ನವದೆಹಲಿ: 16 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ (Sexual Relation with Student) ಬೆಳೆಸಿದ ಆರೋಪದ ಮೇರೆಗೆ ಶಾಲಾ ಶಿಕ್ಷಕಿಯೊಬ್ಬರನ್ನು (Teacher) ಬಂಧಿಸಲಾಗಿದೆ. ಈ ಶಿಕ್ಷಕಿ ವಿರುದ್ಧ ಅತ್ಯಾಚಾರ ಆರೋಪ (Rape Charges) ಹೊರಿಸಲಾಗಿದೆ. ಆಶ್ಚರ್ಯ ಎಂದರೆ, ಮಗನ ಜತೆಗೆ ಶಿಕ್ಷಕಿ ಲೈಂಗಿಕ ಸಂಬಂಧ ಹೊಂದಿದ್ದ ವಿಷಯ ಗೊತ್ತಿದ್ದ ತಂದೆ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ(Case against Father). ಆರೋಪಿ ಶಿಕ್ಷಕಿಯನ್ನು 26 ವರ್ಷದ ಹೈಲಿ ನಿಚೆಲ್ ಕ್ಲಿಫ್ಟನ್-ಕಾರ್ಮ್ಯಾಕ್ ಎಂದು ಗುರುತಿಸಲಾಗಿದೆ. ಕಳೆದ ವಾರ ಟೆಕ್ಸಾಸ್‌ನ ಗಾರ್ಡನ್ ರಿಡ್ಜ್‌ನಲ್ಲಿರುವ ಮನೆಗೆ ಪರಾರಿಯಾಗುತ್ತಿದ್ದಾಗ ಬಂಧಿಸಲಾಗಿದೆ. ಆರೋಪಿ ಶಿಕ್ಷಕಿಯು ಅಮೆರಿಕದ ಮಿಸೌರಿ ರಾಜ್ಯದ ಲ್ಯಾಕ್ವಿ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು.
ಹೈಲಿ ಮತ್ತು ಆಕೆಯ ವಿದ್ಯಾರ್ಥಿಯ ನಡುವಿನ ಸಂಬಂಧದ ಬಗ್ಗೆ ಸಹ ವಿದ್ಯಾರ್ಥಿಯೊಬ್ಬರಿಗೆ ತಿಳಿದಿತ್ತು. ಆ ವಿದ್ಯಾರ್ಥಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಾಲೆಯ ಸಂಪನ್ಮೂಲ ಅಧಿಕಾರಿಗೆ ಈ ಬಗ್ಗೆ ವರದಿ ಮಾಡಿದ್ದರು. ನಂತರ ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಯಿತು. ಮಾಹಿತಿ ನೀಡಿದ ಸಹಪಾಠಿಯ ಮನೆಯ “ಡ್ರೈವ್‌ವೇ” ಯಲ್ಲಿ ಹೈಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆ ವಿದ್ಯಾರ್ಥಿಯು ಮಾಹಿತಿ ನೀಡಿದ್ದಾರೆ.
ಸಹಪಾಠಿಯ ಬೆನ್ನಿನ ಮೇಲೆ ಗೀರುಗಳಿರುವ ಚಿತ್ರಗಳನ್ನು ಪೊಲೀಸರಿಗೆ ನೀಡಲಾಗಿದೆ. ಶಿಕ್ಷಕಿಯ ತನ್ನ ಸಹಪಾಠಿಯ ಮೇಲೆ ಈ ಗೀರು ಮೂಡಲು ಕಾರಣ ಎಂದು ಹೇಳಿದ್ದಾರೆ. ವಿದ್ಯಾರ್ಥಿ ಜತೆಗಿನ ಸಂಬಂಧ ಕಾರಣಕ್ಕೆ ಆರೋಪಿ ಶಿಕ್ಷಕಿ ಇತ್ತೀಚೆಗಷ್ಟೇ ತನ್ನ ಪತಿಗೆ ಡಿವೋರ್ಸ್ ಕೂಡ ನೀಡಿದ್ದಾರೆಂದು ಸಂತ್ರಸ್ತ ವಿದ್ಯಾರ್ಥಿಯ ಸಹಪಾಠಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಪೊಲೀಸರು ಹೈಲಿಯನ್ನು ಪ್ರಶ್ನಿಸಿದ್ದರು. ಆದರೆ, ತಮ್ಮ ವಿರುದ್ಧ ಎಲ್ಲ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಬಳಿಕ ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಹೈಲಿ ಮತ್ತು ವಿದ್ಯಾರ್ಥಿಯ ನಡುವೆ ವಿನಿಮಯವಾದ ಪಠ್ಯ ಸಂದೇಶಗಳು ಅವರು ಸಂಬಂಧದಲ್ಲಿದ್ದಾರೆ ಎಂದು ದೃಢಪಡಿಸಿವೆ. ಏತನ್ಮಧ್ಯೆ, ಹೈಲಿ ಮಿಸೌರಿಯನ್ನು ತೊರೆದು ಟೆಕ್ಸಾಸ್‌ಗೆ ತೆರಳಿದ್ದರು. ನಂತರ ಬಂಧನ ವಾರಂಟ್ ಜಾರಿ ಮಾಡಿ ಆರೋಪಿ ಶಿಕ್ಷಕಿಯನ್ನು ವಶಕ್ಕೆ ಪಡೆಯಲಾಯಿತು.
ತನಿಖೆಯ ವೇಳೆ, ವಿದ್ಯಾರ್ಥಿಯ ತಂದೆ ಮಾರ್ಕ್ ಕ್ರೈಟನ್‌ಗೆ ಹೈಲಿ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ನಂತರ ಆತನನ್ನು ಬಂಧಿಸಿ ಮಗುವಿನ ಯೋಗಕ್ಷೇಮಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: 50ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್