Site icon Vistara News

Turkey Syria Earthquake: ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 19,300ಕ್ಕೆ, ಇಂಡೋನೇಷ್ಯಾದಲ್ಲೂ ಭೂಕಂಪಕ್ಕೆ 4 ಸಾವು

Turkey earthquake

ಅಂಕಾರ: ಎರಡು ಪ್ರಬಲ ಭೂಕಂಪಗಳ (Turkey Syria Earthquake) ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶದಲ್ಲಿ ಜನರ ಮಾರಣಹೋಮ ಮುಂದುವರಿದಿದ್ದು, ಮೃತರ ಸಂಖ್ಯೆ ೧೯,೩೦೦ ದಾಟಿದೆ. ಭದ್ರತಾ ಸಿಬ್ಬಂದಿ, ಪೊಲೀಸರು ಇನ್ನೂ ಜನರ ರಕ್ಷಣೆಗೆ ಹರಸಾಹಸಪಡುತ್ತಿದ್ದು, ಹಗಲು ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಿದ್ದರೂ, ರಕ್ಷಣಾ ಕಾರ್ಯ ಮುಗಿಯುತ್ತಿಲ್ಲ.

ಕಟ್ಟಡಗಳ ಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿರುವ ಶವಗಳನ್ನು ಹೊರತೆಗೆಯಲಾಗುತ್ತಿದೆ. ಗಾಯಗೊಂಡವರ ಸಂಖ್ಯೆಯೂ ಜಾಸ್ತಿಯಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಗತ್ತಿನ ಹಲವು ರಾಷ್ಟ್ರಗಳಿಂದ ಎರಡೂ ರಾಷ್ಟ್ರಗಳಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡಲಾಗುತ್ತಿದೆ. ಆಹಾರ ಸೇರಿ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಆದರೂ, ಸಾವಿರಾರು ಜನ ಇನ್ನೂ ಸಂಕಷ್ಟದಲ್ಲಿಯೇ ಕಾಲ ಕಳೆಯುವಂತಾಗಿದೆ.

ಇಂಡೋನೇಷ್ಯಾದಲ್ಲೂ ಭೂಕಂಪ, ನಾಲ್ವರ ಸಾವು

ಇಂಡೋನೇಷ್ಯಾದ ಪಪುವಾದಲ್ಲಿಯೂ ಗುರುವಾರ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ಒಂದೂವರೆ ಸುಮಾರಿಗೆ ಭೂಕಂಪ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ರಿಕ್ಟರ್‌ ಮಾಪನದಲ್ಲಿ ೫.೨ ತೀವ್ರತೆ ದಾಖಲಾಗಿದ್ದು, ಭೂಖಂಪದ ತೀವ್ರತೆಯಿಂದ ಉಂಟಾದ ಅನಾಹುತಗಳಿಂದಾಗಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Turkey Earthquake: ಭೂಕಂಪದಲ್ಲಿ ಮೃತಪಟ್ಟ ಟರ್ಕಿಯ ಫುಟ್ಬಾಲ್​ ಆಟಗಾರ

Exit mobile version