Site icon Vistara News

Economic Crisis : ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಭಾರತಕ್ಕೆ ಥ್ಯಾಂಕ್ಸ್ ಹೇಳಿದ ಶ್ರೀಲಂಕಾ ವಿದೇಶಾಂಗ ಸಚಿವ

The Sri Lankan Foreign Minister thanked India for saving them from economic Crisis

#image_title

ಕೊಲೊಂಬೊ : ದ್ವೀಪ ರಾಷ್ಟ್ರ ಶ್ರೀಲಂಕಾ ಕಳೆದ ವರ್ಷ ಕಂಡುಕೇಳರಿಯದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟು (Economic Crisis) ಎದುರಿಸಿತ್ತು. ಆಹಾರಕ್ಕಾಗಿ ಅಲ್ಲಿನ ಜನ ಪರದಾಡಿದ್ದರು. ಮೂಲ ಸೌಕರ್ಯವೇ ಸಿಗದೇ ಜನರು ಕಂಗಾಲಾಗಿದ್ದರು. ಪೆಟ್ರೋಲ್​, ಡೀಸೆಲ್​ ಲಭ್ಯವಿಲ್ಲದೆ ದೇಶದ ಸಾರಿಗೆ ವ್ಯವಸ್ಥೆಯೇ ಕಂಗೆಟ್ಟಿತ್ತು. ರಾಷ್ಟ್ರದ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸದ ಮೇಲೆ ನಾಗರಿಕರರೇ ದಾಳಿ ನಡೆಸಿ ಅಧ್ವಾನ ಸೃಷ್ಟಿಸಿದ್ದರು. ಇದೀಗ ಆ ರಾಷ್ಟ್ರ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ. ಆದರೆ, ಭಯಂಕರ ತೊಂದರೆಯಲ್ಲಿದ್ದ ನೆರೆಯ ರಾಷ್ಟ್ರಕ್ಕೆ ಹೆಚ್ಚು ನೆರವು ಕೊಟ್ಟಿದ್ದು ಭಾರತ ಎಂಬುದು ಇದೀಗ ಬಯಲಾಗಿದೆ. ಅಲ್ಲಿನ ವಿದೇಶಾಂಗ ಸಚಿವ ಎಮ್​ಯುಎಮ್​ ಅಲಿ ಸಬ್ರಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

ನಾವು ಆರ್ಥಿಕವಾಗಿ ಸುಧಾರಿಸಿಕೊಳ್ಳುವುದರ ಹಿಂದೆ ಭಾರತದ ದೊಡ್ಡ ಪಾತ್ರವಿದೆ. ಉಳಿದ ಎಲ್ಲ ದೇಶಗಳು ಕೊಟ್ಟಿರುವ ನೆರವಿಗಿಂತ ಅಧಿಕ ಭಾರತವೊಂದೇ ಸಹಾಯ ಮಾಡಿದೆ. 31,800 ಕೋಟಿ ರೂಪಾಯಿ ಧನ ಸಹಾಯ ನೀಡುವ ಮೂಲಕ ನಮ್ಮ ಹೋರಾಟದಲ್ಲಿ ಕೈ ಜೋಡಿಸಿದೆ ಎಂದು ಎಎನ್​ಐ ಜತೆ ಮಾತನಾಡಿದ ಎಮ್​ಯುಎಮ್​ ಅಲಿ ಸಬ್ರೆ ಹೇಳಿಕೊಂಡಿದ್ದಾರೆ. ಅವರು ಶ್ರೀಲಂಕಾದ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿ ನೀಡುವ ವೇಳೆ ಭಾರತದ ನೆರವನ್ನು ಸ್ಮರಿಸಿದ್ದು, ಅದು ಶ್ರೇಷ್ಠ ದೇಶ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ: Simbu Marriage: ಶ್ರೀಲಂಕಾದ ಉದ್ಯಮಿಯ ಮಗಳ ಜತೆ ಹಸೆಮಣೆ ಏರಲಿದ್ದಾರಾ ಸಿಂಬು?

ಕಳೆದ ಮೇ ಹಾಗೂ ಜೂನ್​ನಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದೇವೆ. ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ. ರೂಪಾಯಿ ಮೌಲ್ಯ ಸ್ಥಿರವಾಗಿದೆ. ಪೆಟ್ರೋಲ್​ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಸರತಿಯ ಸಾಲು ಕಡಿಮೆಯಾಗಿದೆ. ಪ್ರವಾಸೋದ್ಯಮ ಚೇತರಿಸಿಕೊಂಡಿದೆ. ನಾವು ಪಡೆದುಕೊಂಡಿರುವ ಸಾಲವನ್ನು ವಾಪಸ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Exit mobile version