ಒಟ್ಟಾವಾ: ಮಕ್ಕಳಿಗಾಗಿ ವಿಶೇಷ ತಿಂಡಿ ತಿನಿಸು ತಯಾರಿಸುವ ತಾಯಿಯರನ್ನು ನೋಡಿರುತ್ತೀರಿ. ಆದರೆ ಕೆನಡಾದ ಈ ತಾಯಿಯೊಬ್ಬರು ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್(Sikh Helmet) ತಯಾರಿಸಿದ್ದಾರೆ. ಆ ಹೆಲ್ಮೆಟ್ ಈಗ ಮಾರುಕಟ್ಟೆಗೂ ಪ್ರವೇಶಿಸುತ್ತಿದ್ದು, ಭಾರೀ ಬೇಡಿಕೆಯನ್ನೂ ಪಡೆದುಕೊಂಡಿದೆ.
ಇದನ್ನೂ ಓದಿ: Jagdish Tytler | ಟೀಕೆ ಹಿನ್ನೆಲೆ ಭಾರತ್ ಜೋಡೋ ಯಾತ್ರೆಯಿಂದ ಹಿಂದೆ ಸರಿದ ಸಿಖ್ ವಿರೋಧಿ ದಂಗೆ ಆರೋಪಿ ಟೈಟ್ಲರ್
ಕೆನಡಾದಲ್ಲಿರುವ ಟೀನಾ ಸಿಂಗ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಮಗ ಜೋರಾ ಐದು ವರ್ಷದವರಿದ್ದಾಗ ಆಸೆಯಿಂದ ಸೈಕಲ್ ಓಡಿಸುತ್ತಿದ್ದ. ಆತನಿಗೆ ಯಾವ ಹೆಲ್ಮೆಟ್ ಹಾಕಿದರೂ ಸರಿಹೊಂದುತ್ತಿರಲಿಲ್ಲ. ಸಿಖ್ ಧರ್ಮದವರಾಗಿರುವುದರಿಂದ ಕೂದಲು ಕತ್ತರಿಸದೆ ಟರ್ಬನ್ ಧರಿಸುವುದು ಅವರ ಸಂಪ್ರದಾಯವಾಗಿತ್ತು. ಹಾಗೆ ಟರ್ಬನ್ ಧರಿಸಿದಾಗ ಹೆಲ್ಮೆಟ್ ಸರಿಯಾಗಿ ಕೂರುತ್ತಿರಲಿಲ್ಲವಂತೆ. ಹೆಲ್ಮೆಟ್ ಒಳಗಿದ್ದ ಸ್ಪಾಂಜನ್ನೆಲ್ಲ ತೆಗೆದು ಹಾಕಿದರೂ ಅದರು ಸರಿಯಾಗುತ್ತಿರಲಿಲ್ಲವಂತೆ. ದಪ್ಪನೆಯ ಸ್ಪಾಂಜ್ ಇರುವ ಹೆಲ್ಮೆಟ್ ಧರಿಸುವುದೇ ತಲೆಯ ರಕ್ಷಣೆಯ ದೃಷ್ಟಿಯಲ್ಲಿ. ಆದರೆ ಸ್ಪಾಂಜ್‌ನ್ನೆಲ್ಲ ತೆಗೆಯುತ್ತಿದ್ದುದ್ದರಿಂದ ಅದು ಅಷ್ಟೊಂದು ಸುರಕ್ಷಿತ ಎನಿಸುತ್ತಿರಲಿಲ್ಲವಂತೆ.
ಇದನ್ನೂ ಓದಿ: Jagdish Tytler | ಸಿಖ್ ವಿರೋಧಿ ದಂಗೆ ಆರೋಪಿ ಜಗದೀಶ್ ಟೈಟ್ಲರ್‌ಗೆ ಚುನಾವಣೆ ಸಮಿತಿ ಹುದ್ದೆ ನೀಡಿದ ಕಾಂಗ್ರೆಸ್
ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿರುವ ಟೀನಾ ಅವರಿಗೆ ಮಗನ ಸುರಕ್ಷತೆಯ ಬಗ್ಗೆ ಯೋಚನೆ ಶುರುವಾಯಿತಂತೆ. ಹಾಗಾಗಿ ಅವರು ಮಗನಿಗಾಗಿಯೇ ವಿಶೇಷ ಹೆಲ್ಮೆಟ್ ತಯಾರಿಸುವುದಕ್ಕೆ ನಿರ್ಧರಿಸಿದ್ದಾರೆ. ಟರ್ಬನ್‌ಗೂ ಜಾಗ ಕಲ್ಪಿಸಿಕೊಡುವಂತಹ ಹೆಲ್ಮೆಟ್‌ನ್ನು ತಯಾರಿಸಿದ್ದಾರೆ. ಆ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಹಲವಾರು ಜನರು ತಮಗೂ ಇದೇ ರೀತಿಯ ಹೆಲ್ಮೆಟ್ ತಯಾರಿಸಿಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಬೇಡಿಕೆ ಹೆಚ್ಚಾದ ನಂತರ ಮಗನಿಗಾಗಿ ತಯಾರಿಸಿದ್ದ ಹೆಲ್ಮೆಟ್ ಅನ್ನೇ ಬಿಸಿನೆಸ್ ಆಗಿ ಮಾಡಿಕೊಂಡಿದ್ದಾರೆ ಟೀನಾ. 2023ರಲ್ಲಿ ಈ ಸಿಖ್ ಹೆಲ್ಮೆಟ್ ಮಾರುಕಟ್ಟೆಗೆ ಬರಲಿದೆ.