ನವದೆಹಲಿ: ಟರ್ಕಿಯ ಅಧ್ಯಕ್ಷರಾಗಿ ರಿಜೆಪ್ ತಾಯಿಪ್ ಎರ್ಡೊವನ್ (Recep Tayyip Erdogan) ಅವರು ಭಾನುವಾರ ಮತ್ತೊಂದು ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಭೂಕಂಪ ತೀವ್ರ ಸಂಕಟ ಎದುರಿಸಿದ ಹಾಗೂ ಹಣದುಬ್ಬರದಿಂದ ತತ್ತರಿಸುತ್ತಿರುವ ಟರ್ಕಿಯಲ್ಲಿ ಎರ್ಡೊವನ್ ಅವರ ಸರ್ವಾಧಿಕಾರದ ಆಡಳಿತ ಮೂರನೇ ದಶಕಕ್ಕೆ ವಿಸ್ತರಣೆಯಾಗಿದೆ. ಟರ್ಕಿಯಲ್ಲಿ ಭೂಕಂಪ (Turkey Earthquake) ಸಂಭವಿಸಿದಾಗ ಮಾನವೀಯ ನೆಲೆಯಲ್ಲಿ ಭಾರತವು ಆಪರೇಷನ್ ದೋಸ್ತ್ (Operation Dost) ಪರಿಹಾರ ಕಾರ್ಯಾಚರಣೆ ಕೈಗೊಂಡು, ಹಲವು ರೀತಿಯಲ್ಲಿ ನೆರವು ಒದಗಿಸಿತ್ತು. ಹೀಗಿದ್ದಾಗ್ಯೂ, ಟರ್ಕಿಯ ಅಧ್ಯಕ್ಷ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮತ ಚಲಾಯಿಸಿದ್ದರು(Turkey election 2023).
ಮೂರನೇ ಅವಧಿಯು ಧ್ರುವೀಕರಣದ ಜನಪರವಾದ ಆಯ್ಕೆಯು ಎರ್ಡೊವನ್‌ಗೆ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸಿದೆ. ಭಾನುವಾರ ನಡೆದ ಚುನಾವಣಾ ಫಲಿತಾಂಶವು ರಾಜಧಾನಿ ಅಂಕಾರದಾಚೆಯೂ ಸಾಕಷ್ಟು ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಯುರೋಪ್ ಮತ್ತು ಏಷ್ಯಾ ನಡುವೆ ನಿಂತಿರುವ ಟರ್ಕಿ, ನ್ಯಾಟೋದಲ್ಲಿ ಅದು ಪ್ರಮುಖ ಪಾತ್ರ ನಿರ್ವಹಿಸಲಿದೆ.
ಭಾನುವಾರ ಶೇ.99ರಷ್ಟು ಮತಪೆಟ್ಟಿಗೆಗಳನ್ನು ಓಪನ್ ಮಾಡಲಾಗಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ ಎರ್ಡೊವನ್ ಅವರು ಶೇ.52ರಷ್ಟು ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಎರ್ಡೊವನ್ ಅವರ ಪ್ರತಿಸ್ಪರ್ಧಿ ಕೆಮಾಲ್ ಕುಲ್ಚದಾರೆಲೋ (Kemal Kilicdaroglu) ಶೇ.48 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದ್ದಾರೆ. ಈ ಮಧ್ಯೆ, ಟರ್ಕಿಯ ಚುನಾವಣಾ ಸಂಸ್ಥೆಯ ಎರ್ಡೊವನ್ ಅವರ ಗೆಲುವನ್ನು ಖಚಿತಪಡಿಸಿದೆ.
ಮತ್ತೆ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕಾಗಿ ರಿಜೆಪ್ ತಾಯಿಪ್ ಎರ್ಡೊವನ್ ಅವರು ಇಸ್ತಾಂಬುಲ್ ಹಾಗೂ ಅಂಕಾರಾ ನಗರಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ, ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನಾವು 21 ವರ್ಷಗಳಿಂದ ನಿಮ್ಮ ನಂಬಿಕೆಗೆ ಅರ್ಹರಾಗಿದ್ದೇವೆ ಎಂದು ನಾವು ಭಾವಿಸುತ್ತೇವೆ ಎರ್ಡೊವನ್ ಜನರನ್ನು ಉದ್ದೇಶಿಸಿ, ಇಸ್ತಾಂಬುಲ್‌ನಲ್ಲಿರುವ ತಮ್ಮ ಮನೆಯ ಹೊರಗೆ ನೆರೆದಿದ್ದ ಜನರಿಗೆ ಹೇಳಿದರು.
ಈ ಸುದ್ದಿಯನ್ನೂ ಓದಿ: Earthquake In Turkey: ಟರ್ಕಿ ಭೂಕಂಪದಲ್ಲಿ ಬೆಂಗಳೂರು ಮೂಲದ ಟೆಕ್ಕಿ ಸಾವು, ಅವಶೇಷಗಳ ಅಡಿಯಲ್ಲಿ ಶವ ಪತ್ತೆ
ರಿಜೆಪ್ ತಾಯಿಪ್ ಎರ್ಡೊವನ್ ಅವರು ಮರು ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಬೀದಿಗಿಳಿದು ಸಂಭ್ರಮಾಚರೆ ಮಾಡಿದರು. ತುರ್ಕಿಶ್ ಪಾರ್ಟಿಯ ಧ್ವಜಗಳೊಂದಿಗೆ ಬೀದಿಗಳಲ್ಲಿ ಸುತ್ತಿತದರು. ವಾಹನಗಳ ಹಾರ್ನ್ ಮಾಡುತ್ತಾ, ಎರ್ಡೊವನ್ ಹೆಸರು ಕೂಗುತ್ತಾ ಅವರ ಬೆಂಬಲಿಗರು ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದರು. ಇಸ್ತಾಂಬುಲ್‌ನ ಕೆಲವು ಕಡೆ ಸಂಭ್ರಮಕ್ಕಾಗಿ ಗುಂಡು ಹಾರಿಸಿದ ಘಟನೆಗಳು ಕೂಡ ವರದಿಯಾಗಿವೆ ಎಂದು ತಿಳಿದು ಬಂದಿವೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.