Site icon Vistara News

TikTok star: ಇರಾಕ್‌ನಲ್ಲಿ ಗುಂಡಿಕ್ಕಿ ಟಿಕ್‌ಟಾಕ್‌ ಸ್ಟಾರ್‌ನ ಭೀಕರ ಹತ್ಯೆ

On Camera, Iraqi Social Media Influencer Shot Dead Outside Baghdad Home

ಬಾಗ್ದಾದ್‌: ಇರಾಕ್‌ನ ಟಿಕ್‌ ಟಾಕ್‌ ಸ್ಟಾರ್‌(TikTok star) ಓಂ ಫಹಾದ್‌(Om Fahad) ರನ್ನು ಬಾಗ್ದಾದ್‌ನ ಜೊಯೌನಾ ಜಿಲ್ಲೆಯಲ್ಲಿ ತಡ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ತಮ್ಮ ಎಸ್‌ಯುವಿ ಕಾರಿನಲ್ಲಿ ಕುಳಿತಿದ್ದ ಫಹಾದ್‌ ಮೇಲೆ ಕಪ್ಪು ಬಟ್ಟೆ ಧರಿಸಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿಕ್ಕಿ ಹತ್ಯೆ (Shot Dead) ಮಾಡಿದ್ದಾರೆ. ಇನ್ನು ಘಟನೆ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಂತರಿಕ ವ್ಯವಹಾರಗಳ ಸಚಿವಾಲಯ( Ministry of Interior) ಈ ಭೀಕರ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಸೂಕ್ತ ತನಿಖೆ ಕೈಗೊಳ್ಳುವುದಾಗಿ ತಿಳಿಸಿದೆ.

ಫಹಾದ್‌ ಅವರ ಮೂಲ ಹೆಸರು ಘುಫ್ರಾನ್‌ ಸವಧಿಯಾಗಿದ್ದು, ಅವರು ಟಿಕ್‌ಟಾಕ್‌ನಲ್ಲಿ ಪಾಪ್‌ ಸಂಗೀತಗಳಿಗೆ ಡಾನ್ಸ್‌ ಮಾಡಿರುವ ವಿಡೀಯೋಗಳನ್ನು ಶೇರ್‌ ಮಾಡುತ್ತಿದ್ದರು. ಸದ್ಯ ಅವರು 5 ಲಕ್ಷ ಫಾಲೋವರ್ಸ್‌ ಅನ್ನು ಹೊಂದಿದ್ದರು. ಇದೀಗ ಅವರ ಬರ್ಬರ ಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪೊಲೀಸರ ತನಿಖೆ ಮುಂದುವರೆದಿದೆ. 2023ರಲ್ಲಿ ಮಾಡಿದ್ದ ಅಶ್ಲೀಲ ವಿಡಿಯೋಗಳು ಭಾರೀ ಸದ್ದು ಮಾಡಿದ್ದವು. ಆ ವಿಡಿಯೋಗಳು 1 ಮಿಲಿಯನ್‌ಗೂ ಅಧಿಕ ವ್ಯೂಸ್‌ ಪಡೆದಿದ್ದವು. ಇದಾದ ಬಳಿಕ ಆಕೆಯ ಬಂಧನವಾಗಿದ್ದು, ಕೋರ್ಟ್‌ ಆರು ತಿಂಗಳ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಇತರೆ ಐವರು ಆನ್‌ಲೈನ್‌ ಕಂಟೆಂಟ್‌ ಕ್ರಿಯೇಟರ್ಸ್‌ ಕೂಡ ಅರೆಸ್ಟ್‌ ಆಗಿ, ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದರು. ಈ ಬಗ್ಗೆ ಜಿನೀವಾ ಮೂಲದ ಯುರೋ-ಮೆಡ್ ಹ್ಯೂಮನ್ ರೈಟ್ಸ್ ಮಾನಿಟರ್ ಕಳೆದ ವರ್ಷ ವರದಿ ನೀಡಿದ್ದು, ಓಂ ಫಹಾದ್ ವಿರುದ್ಧ ದೋಷಾರೋಪಣೆಗೆ ಯಾವುದೇ ಆಧಾರವನ್ನು ಕಂಡು ಬಂದಿಲ್ಲ ಮತ್ತು ಅವರ ವಿಷಯವು ಅಭಿಪ್ರಾಯ, ಅಭಿವ್ಯಕ್ತಿ ಅಥವಾ ಸ್ವಾತಂತ್ರ್ಯದ ಹಕ್ಕುಗಳ ಮಿತಿಯನ್ನು ಮೀರುವುದಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

2023ರಲ್ಲಿ ಇರಾಕಿ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ವಿಡಿಯೋಗಳನ್ನು ಶೇರ್‌ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಓಂ ಫಹಾದ್‌ರಂತೆ ಕೌಟುಂಬಿಕ ಮತ್ತು ಸಾಮಾಜಿಕ ಸಂಪ್ರದಾಯಕ್ಕೆ ಸವಾಲೊಡ್ಡುವಂತಹ ಸೋಶಿಯಲ್‌ ಮೀಡಿಯಾ ಕಂಟೆಂಟ್‌ ಕ್ರಿಯೇಟರ್ಸ್‌ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿತ್ತು. ಅದಕ್ಕಾಗಿ ಒಂದು ಸಮಿತಿಯನ್ನು ಕೂಡ ರಚಿಸಿತ್ತು. ಅಲ್ಲದೇ ಅಂತಹ ಕಂಟೆಂಟ್‌ಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಇರಾಕಿನ್‌ ಪ್ರಜೆಗಳಿಗೂ ಸರ್ಕಾ ಸೂಚಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಸಾವಿರಾರು ಜನ ಈ ಬಗ್ಗೆ ಉತ್ತಮ ಸ್ಪಂದನೆ ನೀಡಿದ್ದರು. ಇದಾದ ಬಳಿಕ ಕೆಲವೊಂದು ಕಂಟೆಂಟ್‌ ಕ್ರಿಯೇಟರ್ಸ್‌ ಬಹಿರಂಗವಾಗಿ ಕ್ಷಮೆಯಾಚಿಸಿ ತಮ್ಮ ತಮ್ಮ ಕಂಟೆಂಟ್‌ಗಳನ್ನು ಡಿಲೀಟ್‌ ಮಾಡಿದ್ದರು.

Exit mobile version