ವಾಷಿಂಗ್ಟನ್: ಕಳೆದ ತಿಂಗಳು ಚುನಾವಣಾ ಪ್ರಚಾರ(US Presidential Election)ದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump Assassination Bid) ಮೇಲೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಟ್ರಂಪ್ ಹತ್ಯೆ ಯತ್ನವನ್ನು ಪೊಲೀಸರು ತಡೆಯುತ್ತಿರುವ ದೃಶ್ಯ ಇದಾಗಿದ್ದು, ಪೊಲೀಸರ ಮೈಮೇಲಿದ್ದ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದೆ.
ಘಟನೆ ನಡೆಯುವ ಕೆಲವೇ ಕೆಲವು ಕ್ಷಣಗಳಿಗೆ ಮುನ್ನ ನಡೆದ ಘಟನೆಯ ದೃಶ್ಯವನ್ನು ಪೆನ್ಸಿಲ್ವೇನಿಯಾದ ಪೊಲೀಸರು ಬಿಡುಗಡೆ ಮಾಡಿದ್ದು, ಗುರುವಾರ ಬಿಡುಗಡೆಯಾದ ತುಣುಕಿನಲ್ಲಿ, ಬಟ್ಲರ್ ಟೌನ್‌ಶಿಪ್ ಪೊಲೀಸ್ ಅಧಿಕಾರಿಗಳು ಡಿಪಿಎಂಎಸ್ ಎಆರ್ -15 ರೈಫಲ್‌ನೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಆರೋಪಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಹತಾಶ ಪ್ರಯತ್ನಗಳನ್ನು ಸೆರೆಹಿಡಿಯಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್ ಸಮೇತ ಇದ್ದ ಎನ್ನಲಾಗಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಕ್ರೂಕ್‌ನನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್ ಹೊಡೆದುರುಳಿಸಿತ್ತು.
ಇನ್ನು ಕ್ರೂಕ್‌ನ ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಸ್ಫೋಟಕ ವಸ್ತುವಿನಂತೆ ಕಾಣುತ್ತಿದ್ದು, ಬಾಂಬ್ ನಿಷ್ಕ್ರೀಯ ದಳ ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಇನ್ನು ಆತನ ಫೋನ್ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನು ಟ್ರಂಪ್ ಮೇಲಿನ ದಾಳಿಗೆ ಕ್ರೂಕ್ ಬಳಸಿದ್ದ ಬಂದೂಕು AR ಸೆಮಿ ಅಟೋಮ್ಯಾಟಿಕ್ ಬಂದೂಕ್ ಆಗಿದ್ದು, ಇದನ್ನು ಕ್ರೂಕ್‌ನ ತಂದೆ ಕಾನೂನು ಪ್ರಕಾರ ಖರೀದಿಸಿದ್ದ ಎನ್ನಲಾಗಿದೆ.
ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ದೊಡ್ಡ ಸ್ಫೋಟದ ನಂತರ ಟ್ರಂಪ್ ಗಾಯಗೊಂಡಂತೆ ನೆಲಕ್ಕೆ ಬಿದ್ದರು. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿ ವೇದಿಕೆಯಿಂದ ಹೊರಗೆ ಕರೆದೊಯ್ಯುತ್ತಿದ್ದರು. ಇನ್ನು ಅಲ್ಲಿ ನೆರೆದಿದ್ದ ಅನೇಕ ಜನ ಗಾಬರಿಯಲ್ಲಿ ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಟ್ರಂಪ್ ಜನಸಮೂಹದ ಕಡೆಗೆ ಕೂಗುತ್ತಿರುವಂತೆ ತೋರಿತು ಮತ್ತು ಅವರು ಆತುರದಿಂದ ಹೊರಟಾಗ ತಮ್ಮ ಮುಷ್ಟಿಯನ್ನು ಪಂಪ್ ಮಾಡುತ್ತಿರುವುದು ಕಂಡುಬಂದಿದೆ. ಟ್ರಂಪ್ ಸುರಕ್ಷಿತವಾಗಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದನ್ನೂ ಓದಿ: Asif Merchant: ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಅರೆಸ್ಟ್