Sikh Helmet | ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್‌ ತಯಾರಿಸಿದ ತಾಯಿ! ಈ ಹೆಲ್ಮೆಟ್‌ಗೀಗ ಎಲ್ಲಿಲ್ಲದ ಬೇಡಿಕೆ - Vistara News

ವಿದೇಶ

Sikh Helmet | ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್‌ ತಯಾರಿಸಿದ ತಾಯಿ! ಈ ಹೆಲ್ಮೆಟ್‌ಗೀಗ ಎಲ್ಲಿಲ್ಲದ ಬೇಡಿಕೆ

ಸಿಖ್‌ ಧರ್ಮದ ತಾಯಿಯಾದ ಟೀನಾ ಸಿಂಗ್‌ ತಮ್ಮ ಮಗನಿಗಾಗಿ ವಿಶೇಷ ಹೆಲ್ಮೆಟ್‌(Sikh Helmet) ತಯಾರಿಸಿದ್ದಾರೆ. ಟರ್ಬನ್‌ ಹಾಕಿದವರಿಗೆ ಸರಿಹೊಂದುವಂತೆ ಮಾಡಿರುವ ಈ ಹೆಲ್ಮೆಟ್‌ ಇದೀಗ ಮಾರುಕಟ್ಟೆಗೂ ಪ್ರವೇಶಿಸಲು ಸಿದ್ಧವಾಗಿದ್ದು, ಭಾರೀ ಬೇಡಿಕೆ ಪಡೆದುಕೊಂಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಟ್ಟಾವಾ: ಮಕ್ಕಳಿಗಾಗಿ ವಿಶೇಷ ತಿಂಡಿ ತಿನಿಸು ತಯಾರಿಸುವ ತಾಯಿಯರನ್ನು ನೋಡಿರುತ್ತೀರಿ. ಆದರೆ ಕೆನಡಾದ ಈ ತಾಯಿಯೊಬ್ಬರು ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್‌(Sikh Helmet) ತಯಾರಿಸಿದ್ದಾರೆ. ಆ ಹೆಲ್ಮೆಟ್‌ ಈಗ ಮಾರುಕಟ್ಟೆಗೂ ಪ್ರವೇಶಿಸುತ್ತಿದ್ದು, ಭಾರೀ ಬೇಡಿಕೆಯನ್ನೂ ಪಡೆದುಕೊಂಡಿದೆ.

ಇದನ್ನೂ ಓದಿ: Jagdish Tytler | ಟೀಕೆ ಹಿನ್ನೆಲೆ ಭಾರತ್‌ ಜೋಡೋ ಯಾತ್ರೆಯಿಂದ ಹಿಂದೆ ಸರಿದ ಸಿಖ್‌ ವಿರೋಧಿ ದಂಗೆ ಆರೋಪಿ ಟೈಟ್ಲರ್

ಕೆನಡಾದಲ್ಲಿರುವ ಟೀನಾ ಸಿಂಗ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಮಗ ಜೋರಾ ಐದು ವರ್ಷದವರಿದ್ದಾಗ ಆಸೆಯಿಂದ ಸೈಕಲ್‌ ಓಡಿಸುತ್ತಿದ್ದ. ಆತನಿಗೆ ಯಾವ ಹೆಲ್ಮೆಟ್‌ ಹಾಕಿದರೂ ಸರಿಹೊಂದುತ್ತಿರಲಿಲ್ಲ. ಸಿಖ್‌ ಧರ್ಮದವರಾಗಿರುವುದರಿಂದ ಕೂದಲು ಕತ್ತರಿಸದೆ ಟರ್ಬನ್‌ ಧರಿಸುವುದು ಅವರ ಸಂಪ್ರದಾಯವಾಗಿತ್ತು. ಹಾಗೆ ಟರ್ಬನ್‌ ಧರಿಸಿದಾಗ ಹೆಲ್ಮೆಟ್‌ ಸರಿಯಾಗಿ ಕೂರುತ್ತಿರಲಿಲ್ಲವಂತೆ. ಹೆಲ್ಮೆಟ್‌ ಒಳಗಿದ್ದ ಸ್ಪಾಂಜನ್ನೆಲ್ಲ ತೆಗೆದು ಹಾಕಿದರೂ ಅದರು ಸರಿಯಾಗುತ್ತಿರಲಿಲ್ಲವಂತೆ. ದಪ್ಪನೆಯ ಸ್ಪಾಂಜ್‌ ಇರುವ ಹೆಲ್ಮೆಟ್‌ ಧರಿಸುವುದೇ ತಲೆಯ ರಕ್ಷಣೆಯ ದೃಷ್ಟಿಯಲ್ಲಿ. ಆದರೆ ಸ್ಪಾಂಜ್‌ನ್ನೆಲ್ಲ ತೆಗೆಯುತ್ತಿದ್ದುದ್ದರಿಂದ ಅದು ಅಷ್ಟೊಂದು ಸುರಕ್ಷಿತ ಎನಿಸುತ್ತಿರಲಿಲ್ಲವಂತೆ.

ಇದನ್ನೂ ಓದಿ: Jagdish Tytler | ಸಿಖ್‌ ವಿರೋಧಿ ದಂಗೆ ಆರೋಪಿ ಜಗದೀಶ್‌ ಟೈಟ್ಲರ್‌ಗೆ ಚುನಾವಣೆ ಸಮಿತಿ ಹುದ್ದೆ ನೀಡಿದ ಕಾಂಗ್ರೆಸ್

ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿರುವ ಟೀನಾ ಅವರಿಗೆ ಮಗನ ಸುರಕ್ಷತೆಯ ಬಗ್ಗೆ ಯೋಚನೆ ಶುರುವಾಯಿತಂತೆ. ಹಾಗಾಗಿ ಅವರು ಮಗನಿಗಾಗಿಯೇ ವಿಶೇಷ ಹೆಲ್ಮೆಟ್‌ ತಯಾರಿಸುವುದಕ್ಕೆ ನಿರ್ಧರಿಸಿದ್ದಾರೆ. ಟರ್ಬನ್‌ಗೂ ಜಾಗ ಕಲ್ಪಿಸಿಕೊಡುವಂತಹ ಹೆಲ್ಮೆಟ್‌ನ್ನು ತಯಾರಿಸಿದ್ದಾರೆ. ಆ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್‌ ಆಗಿದೆ. ಹಲವಾರು ಜನರು ತಮಗೂ ಇದೇ ರೀತಿಯ ಹೆಲ್ಮೆಟ್‌ ತಯಾರಿಸಿಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಬೇಡಿಕೆ ಹೆಚ್ಚಾದ ನಂತರ ಮಗನಿಗಾಗಿ ತಯಾರಿಸಿದ್ದ ಹೆಲ್ಮೆಟ್‌ ಅನ್ನೇ ಬಿಸಿನೆಸ್‌ ಆಗಿ ಮಾಡಿಕೊಂಡಿದ್ದಾರೆ ಟೀನಾ. 2023ರಲ್ಲಿ ಈ ಸಿಖ್‌ ಹೆಲ್ಮೆಟ್‌ ಮಾರುಕಟ್ಟೆಗೆ ಬರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

US Presidential Election: ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಟೆಡ್‌ ಕ್ರೂಸ್‌ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಂದು ನಡೆದ ಬೃಹತ್‌ ಚರ್ಚೆಯನ್ನು ಗಮನಿಸಿದರೆ ಡೆಮಾಕ್ರಟಿಕ್‌ ಪಕ್ಷವು ತನ್ನ ಅಭ್ಯರ್ಥಿಯಾಗಿರುವ ಜೋ ಬೈಡೆನ್‌ ಅವರನ್ನು ಕೈಬಿಟ್ಟು ಅವರ ಬದಲಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನು ನಾನು ಒಂಬತ್ತು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದ್ದಾರೆ.

VISTARANEWS.COM


on

US Presidential Election
Koo

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ(US Presidential Election) ರಂಗೇರಿದೆ. ಇದರ ಮೊದಲ ಭಾಗವಾಗಿ ಕಣದಲ್ಲಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ (Joe Biden) ಮತ್ತು ಅವರ ಪ್ರತಿ ಸ್ಪರ್ಧಿ, ರಿಪಬ್ಲಿನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಈ ಚರ್ಚೆ ಪೂರ್ಣಗೊಳ್ಳುತ್ತಿದ್ದಂತೆ ಡೆಮಾಕ್ರಟಿಕ್‌ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಿಸುತ್ತದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೋ ಬೈಡೆನ್‌ ಅವರ ಬದಲಿಗೆ ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಶೆಲ್‌ ಒಬಾಮಾ ಅವರ ಹೆಸರು ಬಹಳ ಕೇಳಿ ಬರುತ್ತಿದೆ.

ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಟೆಡ್‌ ಕ್ರೂಸ್‌ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಂದು ನಡೆದ ಬೃಹತ್‌ ಚರ್ಚೆಯನ್ನು ಗಮನಿಸಿದರೆ ಡೆಮಾಕ್ರಟಿಕ್‌ ಪಕ್ಷವು ತನ್ನ ಅಭ್ಯರ್ಥಿಯಾಗಿರುವ ಜೋ ಬೈಡೆನ್‌ ಅವರನ್ನು ಕೈಬಿಟ್ಟು ಅವರ ಬದಲಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನು ನಾನು ಒಂಬತ್ತು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದ್ದಾರೆ.

ಟ್ರಂಪ್‌ ವಿರುದ್ಧ ಬೈಡೆನ್‌ ಪ್ರಬಲ ಅಸ್ತ್ರ

ಟ್ರಂಪ್‌ರನ್ನು ಲೂಸರ್‌ ಎಂದು ಕರೆದಿರುವ ಬೈಡೆನ್‌, ಇರಾಕ್‌ನಲ್ಲಿರುವ ಅಮೆರಿಕ ಸೇನೆಯಲ್ಲಿ ಕರ್ತವ್ಯ ನಿರ್ಹಿಸಿ ಹುತಾತ್ಮನಾದ ತಮ್ಮ ಪುತ್ರ ಬ್ಯೂ ಬಗ್ಗೆ ಪ್ರಸ್ತಾಪಿಸಿದರು. ನನ್ನ ಪುತ್ರ ಧೀರ, ಧೈರ್ಯಶಾಲಿ. ಆದರೆ ಟ್ರಂಪ್‌ ಒಬ್ಬ ಲೂಸರ್‌, ಅಮಾಯಕರ ರಕ್ತ ಹೀರುವವರು ಎಂದು ಕಿಡಿ ಕಾರಿದರು.

ಉಕ್ರೇನ್‌ ದಾಳಿ ವಿಚಾರವನ್ನು ಮುಂದಿಟ್ಟುಕೊಂಡು ಬೈಡೆನ್‌ಗೆ ಟಾಂಗ್‌ ಕೊಟ್ಟ ಟ್ರಂಪ್‌, ನೀವು ನಿಜವಾಗಿಯೂ ಒಬ್ಬರು ಉತ್ತಮ ಅಧ್ಯಕ್ಷರಾಗಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್‌ ತಮ್ಮ ಬಗ್ಗೆ ಗೌರವ ಹೊಂದಿದ್ದರೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ ನಡೆಯುತ್ತಿರಲಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಬೈಡೆನ್‌, ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವೇ ಆಗುತ್ತಿಲ್ಲ ಎಂದರು.

ತಾವು ಅಧ್ಯಕ್ಷರಾಗಿದ್ದರೆ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಅನ್ನು ಎಂದಿಗೂ ಆಕ್ರಮಿಸುತ್ತಿರಲಿಲ್ಲ. ಬೈಡೆನ್‌ ಪ್ಯಾಲೆಸ್ತೀನಿಯನ್‌ ನಂತೆ ವರ್ತಿಸುತ್ತಿದ್ದಾರೆ. ಆದರೆ ಅವರು ಅವನನ್ನು ಇಷ್ಟಪಡುವುದಿಲ್ಲ ಏಕೆಂದರೆ ಅವರು ತುಂಬಾ ಕೆಟ್ಟ ಪ್ಯಾಲೆಸ್ತೇನಿಯನ್‌. ಅವರು ದುರ್ಬಲರು, ”ಎಂದು ಟ್ರಂಪ್ ಬಿಡೆನ್ ಬಗ್ಗೆ ಹೇಳಿದರು.

ಬೈಡೆನ್‌ ಅವರು ಚೀನಾದೊಂದಿಗೆ ವ್ಯವಹರಿಸಲು ಹೆದರುತ್ತಾರೆ ಏಕೆಂದರೆ ಅವರು ಅವರಿಂದ ಹಣವನ್ನು ಪಡೆಯುತ್ತಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ನಾವು ಈಗ ನಮ್ಮ ದೇಶದ ಇತಿಹಾಸದಲ್ಲಿ ಅತಿದೊಡ್ಡ ಸಮಸ್ಯೆಯನ್ನು ಹೊಂದಿದ್ದೇವೆ. ನಾವು ಚೀನಾದೊಂದಿಗೆ ಬಿಕ್ಕಟ್ಟು ಹೊಂದಿದ್ದೇವೆ. ಬೈಡೆನ್‌ ಚೀನಾದಿಂದ ಹಣ ಪಡೆಯುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ಹಣದುಬ್ಬರವು ನಮ್ಮ ದೇಶವನ್ನು ಕೊಲ್ಲುತ್ತಿದೆ. ಇದು ನಮ್ಮನ್ನು ಸಂಪೂರ್ಣವಾಗಿ ಕೊಲ್ಲುತ್ತಿದೆ ”ಎಂದು 2017-2021 ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಟ್ರಂಪ್ ಆರೋಪಿಸಿದರೆ, “ಎಲ್ಲವೂ ಉತ್ತಮವಾಗಿದೆ.” ಟ್ರಂಪ್ ಆಡಳಿತಾವಧಿಯಲ್ಲಿ ಅಡಿಯಲ್ಲಿ ಆರ್ಥಿಕತೆಯು ಕುಸಿದಿತ್ತು ಎಂದು ಬಿಡೆನ್ ತಿರುಗೇಟು ಕೊಟ್ಟರು.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Continue Reading

ದೇಶ

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Religious Freedom: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಕಳವಳ ವ್ಯಕ್ತಪಡಿಸಿದ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದೆ. ಭಾರತದ ಸಾಮಾಜಿಕ ಚೌಕಟ್ಟಿನ ಕುರಿತು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಮೆರಿಕ ಸರ್ಕಾರವು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ನಕಾರಾತ್ಮಕವಾಗಿ ವರದಿ ಮಾಡಿದೆ. ಮತ ಬ್ಯಾಂಕ್‌ ಹಾಗೂ ಸೂಚಿತ ದೃಷ್ಟಿಕೋನವನ್ನು ಆಧರಿಸಿ ವರದಿಯನ್ನು ತಯಾರಿಸಲಾಗಿದೆ ಎಂದು ಭಾರತ ಅಮೆರಿಕ ವರದಿಯನ್ನು ಖಂಡಿಸಿದೆ.

VISTARANEWS.COM


on

Religious Freedom
Koo

ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ನಕಾರಾತ್ಮಕವಾಗಿ ವರದಿ ಮಾಡಿದ ಅಮೆರಿಕ ಸರ್ಕಾರಕ್ಕೆ ಭಾರತವು ಸರಿಯಾಗಿಯೇ ತಿರುಗೇಟು ನೀಡಿದೆ. “ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರವು (US Government) ಬಿಡುಗಡೆಗೊಳಿಸಿದ ವರದಿಯು ಪಕ್ಷಪಾತದಿಂದ ಕೂಡಿದೆ. ಭಾರತದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರಬೇಕು ಎಂಬ ಕಾರಣಕ್ಕಾಗಿಯೇ ವರದಿಯನ್ನು ಬಿಡುಗಡೆ ಮಾಡಲಾಗಿದೆ: ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ (Randhir Jaiswal) ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತದ ಸಾಮಾಜಿಕ ಚೌಕಟ್ಟಿನ ಕುರಿತು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಮೆರಿಕ ಸರ್ಕಾರವು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ನಕಾರಾತ್ಮಕವಾಗಿ ವರದಿ ಮಾಡಿದೆ. ಮತ ಬ್ಯಾಂಕ್‌ ಹಾಗೂ ಸೂಚಿತ ದೃಷ್ಟಿಕೋನವನ್ನು ಆಧರಿಸಿ ವರದಿಯನ್ನು ತಯಾರಿಸಲಾಗಿದೆ. ಹಾಗಾಗಿ, ನಾವು ಈ ವರದಿಯನ್ನು ತಿರಸ್ಕರಿಸುತ್ತೇವೆ. ಪಕ್ಷಪಾತದ ಮೂಲಗಳನ್ನು ಅವಲಂಬಿಸಿ ವರದಿಯನ್ನು ತಯಾರಿಸಲಾಗಿದೆ. ಅಪೂರ್ಣ, ಅಸತ್ಯ, ತಪ್ಪಾಗಿ ಅರ್ಥೈಸಿಕೊಂಡು ಮಾಡಲಾದ ನಿರೂಪಣೆಗಳೇ ವರದಿಯಲ್ಲಿ ತುಂಬಿವೆ” ಎಂಬುದಾಗಿ ಹೇಳಿದರು.

Religious Freedom

ಭಾರತದ ನ್ಯಾಯಾಲಯಗಳ ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರದಿಯನ್ನು ತಯಾರಿಸಲಾಗಿದೆ. ಭಾರತೀಯ ಕೋರ್ಟ್‌ಗಳು ನೀಡಿದ ತೀರ್ಪುಗಳನ್ನು ಪ್ರಶ್ನಿಸುವ ಹಾಗೆ ವರದಿ ತಯಾರಿಸಲಾಗಿದೆ. 2023ರಲ್ಲಿ ಅಮೆರಿಕದಲ್ಲಿ ನಡೆದ ದ್ವೇಷದ ಅಪರಾಧಗಳು, ವರ್ಣಾಧಾರಿತವಾಗಿ ಭಾರತೀಯರ ಮೇಲೆ ನಡೆದ ದಾಳಿಗಳು, ಶ್ರದ್ಧಾ ಕೇಂದ್ರಗಳ ಮೇಲೆ ನಡೆದ ಆಕ್ರಮಣಗಳು, ಬೇರೆ ಅಲ್ಪಸಂಖ್ಯಾತರ ನಂಬಿಕೆಯ ಕೇಂದ್ರಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಭಾರತವು ಅಧಿಕೃತವಾಗಿ ಗಮನ ಸೆಳೆದಿತ್ತು. ಈ ಬಗ್ಗೆ ಅಮೆರಿಕ ಸರ್ಕಾರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಹೇಳಿದರು.

ಅಮೆರಿಕದ ವರದಿಯಲ್ಲೇನಿತ್ತು?

ಜಾಗತಿಕ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರವು ವರದಿ ಬಿಡುಗಡೆ ಮಾಡಿದ್ದು, ಭಾರತದ ಕುರಿತು ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು, ದ್ವೇಷ ಭಾಷಣದಂತಹ ಪ್ರಕರಣಗಳು, ಅಲ್ಪಸಂಖ್ಯಾತರ ನಿವಾಸಗಳನ್ನು ನೆಲಸಮಗೊಳಿಸುವುದು ಹಾಗೂ ಶ್ರದ್ಧಾಕೇಂದ್ರಗಳನ್ನು ತೆರವುಗೊಳಿಸುವುದು ಹೆಚ್ಚಾಗಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂಬುದಾಗಿ ಅಮೆರಿಕ ತಿಳಿಸಿತು. ಬೇರೆ ದೇಶಗಳ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಕೂಡ ಅಮೆರಿಕ ವರದಿಯಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಮತಾಂತರ ನಿಷೇಧ | ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಜಾರಿ; ರಾಜ್ಯ ಸರ್ಕಾರ ಅಧಿಕೃತ ಆದೇಶ

Continue Reading

ಪ್ರಮುಖ ಸುದ್ದಿ

Snake: ಮಲಗಿದ್ದವನ ಚಡ್ಡಿಯೊಳಗೆ ನುಗ್ಗಿದ ನಾಗರಹಾವು; ಅದು ಹೊರಬರುವ ಮುನ್ನ ಮಾಡಿದ ಅನಾಹುತ ಏನು?

Snake: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್)‌ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಆತನ ಚಡ್ಡಿಯೊಳಗೆ ಕಳೆದಿದ್ದು, ಯುವಕನು ಬೆಳಗ್ಗೆ ಎದ್ದು ನೋಡಿದಾಗ ಬರೀ ಆಘಾತವಲ್ಲ, ಮರ್ಮಾಘಾತವಾಗಿದೆ.

VISTARANEWS.COM


on

Snake
Koo

ನವದೆಹಲಿ: ಮಳೆಗಾಲ ಶುರುವಾಗಿದೆ. ಗ್ರಾಮೀಣ ಭಾಗಗಳಲ್ಲಿ ವಾಸಿಸುವವರು, ಬೆಟ್ಟ-ಗುಡ್ಡಗಳ ಪಕ್ಕದಲ್ಲಿ, ಜಮೀನಿನಲ್ಲಿ ಮನೆ ಮಾಡಿಕೊಂಡಿರುವವರಿಗೆ ಹಾವುಗಳು (Snake) ಕಾಣಿಸುವುದು ಮಳೆಯಷ್ಟೇ ಸಹಜವಾಗಿರುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಹಾವುಗಳು ಮಳೆಗಾಲದಲ್ಲೂ ಕಾಣಿಸಿಕೊಳ್ಳುವುದು ವಿರಳ. ಆದರೂ, ಶೂನಲ್ಲೇ, ಹೆಲ್ಮೆಟ್‌ನಲ್ಲೋ, ಕಿಟಕಿಯಲ್ಲೋ ಕಾಣಿಸಿಕೊಳ್ಳುವ ಹಾವುಗಳು ಭಾರಿ ಆತಂಕ ಸೃಷ್ಟಿಸುತ್ತವೆ. ಆದರೆ, ಥಾಯ್ಲೆಂಡ್‌ನಲ್ಲಿ (Thailand) ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೇ ನಾಗರಹಾವೊಂದು ನುಗ್ಗಿದ್ದು, ಆತ ಎಚ್ಚರಗೊಂಡಾಗ ಪ್ರಾಣವು ಬಾಯಿಗೆ ಬಂದಿದ್ದಂತೂ ಸುಳ್ಳಲ್ಲ.

ಹೌದು, ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್)‌ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಯುವಕನ ಚಡ್ಡಿಯೊಳಗೆ ಬೆಚ್ಚಗೆ ಮಲಗಿದೆ. ಯುವಕನೂ ಮಲಗಿದ್ದಾನೆ. ಆದರೆ, ಬೆಳಗ್ಗೆ ಏಳುತ್ತಲೇ ಯುವಕನಿಗೆ ತನ್ನ ಚಡ್ಡಿಯೊಳಗೆ ಏನೂ ನುಸುಳಿದ, ಅಲುಗಾಡಿದ ಅನುಭವವಾಗಿದೆ.

ಅಪಾಯದ ಮುನ್ಸೂಚನೆ ಅರಿತ ಯುವಕನು ಅಲುಗಾಡದೆ ಚಡ್ಡಿಯೊಳಗೆ ಏನಿದೆ ಎಂಬುದನ್ನು ನೋಡಿದ್ದಾನೆ. ಆಗ ನಾಗರಹಾವು ಕಂಡ ಆತನಿಗೆ ಆಘಾತವಾಗಿದೆ. ಸ್ವಲ್ಪ ಅಲುಗಾಡಿದರೂ ಹಾವು ಕಚ್ಚುತ್ತದೆ ಎಂಬುದನ್ನು ಅರಿತ ಆತನು ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದ ಗೆಳೆಯರು ಕೂಡ ಆಘಾತಕ್ಕೊಳಗಾಗಿದ್ದು, ಕೂಡಲೇ ಸ್ಥಳೀಯ ಉರಗ ತಜ್ಞರನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.

ಯುವಕನ ಮನೆಗೆ ಬಂದ ಉರಗ ತಜ್ಞನು ಯುವಕನ ಚಡ್ಡಿಯಿಂದ ನಿಧಾನವಾಗಿ ಹಾವನ್ನು ಹೊರತೆಗೆದಿದ್ದಾರೆ. ಹಾವು ನೋಡಿದ ಕ್ಷಣದಿಂದ, ಗೆಳೆಯರಿಗೆ ಕರೆ ಮಾಡಿ, ಅವರು ಉರಗ ತಜ್ಞನನ್ನು ಕರೆದುಕೊಂಡು ಬಂದು, ಆತ ಹಾವನ್ನು ಹೊರಗೆ ತೆಗೆಯುವವರೆಗೂ ಯುವಕನು ಸ್ವಲ್ಪವೂ ಅಲುಗಾಡದೆ ಇದ್ದಿದ್ದು, ಹಾವು ಕೂಡ ಕೋಪದಲ್ಲಿ ಈತನಿಗೆ ಕಚ್ಚದೆ ಇದ್ದಿದ್ದು ಆತನ ಅದೃಷ್ಟವೇ ಸರಿ. ಇನ್ನು, ಯುವಕನ ಚಡ್ಡಿಯಿಂದ ಹಾವನ್ನು ತೆಗೆದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಇನ್ನು ಯುವಕನು ಮಲಗುವ ಮುನ್ನ ಹಾಗೂ ಎದ್ದ ನಂತರ ಚಡ್ಡಿಯನ್ನು ನೋಡಿಕೊಳ್ಳುವುದೇ ಕೆಲಸವಾಗಿದೆ. ಅವನಿಗೆ ಅಷ್ಟು ಆಘಾತವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ನಾಗರಹಾವು ಟಾಯ್ಲೆಟ್ ಕಮೋಡ್ ನೊಳಗೂ ಇರಬಹುದು, ಹುಷಾರ್! ಈ ವಿಡಿಯೊ ನೋಡಿ

Continue Reading

ವಿದೇಶ

US Presidential Election: ನೀಲಿ ಚಿತ್ರ ತಾರೆ ಜತೆ ಡೊನಾಲ್ಡ್‌ ಟ್ರಂಪ್‌ ಸೆಕ್ಸ್;‌ ಚರ್ಚೆ ವೇಳೆ ಬೈಡೆನ್‌ ಆರೋಪ

US Presidential Election: ನೀಲಿಚಿತ್ರ ತಾರೆ ಸ್ಟೊರ್ಮಿ ಡೇನಿಯಲ್ಸ್ ಜೊತೆಗಿನ ಟ್ರಂಪ್‌ ಲೈಂಗಿಕ ಹಗರಣದ ಬಗ್ಗೆ ಪ್ರಸ್ತಾಪಿಸಿದ ಬೈಡೆನ್‌, ಸಿವಿಲ್ ಪೆನಾಲ್ಟಿಗಳಲ್ಲಿ ನೀವು ಎಷ್ಟು ಶತಕೋಟಿ ಡಾಲರ್‌ಗಳನ್ನು ನೀಡಬೇಕಾಗಿದೆ? ಸಾರ್ವಜನಿಕವಾಗಿ ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ಎಷ್ಟು ದಂಡ ಭರಿಸುತ್ತಿದ್ದೀರಿ? ನಿಮ್ಮ ಹೆಂಡತಿ ಗರ್ಭಿಣಿಯಾಗಿರುವಾಗ ಪೋರ್ನ್‌ಸ್ಟಾರ್ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೀರಾ? ಎಂದು ಬೈಡೆನ್‌ ಪ್ರಶ್ನಿಸಿದ್ದಾರೆ. ಆದರೆ ಬೈಡೆನ್‌ ಪ್ರಶ್ನೆಗೆ ಅಷ್ಟೇ ವೇಗವಾಗಿ ಉತ್ತರ ಕೊಟ್ಟ ಟ್ರಂಪ್‌ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

VISTARANEWS.COM


on

US Presidential Election
Koo

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ(US Presidential Election) ರಂಗೇರಿದೆ. ಇದರ ಮೊದಲ ಭಾಗವಾಗಿ ಕಣದಲ್ಲಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ (Joe Biden) ಮತ್ತು ಅವರ ಪ್ರತಿ ಸ್ಪರ್ಧಿ, ರಿಪಬ್ಲಿನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ, ನೀಲಿ ಚಿತ್ರ ತಾರೆ ಸ್ಟೋರ್ಮಿ ಡೇನಿಯಲ್‌ ಜತೆ ಡೊನಾಲ್ಡ್‌ ಟ್ರಂಪ್‌ ಸೆಕ್ಸ್‌ ಮಾಡಿದ್ದಾರೆ ಎಂಬುದಾಗಿ ಜೋ ಬೈಡೆನ್‌ ಅವರು ಆರೋಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಟ್ಲಾಂಟದಲ್ಲಿ ನಡೆದ ಈ ವಿಶೇಷ ಚರ್ಚೆಯನ್ನು ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಜನ ವೀಕ್ಷಿಸಿದ್ದಾರೆ. ಹಾಗಾದರೆ, ಇಬ್ಬರ ನಡುವಿನ ಚರ್ಚೆ ಹೇಗಿತ್ತು? ಯಾವ ಅಂಶಗಳು ಮುನ್ನೆಲೆಗೆ ಬಂದವು ಎಂಬುದರ ಮಾಹಿತಿ ಇಲ್ಲಿದೆ.

ಟ್ರಂಪ್‌ ವಿರುದ್ಧ ಬೈಡೆನ್‌ ಪ್ರಬಲ ಅಸ್ತ್ರ

ಟ್ರಂಪ್‌ರನ್ನು ಲೂಸರ್‌ ಎಂದು ಕರೆದಿರುವ ಬೈಡೆನ್‌, ಇರಾಕ್‌ನಲ್ಲಿರುವ ಅಮೆರಿಕ ಸೇನೆಯಲ್ಲಿ ಕರ್ತವ್ಯ ನಿರ್ಹಿಸಿ ಹುತಾತ್ಮನಾದ ತಮ್ಮ ಪುತ್ರ ಬ್ಯೂ ಬಗ್ಗೆ ಪ್ರಸ್ತಾಪಿಸಿದರು. ನನ್ನ ಪುತ್ರ ಧೀರ, ಧೈರ್ಯಶಾಲಿ. ಆದರೆ ಟ್ರಂಪ್‌ ಒಬ್ಬ ಲೂಸರ್‌, ಅಮಾಯಕರ ರಕ್ತ ಹೀರುವವರು ಎಂದು ಕಿಡಿ ಕಾರಿದರು.

ಇದೇ ವೇಳೆ ನೀಲಿಚಿತ್ರ ತಾರೆ ಸ್ಟೊರ್ಮಿ ಡೇನಿಯಲ್ಸ್ ಜೊತೆಗಿನ ಟ್ರಂಪ್‌ ಲೈಂಗಿಕ ಹಗರಣದ ಬಗ್ಗೆ ಪ್ರಸ್ತಾಪಿಸಿದ ಬೈಡೆನ್‌, ಸಿವಿಲ್ ಪೆನಾಲ್ಟಿಗಳಲ್ಲಿ ನೀವು ಎಷ್ಟು ಶತಕೋಟಿ ಡಾಲರ್‌ಗಳನ್ನು ನೀಡಬೇಕಾಗಿದೆ? ಸಾರ್ವಜನಿಕವಾಗಿ ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ಎಷ್ಟು ದಂಡ ಭರಿಸುತ್ತಿದ್ದೀರಿ? ನಿಮ್ಮ ಹೆಂಡತಿ ಗರ್ಭಿಣಿಯಾಗಿರುವಾಗ ಪೋರ್ನ್‌ಸ್ಟಾರ್ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೀರಾ? ಎಂದು ಬೈಡೆನ್‌ ಪ್ರಶ್ನಿಸಿದ್ದಾರೆ. ಆದರೆ ಬೈಡೆನ್‌ ಪ್ರಶ್ನೆಗೆ ಅಷ್ಟೇ ವೇಗವಾಗಿ ಉತ್ತರ ಕೊಟ್ಟ ಟ್ರಂಪ್‌ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಉಕ್ರೇನ್‌ ದಾಳಿ

ಉಕ್ರೇನ್‌ ದಾಳಿ ವಿಚಾರವನ್ನು ಮುಂದಿಟ್ಟುಕೊಂಡು ಬೈಡೆನ್‌ಗೆ ಟಾಂಗ್‌ ಕೊಟ್ಟ ಟ್ರಂಪ್‌, ನೀವು ನಿಜವಾಗಿಯೂ ಒಬ್ಬರು ಉತ್ತಮ ಅಧ್ಯಕ್ಷರಾಗಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್‌ ತಮ್ಮ ಬಗ್ಗೆ ಗೌರವ ಹೊಂದಿದ್ದರೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ ನಡೆಯುತ್ತಿರಲಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಬೈಡೆನ್‌, ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವೇ ಆಗುತ್ತಿಲ್ಲ ಎಂದರು.

ತಾವು ಅಧ್ಯಕ್ಷರಾಗಿದ್ದರೆ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಅನ್ನು ಎಂದಿಗೂ ಆಕ್ರಮಿಸುತ್ತಿರಲಿಲ್ಲ. ಬೈಡೆನ್‌ ಪ್ಯಾಲೆಸ್ತೀನಿಯನ್‌ ನಂತೆ ವರ್ತಿಸುತ್ತಿದ್ದಾರೆ. ಆದರೆ ಅವರು ಅವನನ್ನು ಇಷ್ಟಪಡುವುದಿಲ್ಲ ಏಕೆಂದರೆ ಅವರು ತುಂಬಾ ಕೆಟ್ಟ ಪ್ಯಾಲೆಸ್ತೇನಿಯನ್‌. ಅವರು ದುರ್ಬಲರು, ”ಎಂದು ಟ್ರಂಪ್ ಬಿಡೆನ್ ಬಗ್ಗೆ ಹೇಳಿದರು.

ಬೈಡೆನ್‌ ಅವರು ಚೀನಾದೊಂದಿಗೆ ವ್ಯವಹರಿಸಲು ಹೆದರುತ್ತಾರೆ ಏಕೆಂದರೆ ಅವರು ಅವರಿಂದ ಹಣವನ್ನು ಪಡೆಯುತ್ತಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ನಾವು ಈಗ ನಮ್ಮ ದೇಶದ ಇತಿಹಾಸದಲ್ಲಿ ಅತಿದೊಡ್ಡ ಸಮಸ್ಯೆಯನ್ನು ಹೊಂದಿದ್ದೇವೆ. ನಾವು ಚೀನಾದೊಂದಿಗೆ ಬಿಕ್ಕಟ್ಟು ಹೊಂದಿದ್ದೇವೆ. ಬೈಡೆನ್‌ ಚೀನಾದಿಂದ ಹಣ ಪಡೆಯುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ಹಣದುಬ್ಬರವು ನಮ್ಮ ದೇಶವನ್ನು ಕೊಲ್ಲುತ್ತಿದೆ. ಇದು ನಮ್ಮನ್ನು ಸಂಪೂರ್ಣವಾಗಿ ಕೊಲ್ಲುತ್ತಿದೆ ”ಎಂದು 2017-2021 ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಟ್ರಂಪ್ ಆರೋಪಿಸಿದರೆ, “ಎಲ್ಲವೂ ಉತ್ತಮವಾಗಿದೆ.” ಟ್ರಂಪ್ ಆಡಳಿತಾವಧಿಯಲ್ಲಿ ಅಡಿಯಲ್ಲಿ ಆರ್ಥಿಕತೆಯು ಕುಸಿದಿತ್ತು ಎಂದು ಬಿಡೆನ್ ತಿರುಗೇಟು ಕೊಟ್ಟರು.

ಇದನ್ನೂ ಓದಿ: ʼಹಷ್‌ ಮನಿʼ ಪ್ರಕರಣದಲ್ಲಿ ಟ್ರಂಪ್‌ ದೋಷಿ; ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಶತಕೋಟಿ ರೂ. ನಷ್ಟ

Continue Reading
Advertisement
US Presidential Election
ವಿದೇಶ15 mins ago

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

IND vs SA Final
ಕ್ರೀಡೆ18 mins ago

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

Sadhguru Jaggi Vasudev
ಆರೋಗ್ಯ18 mins ago

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Kannada New Movie niveditha Shivarajkumar frefly cinema sudharani join
ಸಿನಿಮಾ29 mins ago

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

Actor Darshan
ಕರ್ನಾಟಕ48 mins ago

Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

Amarnath Yatra
ದೇಶ56 mins ago

Amarnath Yatra: ವ್ಯಾಪಕ ಬಿಗಿ ಭದ್ರತೆಯೊಂದಿಗೆ ಈ ಬಾರಿಯ ಅಮರನಾಥ ಯಾತ್ರೆ ಆರಂಭ; ಪವಿತ್ರ ಗುಹೆಯತ್ತ ಹೊರಟ ಮೊದಲ ತಂಡ

BBMP Scam
ಬೆಂಗಳೂರು1 hour ago

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Assam Tour
ಪ್ರವಾಸ2 hours ago

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Ashada Month
ಧಾರ್ಮಿಕ2 hours ago

Ashada Month: ಆಷಾಢವನ್ನು ಅಶುಭ ತಿಂಗಳು ಅನ್ನುವುದೇಕೆ? ಇದಕ್ಕಿದೆ ವೈಜ್ಞಾನಿಕ ಕಾರಣ!

Mango Storage
ಆಹಾರ/ಅಡುಗೆ2 hours ago

Mango Storage: ಮಾವಿನ ಹಣ್ಣಿನ ಸೀಸನ್‌ ಮುಗಿದರೇನಂತೆ? ತಿಂಗಳ ಕಾಲ ಇದನ್ನು ಶೇಖರಿಸಿ ಇಡುವ ವಿಧಾನ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌