ನವ ದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತವನ್ನು (UN Security Council) ರಷ್ಯಾ ಬೆಂಬಲಿಸಿದೆ.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ 77ನೇ ಅಧಿವೇಶನದಲ್ಲಿ ಮಾತನಾಡಿದ ರಷ್ಯಾ ಹಣಕಾಸು ಸಚಿವ ಸರ್ಗಿ ಲಾವ್ರೊ, ” ವಿಶ್ವಸಂಸ್ಥೆಯ ಭದ್ರತಾಮಂಡಳಿಯನ್ನು ಹೆಚ್ಚು ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿಸ್ತರಿಸಬೇಕಾಗಿದೆ. ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕದ ದೇಶಗಳನ್ನು ಸೇರಿಸಬೇಕು. ಕಾಯಂ ಸದಸ್ಯತ್ವಕ್ಕೆ ಭಾರತ ಮತ್ತು ಬ್ರೆಜಿಲ್ ಅನ್ನು ಪರಿಗಣಿಸಬೇಕುʼʼ ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ಭಾರತಕ್ಕೆ ನೀಡಬೇಕು ಎಂದು ಹೇಳಿದ್ದಾರೆ. ಜರ್ಮನಿ, ಜಪಾನ್, ಬ್ರೆಜಿಲ್ ಮತ್ತು ಭಾರತವನ್ನು ಸೇರಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಇದುವರೆಗೆ 32 ದೇಶಗಳು ವಿಶ್ವಸಂಸ್ಥೆಯ ಸುಧಾರಣೆಯನ್ನು ಬೆಂಬಲಿಸಿವೆ.
ಭಾರತ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ 15 ಸದಸ್ಯ ರಾಷ್ಟ್ರಗಳಲ್ಲೊಂದು. ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್, ಅಮೆರಿಕ ಕಾಯಂ ಸದಸ್ಯ ರಾಷ್ಟ್ರಗಳಾಗಿವೆ.