Site icon Vistara News

Spelling Bee: ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆ; ಭಾರತ ಮೂಲಕ ಬೃಹತ್‌ಗೆ ಚಾಂಪಿಯನ್‌ ಪಟ್ಟ

Spelling Bee

ಅಮೆರಿಕ: ಭಾರತ ಮೂಲದ 12 ವರ್ಷದ ಬಾಲಕ ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ(Spelling Bee) ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್‌ ಬಾಲಕ ಬೃಹತ್‌ ಸೋಮ(Bruhat Soma) 29 ಪದಗಳ ಸ್ಪೆಲ್ಲಿಂಗ್‌ ಅನ್ನು ಸರಿಯಾಗಿ ಹೇಳುವ ಮೂಲಕ ಚಾಂಪಿಯನ್‌ ಆಗಿ ಹೊರ ಹೊಮ್ಮುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾನೆ.

ಇನ್ನು ಫೈಜಾನ್‌ ಜಾಕಿಯನ್ನು ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಬೃಹತ್‌, 50,000 ಡಾಲರ್‌ ನಗದು ಬಹುಮಾನವನ್ನೂ ಪಡೆದಿದ್ದಾನೆ. ಇನ್ನು ಈ ಸ್ಪೆಲ್ಲಿಂಗ್ ಬೀ ಇಂಗ್ಲೀಷ್‌ ಭಾಷೆಯ ಅತ್ಯಂತ ಪ್ರತಿಷ್ಠೆಯ ಸ್ಪರ್ಧೆ ಇದಾಗಿದ್ದು, ಈ ಬಾರಿ ವಾಷಿಂಗ್ಟನ್‌ನಲ್ಲಿ ಆಯೋಜನೆಗೊಂಡಿತ್ತು. ಇನ್ನು ಏಳನೇ ತರಗತಿಯಲ್ಲಿ ಓದುತ್ತಿರುವ ಬೃಹತ್‌, ಇದಕ್ಕೂ ಮುನ್ನ ನಡೆದ ಮೂರು ಸ್ಪೆಲ್ಲಿಂಗ್‌ ಬೀ ಸ್ಪರ್ಧೆಗಳನ್ನು ಗೆದ್ದ ಬಳಿಕ ಅಂತಿಮ ಘಟ್ಟಕ್ಕೆ ತಲುಪಿದ್ದ.

ಇನ್ನು ತನ್ನ‌ ಗೆಲುವಿನ ಬಗ್ಗೆ ಮಾತನಾಡಿದ ಬೃಹತ್‌, ಕಳೆದ ಮೂರು ಸ್ಪೆಲ್ಲಿಂಗ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವುದ ದೊಡ್ಡ ವಿಚಾರವೇನಲ್ಲ. ನನ್ನ ಅಂತಿಮ ಗುರಿ ಇದಾಗಿತ್ತು. ಈ ಸ್ಪರ್ಧೆಯನ್ನು ನಾನು ಗೆದ್ದಿದ್ದೇನೆ. ಆ ಬಗ್ಗೆ ನನಗೆ ಬಹಳಷ್ಟು ಸಂತೋಷವಿದೆ ಎಂದು ಹೇಳಿದ್ದಾರೆ. ಇನ್ನು ಕಳೆದ 35 ವರ್ಷಗಳಲ್ಲಿ 29 ನೇ ಬಾರಿ ಭಾರತೀಯ ಮೂಲದ ಅಮೆರಿಕನ್‌ ಬಾಲಕ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಿರುವುದು.

ಇದನ್ನೂ ಓದಿ:Theft Case : ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು; ಸೂಪರ್‌ ಮಾರ್ಕೆಟ್‌ಗಳಲ್ಲಿ ಖದೀಮರ ಕೈಚಳಕ

ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಭಾರತೀಯ ಮೂಲದ ದೇವ್‌ ಶಾ ಎಂಬ 14 ವರ್ಷದ ಬಾಲಕ ಪ್ರತಿಷ್ಠಿತ ‘ಸ್ಕ್ರಿಫ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತನಾಗಿದ್ದಾನೆ. ಅಮೆರಿಕದ ಮಾರ್ಯಾಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಕೊನೆಯ ಸುತ್ತಿನಲ್ಲಿPsammophilus (ಪ್ಸಾಮ್ಮೊಫೈಲ್‌) ಎಂಬ ಇಂಗ್ಲಿಷ್‌ನ 11 ಸ್ಪೆಲ್ಲಿಂಗ್‌ ಅನ್ನು ದೇವ್‌ ಸರಿಯಾಗಿ ಉಚ್ಚರಿಸಿ ವಿಜೇತನಾಗಿದ್ದು, 41 ಲಕ್ಷ ರು. ನಗದು ಬಹುಮಾನ ಸ್ವೀಕರಿಸಿದ್ದ.

Exit mobile version