ಮ್ಯಾಡ್ರಿಡ್: ನೆಲ ಅಗೆಯುವಾಗ, ಮನೆಗೆ ಅಡಿಪಾಯ ಹಾಕುವಾಗ ನಿಧಿ ಸಿಕ್ಕ ಸುದ್ದಿಗಳನ್ನು ಕೇಳಿದ್ದೇವೆ. ಆದರೆ, ಸ್ಪೇನ್‌ನಲ್ಲಿ ವ್ಯಕ್ತಿಯೊಬ್ಬ ಮನೆ ನವೀಕರಿಸುವಾಗ ಗೋಡೆಯಲ್ಲಿ ಅಡಗಿಸಿಟ್ಟ ಸುಮಾರು ೪೬ ಲಕ್ಷ ರೂ. (೩೦ ಸಾವಿರ ಪೌಂಡ್) ನೋಟುಗಳು (Viral News) ದೊರೆತಿವೆ. ಇಷ್ಟು ಹಣವನ್ನು ನೋಡಿದ ವ್ಯಕ್ತಿಗೆ ಖುಷಿಯಾಗಿದೆ. ಆದರೆ, ಆ ಖುಷಿ ತುಂಬ ಹೊತ್ತು ಉಳಿಯಲಿಲ್ಲ ಎಂಬುದೇ ಸುದ್ದಿಯ ತಿರುಳಾಗಿದೆ.
ಟೋನೊ ಪೆನೈರೊ (Toño Piñeiro) ಎಂಬ ವ್ಯಕ್ತಿಯು ಮನೆ ನವೀಕರಿಸುವಾಗ ಗೋಡೆಗಳಲ್ಲಿ ಅಡಗಿಸಿಟ್ಟ ಹಣ ಸಿಕ್ಕಿದೆ. ಇದರಿಂದ ಖುಷಿಯಾದ ಅವರು ಅಷ್ಟೂ ಹಣವನ್ನು ತೆಗೆದುಕೊಂಡು ಬ್ಯಾಂಕ್‌ಗೆ ಹೋಗಿದ್ದಾರೆ. ಆದರೆ, ಸಿಕ್ಕ ನೋಟುಗಳು ಸ್ಪೇನ್‌ನಲ್ಲಿ ೨೦೦೨ರಲ್ಲಿಯೇ ಬ್ಯಾನ್ ಆಗಿರುವ ಕಾರಣ ಪೆನೈರೊಗೆ ನಿರಾಸೆಯಾಗಿದೆ.
ಆದಾಗ್ಯೂ, ಅಪ್-ಟು-ಡೇಟ್ ಕಲೆಕ್ಷನ್ ಮೂಲಕ ಅವರು ೩೦ ಲಕ್ಷ ರೂ. ಪಡೆದಿದ್ದಾರೆ ಎಂದು ತಿಳಿದುಬಂದಿದೆ. “ಸಿಕ್ಕ ೩೦ ಲಕ್ಷ ರೂ. ಮನೆಯ ಚಾವಣಿ ನಿರ್ಮಿಸಲು ನೆರವಾಗಿದೆ” ಎಂದು ಪೆನೈರೊ ಮಾಹಿತಿ ನೀಡಿದ್ದಾರೆ. ನಾಲ್ಕು ದಶಕಗಳ ಹಿಂದೆ ಮನೆ ನಿರ್ಮಿಸಲಾಗಿದ್ದು, ಇತ್ತೀಚೆಗೆ ಇದನ್ನು ಫೇಸ್‌ಬುಕ್‌ನಲ್ಲಿ ನೋಡಿದ ವ್ಯಕ್ತಿಯು ಖರೀದಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Shubman Gill: ನ್ಯೂ ಬ್ಯಾಟಿಂಗ್ ಸೆನ್ಷೇಷನಲ್ ಗಿಲ್ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್