Site icon Vistara News

ವೈಮಾನಿಕ ದಾಳಿ ನಿಲ್ಲಿಸದಿದ್ರೆ, ಒತ್ತೆಯಾಳುಗಳ ಹತ್ಯೆ; ಇಸ್ರೇಲ್‌ಗೆ ಹಮಾಸ್ ಬೆದರಿಕೆ

Stop Air Strike, hostages will be killed, Hamas threatens Israel

ಗಾಜಾ ಸಿಟಿ: ವೈಮಾನಿಕ ದಾಳಿಯಿಂದ ಕಂಗೆಟ್ಟಿರುವ ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರು(Hamas Terrorists), ಇಸ್ರೇಲ್ (Israel) ತನ್ನ ವೈಮಾನಿಕ ದಾಳಿಯನ್ನು ನಿಲ್ಲಿಸದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗಾಜಾ ಪಟ್ಟಿಯಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿಯನ್ನು (Israel Air Strike) ನಡೆಸುತ್ತಿದೆ ಎಂದು ಹಮಾಸ್ ಆರೋಪಿಸಿದೆ. ಯಾವುದೇ ಎಚ್ಚರಿಕೆ ನೀಡದೇ ನಮ್ಮ ಜನರನ್ನು ಗುರಿಯಾಸಿಕೊಂಡು ನಡೆಸುವ ದಾಳಿಗೆ ಪ್ರತಿಯಾಗಿ, ಒತ್ತೆಯಾಳುಗಳಾಗಿರುವ ಇಸ್ರೇಲಿನ ಒಬ್ಬೊಬ್ಬ ನಾಗರಿಕರನ್ನು ಹತ್ಯೆ ಮಾಡಲಾಗುವುದು(Kill Hostages) ಎಂದು ಹಮಾಸ್‌ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್-ಕಸ್ಸೆಮ್ ಬ್ರಿಗೇಡ್ಸ್ ಹೇಳಿಕೆಯಲ್ಲಿ ತಿಳಿಸಿದೆ(Israel Palestine War).

ಅವರಿಗೆ(ಇಸ್ರೇಲ್) ಮಾನವೀಯತೆ ಮತ್ತು ಮೌಲ್ಯಗಳ ಭಾಷೆ ಅರ್ಥವಾಗುವುದಿಲ್ಲ. ಹಾಗಾಗಿ, ಅವರಿಗೆ ಅರ್ಥವಾಗುವ ಭಾಷೆಯಲ್ಲಿ ನಾವು ವ್ಯವಹರಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಹಮಾಸ್ ಬಂಡುಕೋರರು, ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡಿದ ಬಳಿಕ, ಸೇನಾ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ.

ಗಾಜಾ ಪಟ್ಟಿ ಸೀಜ್; ಆಹಾರ, ಇಂಧನ ಪೂರೈಕೆ ಕಟ್ ಮಾಡಿದ ಇಸ್ರೇಲ್!

ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ(1300 people Dead). ಅಲ್ಲದೇ, ಆಹಾರ ಮತ್ತು ಇಂಧನ ಪೂರೈಕೆ ನಿಷೇಧಿಸುವುದು ಸೇರಿದಂತೆ ಗಾಜಾದ ಮೇಲೆ “ಸಂಪೂರ್ಣ ದಿಗ್ಬಂಧನ” (Complete Siege On Gaza) ವಿಧಿಸುವುದಾಗಿ ಇಸ್ರೇಲ್ ಸೋಮವಾರ ಹೇಳಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದ್ದು, ಸಂಪೂರ್ಣ ಕತ್ತಲೆ ಆವರಿಸಿದೆ. ಈ ಮಧ್ಯೆ, ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವಿನ ಯುದ್ಧವು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಘರ್ಷದಲ್ಲಿ ಅಮೆರಿಕದ 9 ಪ್ರಜೆಗಳು ಮೃತಪಟ್ಟಿದ್ದಾರೆ (American Citizens) ಎಂದ ಅಮೆರಿಕ ಖಚಿತಪಡಿಸಿದೆ. ಅ.7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಏಕಕಾಲದಲ್ಲಿ 5000 ಕ್ಷಿಪಣಿಗಳ ದಾಳಿ ನಡೆಸುವ ಮೂಲಕ ಈಗ ನಡೆಯುತ್ತಿರುವ ಯುದ್ಧಕ್ಕೆ ಕಾರಣವಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Palestine War: ಇಸ್ರೇಲ್‌ನಲ್ಲಿ ಉಗ್ರರ ದಾಳಿ; ಕೇರಳ ಮಹಿಳೆಗೆ ಗಂಭೀರ ಗಾಯ!

ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, “ನಾನು ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಕೈಗೊಳ್ಳುವಂತೆ ಆದೇಶಿಸಿದ್ದೇನೆ. ಗಾಜಾಪಟ್ಟಿಯಲ್ಲಿ ಈಗ ವಿದ್ಯುತ್ ಇಲ್ಲ. ಆಹಾರ ಮತ್ತು ಇಂಧನ ಸೇರಿದಂತೆ ಯಾವುದು ಪೂರೈಕೆಯಾಗುವುದಿಲ್ಲ. ನಾವು ಮಾನವ ಪ್ರಾಣಿಗಳೊಂದಿಗೆ ಹೋರಾಡುತ್ತಿದ್ದೇವೆ ಮತ್ತು ನಾವು ಕೂಡ ಅವರಂತೆಯೇ ವರ್ತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 2007ರಲ್ಲಿ ಹಮಾಸ್ ಪ್ರತಿಸ್ಪರ್ಧಿ ಪ್ಯಾಲೆಸ್ತೀನ್ ಪಡೆಗಳಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಮೇಲೆ ವಿವಿಧ ಹಂತದ ದಿಗ್ಬಂಧನವನ್ನು ವಿಧಿಸಿವೆ.

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಮೂರು ದಿನಗಳ ಸಂಘರ್ಷದ ನಂತರ ಈ ದಿಗ್ಬಂಧನ ನಡೆದಿದೆ. ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿ ಈವರೆಗೆ ಸತ್ತವರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ. ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಹತ್ಯೆಗೀಡಾಗಿದ್ದಾರೆ. ಹಮಾಸ್ ದಾಳಿಯ ಬೆನ್ನಲ್ಲೇ, ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ಯುದ್ಧ ಸಾರಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version