ನ್ಯೂಯಾರ್ಕ್, ಅಮೆರಿಕ: ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಅಸಭ್ಯವಾಗಿ ವರ್ತಿಸಿದ 6 ಶಿಕ್ಷಕಿಯರನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಅಮೆರಿಕದಲ್ಲಿ ಎರಡು ದಿನಗಳಲ್ಲಿ ಒಟ್ಟು 6 ಶಿಕ್ಷಕಿಯರನ್ನು ಬಂಧಿಸಲಾಗಿದ್ದು, ಇವರೆಲ್ಲರೂ ತಮ್ಮ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಡಾನ್‌ವಿಲ್ಲೆಯ 38 ವರ್ಷದ ಎಲ್ಲೆನ್ ಶೆಲ್ ವಿರುದ್ಧ ಥರ್ಡ್ ಡಿಗ್ರಿ ರೇಪ್ ಪ್ರಕರಣ ದಾಖಲಿಸಲಾಗಿದೆ. ಈ ಶಿಕ್ಷಕಿಯು 16 ವರ್ಷದ ವಿದ್ಯಾರ್ಥಿಗಳ ಜತೆ ಮೂರು ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಳು ಆರೋಪಿಸಲಾಗಿದೆ. ಗುರುವಾರ ಈಕೆಯನ್ನು ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಲಾಗಿದೆ.
ಶೆಲ್ ಅವರು ವುಡ್‌ಲಾನ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಇದಕ್ಕೂ ಮೊದಲು ಆಕೆ ಲ್ಯಾನ್‌ಕಾಸ್ಟರ್ ಎಲಿಮೆಂಟರ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದಳು ಎಂದು ಹೇಳಲಾಗುತ್ತಿದೆ. ಎಲ್ಲೆನ್ ಶೆಲ್ ಬಂಧನದೊಂದಿಗೆ ವಿದ್ಯಾರ್ಥಿಗಳ ಜತೆ ರಾಸಲೀಲೆ ಆಡಿದ ಬಂಧಿತ ಶಿಕ್ಷಕಿಯರ ಸಂಖ್ಯೆ ಆರಕ್ಕೇರಿದಂತಾಗಿದೆ. ಅರ್ಕಾನ್ಸಾಸ್ ಶಿಕ್ಷಣತಜ್ಞ 32 ವರ್ಷದ ಹೀದರ್ ಹೇರ್ ಅವರೂ ವಿರುದ್ಧ ಆರೋಪ ಕೇಳಿ ಬಂದಿದೆ. ಆಕೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಅರ್ಕಾನ್ಸಾಸ್ ಟೈಮ್ಸ್ ವರದಿ ಮಾಡಿದೆ.
ಓಕ್ಲಾಹೋಮಾದ 26 ವರ್ಷದ ಎಮಿಲಿ ಹಂಕಾಕ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಶಿಕ್ಷಕಿ ಕೂಡ ತನ್ನ ವಿದ್ಯಾರ್ಥಿ ಜತೆ ಅಕ್ರಮ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಲಿಂಕ್ಲಾನ್ ಕೌಂಟಿಯಲ್ಲಿ 15 ವರ್ಷ ಹುಡುಗನ ಜತೆ ಶಿಕ್ಷಕಿಯೊಬ್ಬರು ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದರು. ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬಂಧಿತ ಎಮ್ಮಾ ಡಿಲೇನಿ, ವೆಲ್‌ಲ್ಟನ್ ಪಬ್ಲಿಕ್ ಸ್ಕೂಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಶಿಕ್ಷಕಿ ಶಾಲೆಯ ಕಟ್ಟಡದಲ್ಲೇ ವಿದ್ಯಾರ್ಥಿ ಜತೆ ಲೈಂಗಿಕಕ್ರಿಯೆಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ, ಸ್ನ್ಯಾಪ್‌ಚಾಟ್‌ನಲ್ಲಿ ಅವರಿಬ್ಬರು ಚಾಟ್ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Molestation Case: ವಿದ್ಯಾರ್ಥಿನಿಯರ ಜತೆ ಸರ್ಕಾರಿ ಶಿಕ್ಷಕನ ಕುಚೇಷ್ಟೆ; ಲೈಂಗಿಕ ಕಿರುಕುಳ ನೀಡುತ್ತಿದ್ದವನಿಗೆ ಬಿತ್ತು ಗೂಸಾ
36 ವರ್ಷ ಕ್ರಿಸ್ಟೆನ್ ಗ್ಯಾಂಟ್ ಅವರು, ಡೆಸ್ ಮೋಯ್ನಿಸ್‌ನ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದಾರೆ. ಕ್ರಿಸ್ಟೆನ್ ಕೂಡ ತನ್ನ ಹದಿ ಹರಿಯದ ವಿದ್ಯಾರ್ಥಿಗಳ ಜತೆ ಐದು ಬಾರಿ ಸ್ಕೂಲ್ ಹೊರಗೆ ಸೆಕ್ಸ್ ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಜೇಮ್ಸ್ ಮ್ಯಾಡಿಸನ್ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಲ್ಲೀಹ್ ಖೇರದ್ಮಂಡ್ ಅವರು ತನ್ನ ವಿದ್ಯಾರ್ಥಿ ಜತೆ ತಿಂಗಳಗಳ ಕಾಲ ಸೆಕ್ಸ್ ಮಾಡುತ್ತಿರುವ ಆರೋಪವನ್ನು ಎದುರಿಸುತ್ತಿದ್ದಾರೆ.