ಗಡಿ ಭದ್ರತೆ ಮತ್ತು ವಿದೇಶಿಗರ ನೆಲೆ ಬಗ್ಗೆ ಅಮೆರಿಕ ಸಂಸತ್‌ನಲ್ಲಿ ಪ್ರಸ್ತಾಪಿಸಿದ ರಾಯ್‌, ಷರಿಯಾ ಕಾನೂನುಗಳ ಬಗ್ಗೆ ತಮಗೆ ಕೊಂಚ ಕಳವಳ ಇದ್ದೇ ಇದೆ ಎಂದು ಹೇಳಿದರು. ಇದೀಗ ಅವರ ಈ ವಿಡಿಯೋ ಪ್ರಪಂಚಾದ್ಯಂತ ಬಹಳ ಸದ್ದು ಮಾಡುತ್ತಿದೆ. ಮತ್ತು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್‌(Viral video) ಆಗುತ್ತಿದೆ.

ರಾಯ್‌ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ರಾಯ್‌, ಮುಸ್ಲಿಮರ ಪ್ರತ್ಯೇಕ ಕಾನೂನು ಆಗಿರುವ ಷರಿಯಾ ಕಾನೂನು ಬಗ್ಗೆ ಕಳವಳ ವ್ಯಕ್ತಪಡಿಸಿದರು. ಯಾರಾದಾರೂ ಇಂಗ್ಲೆಂಡ್‌ನಲ್ಲಿ ಏನಾಗ್ತಿದೆ ಎಂಬುದನ್ನು ಗಮನಿಸುತ್ತಿದ್ದೀರಾ? ಅಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಬಂದು ನೆಲೆಸಿದ್ದಾರೆ. ಅಲ್ಲಿ ನೆಲೆವೂರಿರುವ ಅವರು ಏನು ಮಾಡುತ್ತಿದ್ದಾರೆ ಗೊತ್ತೇ? ಅಲ್ಲಿ ಇಸ್ರೇಲ್‌ ವಿರುದ್ಧ ಏನಾದರೂ ಘಟನೆಗಳು ನಡೆದಾಗ ಅದನ್ನು ಸಂಭ್ರಮಿಸುತ್ತಾರೆ. ನೂತನವಾಗಿ ಚುನಾಯಿತನಾಗಿರುವ ಅಲ್ಲಿನ ಸಂಸತ್‌ ಸದಸ್ಯ ಮೋತಿನ್‌ ಅಲಿ ಕೂಡ ಅವರಿಗೆ ಬೆಂಬಲ ನೀಡುತ್ತಾರೆ. ಇಂತಹ ಸ್ಥಿತಿ ಅಮೆರಿಕದಲ್ಲೂ ಬರಬಹುದೆಂಬ ಆತಂಕ ನನಗಿದೆ ಎಂದು ಹೇಳಿದರು. ಅಲಿ ತಮ್ಮ ಗೆಲುವಿನ ಬೆನ್ನಲ್ಲೇ ಪ್ಯಾಲೆಸ್ತೀನ್‌ ಧ್ವಜ ಹಿಡಿ ಅಲ್ಲಾಹು ಅಕ್ಬರ್‌ ಎಂಬು ಘೋಷಣೆ ಕೂಗುತ್ತಾ, ಇದು ಗಾಜಾ ಜನರ ಗೆಲವು ಎಂದು ಹೇಳಿದ್ದರು. ಈ ವಿಡಿಯೋ ಬಹಳ ವೈರಲ್‌ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಯ್‌, ಶೀಘ್ರದಲ್ಲೇ ಅಮೆರಿಕಕ್ಕೆ ಇಂತಹ ಸ್ಥಿತಿ ಬರುತ್ತದೆ ಎಂದು ಬರೆದುಕೊಳ್ಳುವ ಮೂಲ ಗಮನ ಸೆಳೆದಿದ್ದರು. ಇದಾದ ಬಳಿಕ ಅಲಿ ಕ್ಷಮೆಯನ್ನೂ ಯಾಚಿಸಿದ್ದರು. ಇದೇ ವಿಚಾರವನ್ನು ಪ್ರಸ್ತಾಪಿಸಿ ರಾಯ್‌ ಸಂಸತ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ನಂತರ ಅವರು ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆ ಪ್ರಸ್ತಾಪಿಸಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಕ್ಕೆ ವಿದೇಶಿಗರು ವಲಸೆ ಬರುತ್ತಿದ್ದಾರೆ. ವಿದೇಶಿಗರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಏರಿಕೆ ಆಗುತ್ತಿದೆ. ನಮ್ಮಲ್ಲಿ 51.5 ಮಿಲಿಯನ್‌ ವಿದೇಶಿ ಮೂಲದ ಪ್ರಜೆಗಳಿದ್ದಾರೆ. ಅವರಿಗೆ 20 ರಿಂದ 25 ಮಿಲಿಯನ್‌ ಮಕ್ಕಳಿವೆ. ನಮ್ಮ ಜನಸಂಖ್ಯೆಗಿಂತಲೂ ಅವರ ಜನಸಂಖ್ಯೆ ಶೇ.20ಕ್ಕಿಂತ ಹೆಚ್ಚಿದೆ. ಇದು ಖುಷಿ ವಿಚಾರವೇ? ಎಂದು ಅವರು ಪ್ರಶ್ನಿಸಿದ್ದಾರೆ. ಚಿಪ್‌ ರಾಯ್‌ ಈ ಹೇಳಿಕೆ ಇಡೀ ಪ್ರಪಂಚದ ಗಮನ ಸೆಳೆದಿದ್ದು, ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

ಯಾರು ಈ ಚಿಪ್‌ ರಾಯ್‌?

ಚಾರ್ಲ್ಸ್ ಯುಜೀನ್ ” ಚಿಪ್ ” ರಾಯ್ ಒಬ್ಬ ಅಮೇರಿಕನ್ ವಕೀಲ ಮತ್ತು ರಾಜಕಾರಣಿಯಾಗಿದ್ದು ಟೆಕ್ಸಾಸ್‌ನ US ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ . ರಿಪಬ್ಲಿಕನ್ ಪಕ್ಷದ ಸದಸ್ಯ , ರಾಯ್ ಜನವರಿ 3, 2019 ರಂದು ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್‌ಗೆ ಆಯ್ಕೆಯಾಗುವ ಮೊದಲು, ಅವರು ಸೆನೆಟರ್ ಟೆಡ್ ಕ್ರೂಜ್‌ಗೆ ಸಿಬ್ಬಂದಿ ಮುಖ್ಯಸ್ಥರಾಗಿ ಮತ್ತು ಟೆಕ್ಸಾಸ್‌ನ ಮೊದಲ ಸಹಾಯಕ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದರು. ಹೌಸ್ ಫ್ರೀಡಂ ಕಾಕಸ್‌ನ ಸದಸ್ಯ ಮತ್ತು ನೀತಿ ಅಧ್ಯಕ್ಷರಾದ ರಾಯ್ ಅವರನ್ನು ಹೌಸ್ ರಿಪಬ್ಲಿಕನ್ ಕಾನ್ಫರೆನ್ಸ್‌ನ ಬಲಪಂಥೀಯ ಬಣದ ಸದಸ್ಯ ಎಂದು ಪರಿಗಣಿಸಲಾಗಿದೆ .

Exit mobile version