ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು (Israel Palestine War) 10ನೇ ದಿನಕ್ಕೆ ಕಾಲಿಟ್ಟಿದೆ. ಒಂದೆಡೆ, ಗಾಜಾ ನಗರದ (Gaza City) ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್ ಸೇನೆಯು ಗಾಜಾ ಗಡಿಯಲ್ಲಿ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಮತ್ತೊಂದೆಡೆ, ಪ್ರಮುಖ ಕಮಾಂಡರ್‌ಗಳ ಹತ್ಯೆಯ ಬಳಿಕ ಕುತ್ಸಿತಗೊಂಡಿರುವ ಹಮಾಸ್ ಉಗ್ರರು (Hamas Terrorists) ಇಸ್ರೇಲ್‌ನಲ್ಲಿ ಮನೆ ಮನೆಗೆ ನುಗ್ಗಿ ಜನರನ್ನು ಹತ್ಯೆ ಮಾಡುತ್ತಿದ್ದಾರೆ.
ಹಮಾಸ್ ಉಗ್ರರು ಇಸ್ರೇಲ್ ಗಡಿಯೊಳಗೆ ನುಗ್ಗಿ, ಬೈಕ್‌ಗಳನ್ನು ಹತ್ತಿ ಎಲ್ಲೆಂದರಲ್ಲಿ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ಮಕ್ಕಳು, ಹೆಣ್ಣುಮಕ್ಕಳು, ಹಿರಿಯರು ಸೇರಿ ಎಲ್ಲರ ಮೇಲೂ ಗುಂಡು ಹಾರಿಸಿದ್ದಾರೆ. ಮನೆಯಲ್ಲಿ ಒಬ್ಬರೂ ಜೀವಂತವಾಗಿ ಉಳಿದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಬಳಿಕವೇ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ಮನೆ ಮನೆಗೆ ದಾಳಿ ಮಾಡಿ, ಗುಂಡು ಹಾರಿಸಿದ ವಿಡಿಯೊವನ್ನು ಇಸ್ರೇಲ್ ಡಿಫೆನ್ಸ್ ಫೋರ್ಸಸ್ (Israel Defence Forces) ಹಂಚಿಕೊಂಡಿದೆ.
⚠️Trigger Warning ⚠️
— Israel Defense Forces (@IDF) October 15, 2023
RAW FOOTAGE: Hamas jihadists squad invasion and killing spree of an innocent Israeli community.
The filmed terrorist was neutralized by Israeli security forces. pic.twitter.com/4sKuxl9uRq
ಗಾಜಾ ನಗರದ ಮೇಲೆ ಎರಗಲು ಇಸ್ರೇಲ್ ಸಜ್ಜು
ಹಮಾಸ್ ಉಗ್ರರ ನೆಲೆವೀಡಾಗಿರುವ ಗಾಜಾ ನಗರದ ಮೇಲೆ ಸಂಪೂರ್ಣವಾಗಿ ದಾಳಿ ನಡೆಸಲು ಇಸ್ರೇಲ್ ಸೇನೆ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಗಾಜಾ ನಗರ ಬಿಟ್ಟು ಹೊರಡಿ ಎಂದು ನಾಗರಿಕರಿಗೆ ಇಸ್ರೇಲ್ ನೀಡಿದ ಗಡುವು ಮುಗಿದಿದ್ದು, ಪೂರ್ಣ ಪ್ರಮಾಣದ ದಾಳಿ ನಡೆಸಲು ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಡಿಯಲ್ಲಿ ಸಜ್ಜಾಗಿವೆ. ಯಾವ ಕ್ಷಣದಲ್ಲಿ ಬೇಕಾದರೂ ಗಾಜಾ ನಗರದ ಮೇಲೆ ಇಸ್ರೇಲ್ ಸೈನಿಕರು ದಾಳಿ ಆರಂಭಿಸಬಹುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Israel Palestine War: ರಣಬೇಟೆಗಾರ ಇಸ್ರೇಲ್; ಹಮಾಸ್ 3 ಕಮಾಂಡರ್‌ಗಳ ಉಡೀಸ್!
ಪೂರ್ಣ ಪ್ರಮಾಣದ ದಾಳಿ ಬೇಡವೆಂದ ಬೈಡೆನ್
ಗಾಜಾ ನಗರದ ಮೇಲೆ ಇಸ್ರೇಲ್ ಪೂರ್ಣ ಪ್ರಮಾಣದ ದಾಳಿ ಮಾಡುವುದರ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆತಂಕ ವ್ಯಕ್ತಪಡಿಸಿದ್ದಾರೆ. “ಇಡೀ ನಗರದ ಮೇಲೆ ದಾಳಿ ನಡೆಸಿದರೆ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಸಾವಿಗೀಡಾಗುತ್ತಾರೆ. ಹಮಾಸ್ ಉಗ್ರರನ್ನು ಮಟ್ಟಹಾಕುವುದಕ್ಕೂ, ಜನರನ್ನು ಹತ್ಯೆ ಮಾಡುವುದಕ್ಕೂ ವ್ಯತ್ಯಾಸವಿದೆ” ಎಂದು ಜೋ ಬೈಡೆನ್ ಹೇಳಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ಬಳಿಕ ಅಮೆರಿಕವು ಇಸ್ರೇಲ್‌ಗೆ ಬೆಂಬಲ ನೀಡಿದೆ. ಶಸ್ತ್ರಾಸ್ತ್ರಗಳನ್ನು ಕೂಡ ಅಮೆರಿಕವು ಇಸ್ರೇಲ್‌ಗೆ ಕಳುಹಿಸಿದೆ.