ಅಮೆರಿಕ: ಪಾಕಿಸ್ತಾನ(Pakistan) ಎಲ್ಲಾ ಆಯಾಮಗಳಲ್ಲಿ ಅತ್ಯಂತ ಸಂಶಯಾತ್ಮಕ ಚಟುವಟಿಕೆ, ದುಷ್ಕೃತ್ಯ(dubious track)ಗಳ ಟ್ರ್ಯಾಕ್ ರೆಕಾರ್ಡ್‌ಗಳನ್ನು ಹೊಂದಿದೆ ಎಂದು ವಿಶ್ವಸಂಸ್ಥೆ(United States)ಯಲ್ಲಿ ಭಾರತ ಹೇಳಿದೆ. ವಿಶ್ವಸಂಸ್ಥೆಯ(United Nations) ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ (Ruchira Kamboj)ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ. ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಮತ್ತು ಅಯೋಧ್ಯೆಯಲ್ಲಿರುವ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ ವಿಶ್ವಸಂಸ್ತೆಯ ಪಾಕಿಸ್ತಾನದ ಪ್ರತಿನಿಧಿ ಮನೀರ್ ಅಕ್ರಮ್ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ, ಪಾಕಿಸ್ತಾನ ಸದಾ ಕುಕೃತ್ಯಗಳ ಮೂಲಕವೇ ಕುಖ್ಯಾತಿಯನ್ನು ಪಡೆದಿದೆ ಎಂದು ತಿರುಗೇಟು ಕೊಟ್ಟರು.
ಶಾಂತಿಯ ಸೌದಾರ್ಹತೆಯ ಸಂಸ್ಕೃತಿ ಎಂಬ ವಿಚಾರದ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ರುಚಿರಾ, ಇಂತಹ ಸವಾಲಿನ ಸ್ಥಿತಿಯಲ್ಲೂ ಭಾರತ ಶಾಂತಿ ಕಾಪಾಡಲು ಯತ್ನಿಸುತ್ತಿದೆ. ರಚನಾತ್ಮಕ ಮಾತುಕತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ನಾವು ಆದಷ್ಟು ಇಂತಹ ಟೀಕೆಗಳಿಗೆ ತಲೆಗೆಡಿಸಿಕೊಳ್ಳದೇ ಧನಾತ್ಮಕವಾಗಿ ಮುಂದುವರೆಯಲು ಇಚ್ಛಿಸುತ್ತೇವೆ. ನಮ್ಮ ಎದುರಿಗಿರುವವರು ನೀಡಿರುವ ಹೇಳಿಕೆ ಅವರ ವಿನಾಶಕಾರಿ ಮನೋಭಾವನ್ನು ತೋರಿಸುತ್ತದೆ. ಗೌರವ ಮತ್ತು ರಾಜತಾಂತ್ರಿಕವಾಗಿ ವಿಷಯಗಳನ್ನು ಚರ್ಚಿಸುವುದಕ್ಕೆ ಭಾರತ ಯಾವಾಗಲೂ ಬೆಂಬಲ ನೀಡುತ್ತದೆ. ಸ್ವತಃ ತನ್ನ ಬಂದರುಗಳಲ್ಲಿ ವಿನಾಶಕಾರಿ ಚಟುವಟಿಕೆಗಳು ನಡೆಯುತ್ತಿರುವ ದೇಶದ ಬಗ್ಗೆ ಕೇಳವಂತಹ ಮತ್ತು ಟೀಕಿಸುವಂತಹ ಉದ್ದೇಶ ನಮಗೂ ಇದೆ ಎಂದು ಖಡಕ್ಕಾಗಿ ಹೇಳಿದ್ದಾರೆ.
ಭಯೋತ್ಪಾದನೆ ಎಂಬುದು ಎಲ್ಲಾ ಧರ್ಮಗಳು ಪ್ರತಿಪಾದಿಸುವ ಶಾಂತಿ ಮತ್ತು ಸೌಹಾರ್ದತೆಗೆ ನೇರ ತದ್ವಿರುದ್ಧವಾದ ವಿಚಾರವಾಗಿದೆ. ಅದು ಒಳ್ಳೆಯ ವಿಚಾರಗಳಿಗೆ ಅಡ್ಡಿಯಾಗಿ ನಿಂತಿದ್ದು, ಹಗೆತನವನ್ನು ಹುಟ್ಟುಹಾಕುತ್ತದೆ ಮತ್ತು ವಿಶ್ವಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಆಧಾರವಾಗಿರುವ ಗೌರವ ಮತ್ತು ಸಾಮರಸ್ಯದ ಸಾರ್ವತ್ರಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯರು ಒಟ್ಟಾಗಿ ನಿಂತಿ ಪ್ರಪಂಚಾದ್ಯಂತ ಶಾಂತಿ ಸೌಹಾರ್ದತೆ ಕಾಪಾಡಲು ಪಣತೊಡಬೇಕಿದೆ. ಇಡೀ ಪ್ರಪಂಚವೇ ಒಂದು ಕುಟುಂಬ. ನನ್ನ ದೇಶ ಇದರಲ್ಲಿ ನಂಬಿಕೆಯನ್ನಿಟ್ಟುಕೊಂಡಿದೆ ಎಂದು ರುಚಿಕಾ ಹೇಳಿದರು.
ಇದನ್ನೂ ಓದಿ:Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ
ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಅಸಮ ಅಭಿವೃದ್ಧಿಯಿಂದ ಜಗತ್ತು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ, ತಾರತಮ್ಯ ಮತ್ತು ಹಿಂಸಾಚಾರದ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಚರ್ಚ್‌ಗಳು, ಮಠಗಳು, ಗುರುದ್ವಾರಗಳು, ಮಸೀದಿಗಳು, ದೇವಾಲಯಗಳು ಮತ್ತು ಸಿನಗಾಗ್‌ಗಳು ಸೇರಿದಂತೆ ಪವಿತ್ರ ಸ್ಥಳಗಳ ಮೇಲೆ ಹೆಚ್ಚುತ್ತಿರುವ ದಾಳಿಯಿಂದ ನಾವು ವಿಶೇಷವಾಗಿ ಕಳವಳಗೊಂಡಿದ್ದೇವೆ, ಅಂತಹ ಕೃತ್ಯಗಳಿಗೆ ಜಾಗತಿಕ ಸಮುದಾಯದಿಂದ ತ್ವರಿತ ಮತ್ತು ಒಗ್ಗಟ್ಟಿನ ಪ್ರತಿಕ್ರಿಯೆಯ ಅಗತ್ಯವಿದೆ. ಹೀಗಾಗಿ ರಾಯಕೀಯ ಲಾಭ ಮರೆತು ಸವಾಲುಗಳನ್ನು ಎದುರಿಸುವ ಪ್ರಯತ್ನ ಮಾಡೋಣ ಎಂದು ಅವರು ಹೇಳಿದರು.