Site icon Vistara News

Swami Nithyananda | ಬ್ರಿಟನ್‌ ಸಂಸತ್ತಿನಲ್ಲಿ ದೀಪಾವಳಿ ಆಚರಿಸಿದನೇ ನಿತ್ಯಾನಂದ?

Swami Nithyananda

ಲಂಡನ್‌: ಅತ್ಯಾಚಾರ, ಮಕ್ಕಳ ಅಪಹರಣ ಆರೋಪ ಹೊತ್ತು ಭಾರತದಿಂದಲೇ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನು (Swami Nithyananda) ಆಹ್ವಾನದ ಮೇರೆಗೆ ಬ್ರಿಟನ್‌ ಸಂಸತ್ತಿನಲ್ಲಿ ದೀಪಾವಳಿ ಆಚರಣೆ ಮಾಡಿದರೇ? ಜಾಗತಿಕ ಮಾಧ್ಯಮ ಸಂಸ್ಥೆಯೊಂದು ಮಾಡಿರುವ ವರದಿಯು ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.

“ಇದೇ ವರ್ಷದ ಜನವರಿಯಲ್ಲಿ ಅಮೆರಿಕದ ಸಂಸತ್ತಿನ (House Of Lord)ಲ್ಲಿ ದೀಪಾವಳಿ ಆಚರಿಸಲಾಗಿತ್ತು. ಆಚರಣೆಯಲ್ಲಿ ಭಾಗವಹಿಸುವಂತೆ ಬ್ರಿಟನ್‌ ಸಂಸದರಾದ ಬಾಬ್‌ ಬ್ಲ್ಯಾಕ್‌ಮ್ಯಾನ್‌ ಹಾಗೂ ರಮಿಂದರ್‌ ಸಿಂಗ್‌ ಅವರು ಆಹ್ವಾನಿಸಿದ್ದರು. ಆಹ್ವಾನದ ಮೇರೆಗೆ, ನಿತ್ಯಾನಂದನ ಶಿಷ್ಯ, ಬ್ರಿಟನ್‌ ಪ್ರತಿನಿಧಿ ಆತ್ಮದಯ ಎಂಬಾತನು ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ್ದ” ಎಂದು ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ನಿತ್ಯಾನಂದನ ಶಿಷ್ಯನು ಆಚರಣೆಯಲ್ಲಿ ಭಾಗಿಯಾಗಿರುವ ಕುರಿತು ನಿತ್ಯಾನಂದ ಜಾಹೀರಾತು ಕೂಡ ಪ್ರಕಟಿಸಿದ್ದಾನೆ ಎಂದು ತಿಳಿದುಬಂದಿದೆ. ಇದು ಈಗ ಬ್ರಿಟನ್‌ನಲ್ಲಿ ವಿವಾದಕ್ಕೂ ಕಾರಣವಾಗಿದೆ. ಶಿಷ್ಯೆಯ ಮೇಲೆಯೇ ಅತ್ಯಾಚಾರ, ಮಕ್ಕಳ ಅಪಹರಣ ಪ್ರಕರಣದಲ್ಲಿ ಸಿಲುಕಿರುವ ನಿತ್ಯಾನಂದನು, ೨೦೧೯ರಲ್ಲಿಯೇ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಈಕ್ವೆಡಾರ್‌ ದೇಶದಲ್ಲಿ ದ್ವೀಪವೊಂದನ್ನು ಖರೀದಿಸಿ, ಆ ದ್ವೀಪಕ್ಕೆ ಕೈಲಾಸ ಎಂದು ಹೆಸರಿಟ್ಟುಕೊಂಡು, ಅಲ್ಲಿಯೇ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Nityanand Swamy | ನಿತ್ಯಾನಂದ ಸ್ವಾಮಿಯನ್ನು ಮದುವೆ ಆಗುವ ಆಸೆಯಂತೆ ಈ ನಟಿಗೆ!

Exit mobile version