ನವದೆಹಲಿ: ಟರ್ಕಿಯ ಸಂಸತ್ (Turkey Parliament) ಮುಂದೆ ಆತ್ಮಹತ್ಯಾ ಬಾಂಬ್ ದಾಳಿ (Suicide Bomber) ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಈ ಆತ್ಮ ಹತ್ಯಾ ಬಾಂಬ್ ದಾಳಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Attack Captured in Security Cameras) ಆಗಿದೆ. ಟರ್ಕಿಯ ಅಂಕಾರಾ (Ankara) ನಗರದಲ್ಲಿರುವ ಟರ್ಕಿ ಸಂಸತ್ ಗೇಟ್ ಎದುರು ಉಗ್ರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ದೊಡ್ಡ ಜ್ವಾಲೆಯ ನಂತರ ಪ್ರಬಲವಾದ ಸ್ಫೋಟವು ದಾಳಿಯ ಸ್ಥಳದಿಂದ ಹಲವಾರು ಕಿಲೋಮೀಟರ್‌ಗಳವರೆಗೆ ಕೇಳಿಸಿದೆ!
ಸಂಸತ್ತು ಎದುರಿನ ಈ ಉಗ್ರ ಕೃತ್ಯವು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ದೃಶ್ಯಾವಳಿಗಳು ವೈರಲ್ ಆಗಿವೆ. ಇಬ್ಬರು ಉಗ್ರರು ಬೆಳಿಗ್ಗೆ 9:30 ರ ಸುಮಾರಿಗೆ ವಾಣಿಜ್ಯ ವಾಹನದಲ್ಲಿ ಆಂತರಿಕ ಸಚಿವಾಲಯದ ಭದ್ರತಾ ಪ್ರಧಾನ ನಿರ್ದೇಶನಾಲಯದ ಗೇಟ್ ಬರುತ್ತಾರೆ. ವಾಹನದಿಂದ ಇಬ್ಬರು ಇಳಿಯುತ್ತಾರೆ. ಆ ಪೈಕಿ ಸೂಸೈಡ್ ಬಾಂಬರ್ ಗೇಟ್‌ನತ್ತ ಓಡುತ್ತಾನೆ. ಗೇಟ್ ಸಮೀಪಿಸುತ್ತಿದ್ದಂತೆ ಸ್ಫೋಟಿಸಿಕೊಳ್ಳುವುದನ್ನು ವೈರಲ್ ಆಗಿರು ವಿಡಿಯೋದಲ್ಲಿ ನೋಡಬಹುದು.
د ترکیې په پلازمینه انقره کې چاودنه او ډزې.
— Khoshhal Taib (@KoshTaib) October 1, 2023
ویډیو: ټولنیزې رسنۍ#TurkeyBlast #Ankara pic.twitter.com/iLMmyHb4IQ
ನಮ್ಮ ಆಂತರಿಕ ಸಚಿವಾಲಯದ ಭದ್ರತಾ ಜನರಲ್ ಡೈರೆಕ್ಟರೇಟ್‌ನ ಪ್ರವೇಶ ದ್ವಾರದ ಮುಂದೆ ಬಂದು ಬಾಂಬ್ ದಾಳಿ ನಡೆಸಿದರು ಎಂದು ಟರ್ಕಿಟ ಆಂತರಿಕ ಸಚಿವಾಲಯವು ಹೇಳಿಕೆ ನೀಡಿದೆ. ಒಬ್ಬ ಭಯೋತ್ಪಾದಕ ತನ್ನನ್ನು ತಾನು ಸ್ಫೋಟಿಸಿಕೊಂಡನು ಮತ್ತು ಇನ್ನೊಬ್ಬ ದಾಳಿ ಮಾಡುವುದನ್ನು ತಡೆಯಲಾಯಿತು. ಈ ವೇಳೆ, ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಚಿವಾಲಯವು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: G20 Summit 2023: ಪಾಕಿಸ್ತಾನಕ್ಕೆ ಟರ್ಕಿ ಶಾಕ್! ವಿಶ್ವಸಂಸ್ಥೆ ಭದ್ರತಾ ಸಮಿತಿಯ ಭಾರತದ ಬೇಡಿಕೆಗೆ ಬೆಂಬಲ
ಆತ್ಮ ಹತ್ಯಾ ಬಾಂಬ್ ದಾಳಿ ನಡೆದ ಪ್ರದೇಶವು ಅನೇಕ ಸಚಿವಾಲಯಗಳ ನೆಲೆಯಾಗಿದೆ. ಅಲ್ಲದೇ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಭಾಷಣದೊಂದಿಗೆ ಭಾನುವಾರ ಸಂಸತ್ ತೆರೆಯಬೇಕಿತ್ತು. ಅಷ್ಟರಲ್ಲೇ ಉಗ್ರ ಕೃತ್ಯ ನಡೆದಿದೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ. ಘಟನೆ ನಡೆದ ಸ್ಥಳವನ್ನು ನಿರ್ಬಂಧಿಸಲಾಗಿದ್ದು, ತೀವ್ರ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟರ್ಕಿಯಲ್ಲಿ ಇತ್ತೀಚಿನ ಬಾಂಬ್ ದಾಳಿಯು 2022ರ ನವೆಂಬರ್‌ನಲ್ಲಿ ಇಸ್ತಾನ್‌ಬುಲ್‌ನ ಶಾಪಿಂಗ್ ಸ್ಟ್ರೀಟ್‌ನಲ್ಲಿ ಸಂಭವಿಸಿತ್ತು. ಈ ಬಾಂಬ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದರು ಮತ್ತು 81 ಮಂದಿ ಗಾಯಗೊಂಡಿದ್ದರು. ಅದಾದ ಬಳಿಕ ಈಗ ಸಂಸತ್ ಎದುರು ಉಗ್ರ ಕೃತ್ಯ ನಡೆದಿದೆ.