ಕರಾಚಿ: ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ, ಆ ದೇಶವೇ ಹುಟ್ಟಿಸಿದ ಉಗ್ರರೂ ಭೂತಗಳಂತೆ ಕಾಡುತ್ತಿದ್ದಾರೆ. ಜನವರಿ 30ರಂದು ಪೇಷಾವರ ಮಸೀದಿ ಮೇಲೆ ಬಾಂಬ್ ದಾಳಿಯಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ದಾಳಿಯ ಹೊಣೆಯನ್ನು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಅದರ ಬೆನ್ನಲ್ಲೇ ಇನ್ನೊಂದು ಉಗ್ರ ಸಂಘಟನೆ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (TLP terrorists)ದ ಭಯೋತ್ಪಾದಕರು ಈಗ ಕರಾಚಿಯಲ್ಲಿರುವ ಅಹ್ಮದಿ ಮಸೀದಿಯ ಗೋಪುರಸ್ತಂಭಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟಿಎಲ್ಪಿ ಭಯೋತ್ಪಾದಕರು ಹೀಗೆ ಮಸೀದಿಯ ಮೇಲೆಲ್ಲ ಹತ್ತಿ, ಮಿನಾರ್ಗಳನ್ನು ಪುಡಿಗಟ್ಟುತ್ತಿರುವ ವಿಡಿಯೊವನ್ನು ಅಲಿ ರಾಝಾ ಎಂಬುವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕರಾಚಿ ಪೊಲೀಸರನ್ನು ಟ್ಯಾಗ್ ಮಾಡಿ, ಅವರನ್ನು ಅಲರ್ಟ್ ಮಾಡಿದ್ದಾರೆ.
ಪಾಕಿಸ್ತಾನ ತನ್ನ ಕರ್ಮಗಳಿಗೆ ಪ್ರತಿಫಲ ಅನುಭವಿಸುತ್ತಿದೆ. ಒಂದೆಡೆ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ. ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಭಯೋತ್ಪಾದಕತೆಯಿಂದ ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಬಹುದು ಎಂದು ಭಾವಿಸಿದ್ದ ಪಾಕಿಸ್ತಾನಕ್ಕೀಗ ಆರ್ಥಿಕ ಭಯೋತ್ಪಾದಕೆ ಎದುರಾಗಿದೆ. ಜತೆಜತೆಗೆ ಉಗ್ರರು ಪಾಕಿಸ್ತಾನವನ್ನೇ ಧ್ವಂಸಗೊಳಿಸುತ್ತಿದ್ದಾರೆ.
ಇದನ್ನೂ ಓದಿ: Dawood Ibrahim | ದಾವೂದ್ ಇಬ್ರಾಹಿಂ ಪಾಕ್‌ನ ಕರಾಚಿಯಲ್ಲೇ ಇದ್ದಾನೆ, 2ನೇ ಮದ್ವೆಯಾಗಿದ್ದಾನೆ!