Site icon Vistara News

Boris Johnson: ಬ್ರಿಟನ್ ಮಾಜಿ ಪ್ರಧಾನಿ ಈಗ ನ್ಯೂಸ್‌ ಚಾನೆಲ್‌ನಲ್ಲಿ ಆ್ಯಂಕರ್!

UK Former PM Boris Johnson will be a presenter at GB News

ಲಂಡನ್: ಇಂಗ್ಲೆಂಡ್‌ನ ಪ್ರಮುಖ ಪತ್ರಿಕೆಯಾಗಿರುವ ಡೈಲಿ ಮೇಲ್‌ (Daily Mail) ಅಂಕಣಕಾರರಾಗಿ (Columnist) ಗುರುತಿಸಿಕೊಂಡಿರುವ ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (UK former PM Boris Johnson) ಈಗ ಮಾಧ್ಯಮದಲ್ಲಿ ಮತ್ತೊಂದು ಪಾತ್ರನಿರ್ವಹಣೆಗೆ ಸಜ್ಜಾಗಿದ್ದಾರೆ. ಜಿಬಿ ನ್ಯೂಸ್‌ (GB News) ಸುದ್ದಿವಾಹಿನಿಯನ್ನು ಸೇರುತ್ತಿರುವುದಾಗಿ ಘೋಷಿಸಿದ್ದಾರೆ(presenter). ಎಕ್ಸ್ ವೇದಿಕೆಯಲ್ಲಿ ಈ ಮಾಹಿತಿಯನ್ನು ಮಾಜಿ ಪಿಎಂ ಬೋರಿಸ್ ಜಾನ್ಸನ್ ಹಂಚಿಕೊಂಡಿದ್ದಾರೆ.

ರಷ್ಯಾದಿಂದ ಚೀನಾ, ಉಕ್ರೇನ್‌ನಲ್ಲಿ ಯುದ್ಧ ಸೇರಿದಂತೆ ನಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಳ್ಳಲು ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುವುದು ಸೇರಿದಂತೆ ಅನೇಕ ಸಂಗತಿಗಳ ಮೇಲೆ ನಾನು ನನ್ನ ವಿಚಾರವನ್ನು ಈ ಹೊಸ ಟಿವಿ ಚಾನೆಲ್‌ನಲ್ಲಿ ನೀಡಲಿದ್ದೇನೆ ಎಂದು ಬ್ರಿಟನ್ ಮಾಜಿ ಪಿಎಂ ಬೋರಿಸ್ ಜಾನ್ಸನ್ ಅವರು ತಿಳಿಸಿದ್ದಾರೆ.

ಬೋರಿಸ್ ಜಾನ್ಸನ್ ಅವರು 2024ರ ಆರಂಭದಲ್ಲಿ ನಿರೂಪಕರಾಗಿ, ಕಾರ್ಯಕ್ರಮ ತಯಾರಕರಾಗಿ ಹಾಗೂ ವಿಶ್ಲೇಷಣೆಕಾರರಾಗಿ ಕೆಲಸ ಮಾಡಲಿದ್ದಾರೆ. ಅಲ್ಲದೇ, ಮುಂದಿನ ವರ್ಷ ನಿರೀಕ್ಷಿತ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆ ಮತ್ತು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳನ್ನು ಕವರ್ ಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಜಿಬಿ ನ್ಯೂಸ್ ಹೇಳಿದೆ.

ಈ ಸುದ್ದಿಯನ್ನೂ ಓದಿ: 8ನೇ ಮಗುವಿಗೆ ಅಪ್ಪನಾಗ್ತಿದ್ದಾರೆ ಬ್ರಿಟನ್​ ಮಾಜಿ ಪ್ರಧಾನಿ, 58ವರ್ಷದ ಬೋರಿಸ್ ಜಾನ್ಸನ್

ಜಿಬಿ ನ್ಯೂಸ್ ಟಿವಿ ಚಾನೆಲ್ 2021ರಲ್ಲಿ ಲಾಂಚ್ ಆಗಿದೆ. ಸುದ್ದಿ, ಅಭಿಪ್ರಾಯ ಮತ್ತು ವಿಶ್ಲೇಷಣೆಗಳನ್ನು ಒಳಗೊಂಡ ಮಿಶ್ರ ಕಾರ್ಯಕ್ರಮಗಳನ್ನು ಈ ಟಿವಿ ಪ್ರಸಾರ ಮಾಡುತ್ತದೆ. ಬ್ರಿಟನ್‌ನ ಇತರ ಟಿವಿಗಳಿಗಿಂತಲೂ ಅಮೆರಿಕದ ಫಾಕ್ಸ್‌ ನ್ಯೂಸ್‌ ಅನ್ನು ಈ ಟಿವಿಗೆ ಹೋಲಿಕೆ ಮಾಡಬಹುದು. ಇತ್ತೀಚೆಗಷ್ಟೇ ಆರಂಭವಾಗಿದ್ದರೂ ಅನೇಕ ಬಾರಿ ಪ್ರಸಾರದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಬ್ರಿಟನ್‌ನ ಬ್ರಾಡ್‌ಕಾಸ್ಟಿಂಗ್ ವಾಚ್ ಡಾಗ್ ಹೇಳಿದೆ.

ಬ್ರೆಕ್ಸಿಟ್‌ ಚಳವಳಿಯ ಪ್ರಮುಖ ನಾಯಕರಾಗಿರುವ ಬೋರಿಸ್ ಜಾನ್ಸನ್ ಅವರು 2019ರಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದರು. ಅಲ್ಲದೇ, ಆ ವರ್ಷದ ಬಳಿಕ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದರು. ಆದರೆ, ನಾನಾ ಹಗರಣಗಳ ಕಾರಣದಿಂದಾಗಿ ಅವರು 2022ರಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಬೋರಿಸ್ ಜಾನ್ಸನ್ ಅವರು ರಾಜಕೀಯಕ್ಕೆ ಸೇರುವ ಮುನ್ನು ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಕಳೆದ ಜೂನ್ ತಿಂಗಳಿಂದ ಡೈಲ್ ಮೇಲ್‌ಗೆ ಅಂಕಣಕಾರರಾಗಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version