Site icon Vistara News

Somalia Attack | ಸೊಮಾಲಿಯಾದಲ್ಲಿ ನಡೆದ ಮುಂಬೈ ಮಾದರಿ ಉಗ್ರರ ದಾಳಿ ಅಂತ್ಯ ಎಂದ ಸೇನೆ, ಸಾವಿನ ಸಂಖ್ಯೆ 40ಕ್ಕೆ ಏರಿಕೆ

Somalia Attack

ಮೊಗದಿಶು: ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿ ನಡೆದ ೨೬\೧೧ರ ಮಾದರಿ ಉಗ್ರರ ದಾಳಿಯನ್ನು (Somalia Attack) ಅಂತ್ಯಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ. ಶುಕ್ರವಾರ ರಾತ್ರೋರಾತ್ರಿ ಮೊಗದಿಶುವಿನಲ್ಲಿರುವ ಹಯಾತ್‌ ಹೋಟೆಲ್‌ಗೆ (Hayat Hotel) ನುಗ್ಗಿ, ಇಡೀ ಹೋಟೆಲ್‌ ಮೇಲೆ ಉಗ್ರರು ನಿಯಂತ್ರಣ ಸಾಧಿಸಿದ್ದರು. ಈಗ ಉಗ್ರರ ದಾಳಿಯನ್ನು ಅಂತ್ಯಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ. ಉಗ್ರರ ದಾಳಿಯಿಂದ ೪೦ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

“ಹಯಾತ್‌ ಹೋಟೆಲ್‌ ಮೇಲೆ ಉಗ್ರರು ದಾಳಿ ನಡೆಸಿ, ೩೦ ಗಂಟೆಗಳ ಕಾಲ ವಶಪಡಿಸಿಕೊಂಡಿರುವುದನ್ನು ಅಂತ್ಯಗೊಳಿಸಲಾಗಿದೆ. ಹೋಟೆಲ್‌ ಮೇಲೆ ದಾಳಿ ಮಾಡಿ, ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಎಲ್ಲ ಉಗ್ರರನ್ನು ಹತ್ಯೆಗೈಯಲಾಗಿದೆ” ಎಂದು ಸೇನೆ ಮಾಹಿತಿ ನೀಡಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅಲ್-ಶಬಾಬ್‌ (Al-Shabab) ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿದೆ.

ಮುಂಬೈನ ತಾಜ್‌ ಹೋಟೆಲ್‌ಅನ್ನು ೨೦೦೮ರಲ್ಲಿ ವಶಪಡಿಸಿಕೊಂಡು, ದಾಳಿ ನಡೆಸಿದಂತೆ ಶುಕ್ರವಾರ ರಾತ್ರಿ ಅಲ್‌-ಶಬಾಬ್‌ ಉಗ್ರರು ದಾಳಿ ನಡೆಸಿ, ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಅಲ್ಲದೆ, ಬಾಂಬ್‌ ಹಾಗೂ ಗುಂಡಿನ ದಾಳಿ ನಡೆಸಿ ಜನರನ್ನು ಹತ್ಯೆಗೈದಿದ್ದರು. ಉಗ್ರರ ದಾಳಿಗೆ ಹಯಾತ್‌ ಹೋಟೆಲ್‌ ಭಾಗಶಃ ಹಾನಿಗೀಡಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Somalia Attack | ಮುಂಬೈ ಮಾದರಿಯಲ್ಲೇ ಸೊಮಾಲಿಯಾ ಹೋಟೆಲ್‌ ಮೇಲೆ ದಾಳಿ, 15 ಜನರ ಸಾವು

Exit mobile version