Site icon Vistara News

Taliban Bans Contraceptives: ಮುಸ್ಲಿಂ ಜನಸಂಖ್ಯೆ ಹೆಚ್ಚಳಕ್ಕೆ ಕ್ರಮ, ಆಫ್ಘನ್‌ನಲ್ಲಿ ಗರ್ಭ ನಿರೋಧಕಗಳ ನಿಷೇಧ

Taliban ban sale of contraceptives, call it conspiracy by West to control Muslim population

ತಾಲಿಬಾನ್

ಕಾಬೂಲ್‌: ಅಮೆರಿಕ ಸೇನೆ ನಿರ್ಗಮನದ ಬಳಿಕ ಅಂದರೆ, ೨೦೨೧ರ ಆಗಸ್ಟ್‌ನಿಂದ ಅಫಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್‌ ಉಗ್ರರು ಮಹಿಳೆಯರ ಹಕ್ಕುಗಳನ್ನು ದಮನಗೊಳಿಸಿದ್ದಾರೆ. ಹೆಣ್ಣುಮಕ್ಕಳು ಪುರುಷರ ಆಸರೆಯಿಲ್ಲದ ಮನೆಯಿಂದ ಹೊರಬಾರದು ಎಂದು ಆದೇಶಿಸಲಾಗಿದೆ. ಮಹಿಳೆಯರ ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಲಾಗಿದೆ. ಮಹಿಳಾ ವಿಶ್ವವಿದ್ಯಾಲಯಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ, ತಾಲಿಬಾನಿಗಳು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಗರ್ಭನಿರೋಧಕ ಮಾತ್ರೆಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸುವ ಮೂಲಕ (Taliban Bans Contraceptives) ಹೆಣ್ಣುಮಕ್ಕಳ ಹಕ್ಕುಗಳ ಮೇಲೆ ಸವಾರಿ ಮಾಡಿದ್ದಾರೆ.

ಗರ್ಭ ನಿರೋಧಕ ಮಾತ್ರೆಗಳು ಹಾಗೂ ಇಂಜೆಕ್ಷನ್‌ಗಳ ಮಾರಾಟದಿಂದ ಮುಸ್ಲಿಂ ಜನಸಂಖ್ಯೆ ಕುಂಠಿತವಾಗುತ್ತದೆ. ಮುಸ್ಲಿಂ ಜನಸಂಖ್ಯೆ ಕುಂಠಿತಗೊಳಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಗರ್ಭ ನಿರೋಧಕ ಮಾತ್ರೆ ಹಾಗೂ ಇಂಜೆಕ್ಷನ್‌ಗಳನ್ನು ಅಸ್ತ್ರವಾಗಿ ಮಾಡಿಕೊಂಡಿವೆ ಎಂಬುದು ತಾಲಿಬಾನಿಗಳ ನಂಬಿಕೆಯಾಗಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಬೇಕೆಂದರೆ ಗರ್ಭನಿರೋಧಕಗಳನ್ನು ನಿಷೇಧಿಸಬೇಕು ಎಂದು ತಾಲಿಬಾನ್‌ ಆಡಳಿತ ತೀರ್ಮಾನಿಸಿದೆ. ಇದರ ಭಾಗವಾಗಿ ಕಾಬೂಲ್‌ ಸೇರಿ ದೇಶದ ಎರಡು ಪ್ರಮುಖ ನಗರಗಳ ಮೆಡಿಕಲ್‌ಗಳಲ್ಲಿ ಗರ್ಭನಿರೋಧಕ ಮಾತ್ರೆ ಹಾಗೂ ಇಂಜೆಕ್ಷನ್‌ಗಳ ಮಾರಾಟವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Taliban Plan: ಆಫ್ಘನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಏನು ಮಾಡಲಿದೆ ತಾಲಿಬಾನ್‌? ಉಗ್ರರ ಪ್ಲಾನ್‌ ಏನು?

“ಫೆಬ್ರವರಿ ಆರಂಭದಿಂದಲೂ ಮೆಡಿಕಲ್‌ಗಳಲ್ಲಿ ಗರ್ಭನಿರೋಧಕಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಜಾರಿಗೆ ಬಂದಿದೆ. ಹಾಗೆಯೇ, ತಾಲಿಬಾನಿಗಳು ಮನೆಮನೆಗೆ ತೆರಳಿ ಮಾತ್ರೆ ಹಾಗೂ ಇಂಜೆಕ್ಷನ್‌ ಬಳಸದಂತೆ ಸೂಚಿಸಿದ್ದಾರೆ. ಸೂಲಗಿತ್ತಿಯರಿಗೂ ಇದರ ಕುರಿತು ಆದೇಶ ಹೊರಡಿಸಿದ್ದಾರೆ” ಎಂದು ಔಷಧ ಮಳಿಗೆಯ ಮಾಲೀಕರೊಬ್ಬರು ಮಾಹಿತಿ ನೀಡಿದ್ದಾರೆ.

Exit mobile version