Site icon Vistara News

Only Adult: ಯುರೋಪ್‌ನ ಈ ವಿಮಾನದಲ್ಲಿ ಓನ್ಲಿ ಅಡಲ್ಟ್ ಸೆಕ್ಷನ್! ಇರಲ್ಲ ಚಿಕ್ಕಮಕ್ಕಳ ಕಿರಿಕಿರಿ

Corendon Airlines

ನವದೆಹಲಿ: ವಿಮಾನ ಪ್ರಯಾಣದ (Flights) ವೇಳೆ ಮಕ್ಕಳು ಮತ್ತು ಅವರಿಂದಾಗುವ ಗಲಾಟೆಯ ಕಿರಿಕಿರಿಯನ್ನು ತಪ್ಪಿಸುವುದಕ್ಕಾಗಿ ಯುರೋಪ್‌ನ ವಿಮಾನಯಾನ ಸಂಸ್ಥೆಯೊಂದು (European Airline) ತಾನು ಕಾರ್ಯಾಚರಿಸುವ ಒಂದು ಮಾರ್ಗದಲ್ಲಿ ಕೇವಲ ಹಿರಿಯರಿಗಾಗಿ (Only Adult) ಎಂಬ ಹೊಸ ಆಸನ ವ್ಯವಸ್ಥೆಯ ಆರಂಭಿಸಿದೆ. ಅಂದರೆ, ಈ ವಿಭಾಗದಲ್ಲಿ 16 ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರಯಾಣಿಕರು ಮಾತ್ರವೇ ಕುಳಿತು ಪ್ರಯಾಣಿಸಬಹುದಾಗಿದೆ.

ಟರ್ಕಿಶ್-ಡಚ್ ಐಷಾರಾಮಿ ಕೊರೆಂಡನ್ ಏರ್‌ಲೈನ್ಸ್ (Corendon Airlines) ಈ ವರ್ಷದ ನವೆಂಬರ್ 3 ರಿಂದ ಆಮ್ಸ್ಟರ್‌ಡ್ಯಾಮ್ ಮತ್ತು ಕುರಾಕಾವೊ ಮಾರ್ಗದ ನಡುವಿನ ವಿಮಾನಗಳಲ್ಲಿ ಈ “ಓನ್ಲಿ ಅಡಲ್ಟ್” ವಲಯಗಳನ್ನು ಪರೀಕ್ಷಿಸುವುದಾಗಿ ಹೇಳಿಕೊಂಡಿದೆ.

ಈ ಸ್ಕೀಮ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್ ಮತ್ತು 93 ಗುಣಮಟ್ಟದ ಆಸನಗಳೊಂದಿಗೆ ಒಂಬತ್ತು ಹೆಚ್ಚುವರಿ-ದೊಡ್ಡ ಆಸನಗಳೊಂದಿಗೆ “ವಯಸ್ಕರಿಗೆ ಮಾತ್ರ” ವಲಯಗಳನ್ನು ರಚಿಸಲು ವಿಮಾನದ ಮುಂಭಾಗದ ವಿಭಾಗವನ್ನು ಕಾಯ್ದಿರಿಸಲಾಗಿದೆ. ಅಂದರೆ ವಿಮಾನದ ಮುಂಭಾಗದ ಸೀಟುಗಳನ್ನು ಓನ್ಲೀ ಅಡಲ್ಟ್ ಸೆಕ್ಷನ್‌ಗೆ ಮೀಸಲಿಡಲಾಗಿದೆ.

ಓನ್ಲೀ ಅಡಲ್ಟ್ ವಲಯವನ್ನು ವಿಮಾನದ ಇತರ ಪ್ರಯಾಣಿಕರ ವಿಭಾಗದೊಂದಿಗೆ ಗೋಡೆ ಅಥವಾ ಪರದೆಗಳ ಮೂಲಕ ಪ್ರತ್ಯೇಕಿಸಲಾಗುವುದು ಎಂದು ಕೊರೆಂಡನ್ ಏರ್‌ಲೈನ್ಸ್ ಹೇಳಿದೆ.

ಈ ಸುದ್ದಿಯನ್ನೂ ಓದಿ: Bengaluru News: ಶಿವಮೊಗ್ಗ-ಬೆಂಗಳೂರು ವಿಮಾನಯಾನ ಸೇವೆ ಆ.31ರಿಂದ ಆರಂಭ

ವಿಮಾನದಲ್ಲಿನ ಈ ವಿಭಾಗವನ್ನು ಮಕ್ಕಳಿಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತು ಶಾಂತ ವಾತಾವರಣದಲ್ಲಿ ಕೆಲಸ ಮಾಡಲು ಬಯಸುವ ಬಿಸಿನೆಸ್‌ಮನ್ ಪ್ರಯಾಣಿಕರಿಗೆ ರೂಪಿಸಲಾಗಿದೆ. ಇದರಿಂದ ಇದು ಚಿಕ್ಕ ಮಕ್ಕಳ ಪೋಷಕರಿಗೆ ಲಾಭವಾಗಲಿದೆ. ತಮ್ಮ ಮಕ್ಕಳ ಕಿರಿಕಿರಿಯಿಂದ ಇತರ ಪ್ರಯಾಣಿಕರಿಗೆ ಆಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ ಎಂದು ವಿಮಾನಯಾನ ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಓನ್ಲಿ ಅಡಲ್ಟ್ ಸೆಕ್ಷನ್ ಆಯ್ಕೆ ಮಾಡಿಕೊಳ್ಳುವ ಪ್ರಯಾಣಿಕರು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ. ಒನ್‌ವೇ ಟಿಕೆಟ್‌ಗಾಗಿ 45 ಯುರೋ ಹೆಚ್ಚವರಿ ಹಣವನ್ನು ನೀಡಬೇಕಾಗುತ್ತದೆ. ಇದೇ ವಿಭಾಗದಲ್ಲಿ ಎಕ್ಸ್ಎಲ್ ಸ್ಥಾನಬೇಕಿದ್ದರೆ 100 ಯುರೋಗಳನ್ನು ಹೆಚ್ಚವರಿಯಾಗಿ ನೀಡಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

Exit mobile version