Site icon Vistara News

US Citizenship: 99 ವರ್ಷದ ಭಾರತೀಯ ಮಹಿಳೆಗೆ ಯುಎಸ್ ಪೌರತ್ವ; ಯುಎಸ್‌ಸಿಐಎಸ್ ಹೇಳಿದ್ದೇನು ?

US Citizenship

ಹೊಸದಿಲ್ಲಿ: ವಯಸ್ಸು (age) ಎನ್ನುವುದು ಕೇವಲ ಒಂದು ಸಂಖ್ಯೆ ಮಾತ್ರ. ಸಾಧಿಸಬೇಕು ಎನ್ನುವ ಛಲ, ಹುಮ್ಮಸ್ಸು ಇದ್ದಾಗ ಯಾರಿಂದಲೂ ನಮ್ಮನ್ನು ತಡೆಯುವುದು ಸಾಧ್ಯವಾಗದು. ಇದನ್ನು ಭಾರತೀಯ ಮಹಿಳೆಯೊಬ್ಬರು ನಿರೂಪಿಸಿದ್ದಾರೆ. ಇನ್ನೊಂದು ವರ್ಷ ದಾಟಿದರೆ ಅವರು ಶತಾಯುಷಿಯಾಗುತ್ತಾರೆ. ಆದರೆ ಈ ಇಳಿ ವಯಸ್ಸಿನಲ್ಲಿ ಅವರು ಅಮೆರಿಕದ ಪೌರತ್ವವನ್ನು (US Citizenship) ಪಡೆದುಕೊಂಡಿದ್ದಾರೆ.

99 ವರ್ಷದ ಭಾರತೀಯ ಮಹಿಳೆ ದೈಬಾಯಿ (Daibai) ಅವರು ತಮ್ಮ ಬದುಕಿನ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಯುಎಸ್ ಪೌರತ್ವ ಪಡೆದಿರುವ ಅವರ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ನ ಪೌರತ್ವ ಮತ್ತು ವಲಸೆ ಸೇವೆ (USCIS) ವಿಭಾಗವು ದೈಬಾಯಿ ಅವರನ್ನು “ಉತ್ಸಾಹಭರಿತ” ಮಹಿಳೆ. ಅವರ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಒರ್ಲ್ಯಾಂಡೊ (Orlando) ಕಚೇರಿಯಲ್ಲಿ ಹೊಸ ಯುಎಸ್ ನಾಗರೀಕರಾಗಿರುವ ಭಾರತದಿಂದ ಬಂದಿದ್ದು, ನಿಷ್ಠೆಯ ಪ್ರಮಾಣವಚನ ಸ್ವೀಕರಿಸಲು ಉತ್ಸುಕರಾಗಿದ್ದರು ಎಂದು ಹೇಳಿದೆ.

ಇದನ್ನೂ ಓದಿ: Statue of Liberty: ಭೂಕಂಪದ ತೀವ್ರತೆಗೆ ಅಲುಗಾಡಿದ ಸ್ಟ್ಯಾಚು ಆಫ್‌ ಲಿಬರ್ಟಿ; Video ಇದೆ

ತಮ್ಮ ಮಗಳೊಂದಿಗೆ ಬಂದಿದ್ದ ಅವರಿಗೆ ಪ್ರಮಾಣ ವಚನ ನೀಡಿದ ನಮ್ಮ ಅಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಯುಎಸ್‌ಸಿಐಎಸ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಯುಎಸ್‌ಸಿಐಎಸ್ ನಲ್ಲಿ ಒರ್ಲ್ಯಾಂಡೊ ಕಚೇರಿಗೆ ಗಾಲಿ ಕುರ್ಚಿಯಲ್ಲಿ ಬಂದ ದೈಬಾಯಿ ತಮ್ಮ ಪೌರತ್ವ ಪ್ರಮಾಣ ಪತ್ರದೊಂದಿಗೆ ಪೋಸ್ ನೀಡಿದ ಅದ್ಬುತ ಕ್ಷಣಗಳನ್ನು ಚಿತ್ರದ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಅವರ ಮಗಳು ಮತ್ತು ಅವರಿಗೆ ಪ್ರಮಾಣ ವಚನ ಮಾಡಿಸಿದ ಅಧಿಕಾರಿ ಇದ್ದಾರೆ.

ಯುಎಸ್‌ಸಿಐಎಸ್ ವಲಸಿಗರ ವೀಸಾ, ನವೀಕರಣ, ವಸತಿ ಮತ್ತು ಗ್ರೀನ್ ಕಾರ್ಡ್ ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರ್ಯವನ್ನು ನಡೆಸುತ್ತದೆ. ನೂರಾರು ಭಾರತೀಯ ಟೆಕ್ಕಿಗಳು ಯುಎಸ್ ನಲ್ಲಿ ಕೆಲಸ ಮಾಡಲು ಬಳಸುತ್ತಿರುವ ಹೆಚ್-1ಬಿ ವೀಸಾಗಳಂತಹ ವಲಸೆ-ಅಲ್ಲದ ತಾತ್ಕಾಲಿಕ ಉದ್ಯೋಗಿಗಳಿಗೆ ಅರ್ಜಿಗಳ ಕೆಲಸಗಳನ್ನೂ ಏಜೆನ್ಸಿ ನೋಡಿಕೊಳ್ಳುತ್ತದೆ.

ದೈಬಾಯಿಗೆ ಈಗ ಪೌರತ್ವ ನೀಡಿರುವುದಕ್ಕೆ ಎಕ್ಸ್ ನಲ್ಲಿ ಈ ಒಂದು ಪ್ರಕ್ರಿಯೆಗೆ ಯುಎಸ್ ಗೆ ಏಕೆ ಇಷ್ಟು ಸಮಯ ತೆಗೆದುಕೊಂಡಿತು ಎಂದು ಪ್ರಶ್ನಿಸುತ್ತಿದ್ದಾರೆ. ದೈಬಾಯಿ ಅವರು ಹಲವು ವರ್ಷಗಳಿಂದ ತಮ್ಮ ಮಗಳೊಂದಿಗೆ ಫ್ಲೋರಿಡಾದಲ್ಲಿ ವಾಸವಾಗಿದ್ದಾರೆ.

ಈ ಕುರಿತು ಒಬ್ಬ ಬಳಕೆದಾರನು ವ್ಯಂಗ್ಯ ಮಾಡಿದ್ದು, ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್‌ನಲ್ಲಿರುವ ಹೆಚ್ಚಿನ ಭಾರತೀಯರು ತಮ್ಮ ಗ್ರೀನ್ ಕಾರ್ಡ್‌ಗಳನ್ನು ಪಡೆಯುವ ಹೊತ್ತಿಗೆ ಈ ರೀತಿ ಕಾಣುತ್ತಾರೆ ಎಂದು ಹೇಳಿದ್ದಾರೆ.

ಎಚ್-1ಬಿ ವೀಸಾ ಎಂದರೇನು ?

ಎಚ್-1ಬಿ ವೀಸಾವು ವಲಸೆ-ಅಲ್ಲದ ವೀಸಾ (non-immigrant visa) ಆಗಿದ್ದು, ಇದು ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ವಿಶೇಷ ಸ್ಥಾನಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕನ್ ಕಂಪೆನಿಗಳಿಗೆ ಅನುವು ಮಾಡಿಕೊಡುತ್ತದೆ. ಪ್ರತಿ ವರ್ಷ ತಂತ್ರಜ್ಞಾನ ಕಂಪೆನಿಗಳಿಂದ ಚೀನಾ ಮತ್ತು ಭಾರತದಂತಹ ರಾಷ್ಟ್ರಗಳಿಂದ ಸಾವಿರಾರು ಕಾರ್ಮಿಕರನ್ನು ನೇಮಿಸಿಕೊಳ್ಳಲು ಇದು ನಿರ್ಣಾಯಕವಾಗಿದೆ.

ಯುಎಸ್ ಸಿಐಎಸ್ ನಿರ್ಧಿಷ್ಟ ಅವಧಿಯಲ್ಲಿ ಇದನ್ನು ಮಾಡುತ್ತದೆ. ಈ ವರ್ಷದ ಪ್ರಕ್ರಿಯೆಯು ಮಾರ್ಚ್ ತಿಂಗಳಲ್ಲಿ ಪೂರ್ಣಗೊಂಡಿದೆ.

ನೋಂದಣಿ ಎಲ್ಲಿ, ಹೇಗಿರುತ್ತದೆ ?

https://myaccount.uscis.gov/users/sign_up ಲಿಂಕ್ ಮೂಲಕ myUSCIC account ಕ್ರಿಯೇಟ್ ಮಾಡಬೇಕು. ಇದಕ್ಕಾಗಿ ಅರ್ಜಿದಾರರು 10 ಡಾಲರ್ ನೀಡಬೇಕಾಗುತ್ತದೆ. ಈ ಹಣವನ್ನು ಮರಳಿಸಲಾಗುವುದಿಲ್ಲ.


ತಮ್ಮ ಸ್ವಂತ ನೋಂದಣಿಗಳನ್ನು ಸಲ್ಲಿಸುತ್ತಿರುವವರು registrant ಖಾತೆಯನ್ನು ಬಳಸಬೇಕಾಗುತ್ತದೆ. ಖಾತೆ ರಚನೆಯ ನಂತರ, ಪ್ರತಿನಿಧಿಗಳು ತಮ್ಮ ಖಾತೆಗಳಿಗೆ ಯಾವುದೇ ಸಮಯದಲ್ಲಿ ಗ್ರಾಹಕರನ್ನು ಸೇರಿಸಬಹುದು. ಈ ವೀಸಾ ಫಲಾನುಭವಿಗಳ ವಿವರ ಪಡೆಯಲು ಪ್ರತಿನಿಧಿಗಳು ಮತ್ತು ನೋಂದಣಿದಾರರು ಕಾಯಬೇಕಾಗುತ್ತದೆ. ಆ ನಂತರ 10 ಡಾಲರ್ ಪಾವತಿಸಿ ತಮ್ಮ ನೋಂದಣಿಯನ್ನು ಸಬ್‌ಮಿಟ್ ಮಾಡಬೇಕು. ಸಿಂಗಲ್ ಸೆಷನ್‌ನಲ್ಲಿ ಬಹು ಫಲಾನುಭವಿಗಳ ಮಾಹಿತಿಯನ್ನು ಸೇರಿಸಲು ಸಾಧ್ಯವಾಗಲಿದೆ.

ಇಷ್ಟಾದ ಬಳಿಕ, ಅಂತಿಮ ಪಾವತಿಯ ತನಕ ಖಾತೆಯ ಮೂಲಕ ಮಾಹಿತಿಯನ್ನು ಎಡಿಟ್ ಮಾಡಲು, ಸಿದ್ಧಪಡಿಸಲು ಮತ್ತು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅಮೆರಿಕ ಸರ್ಕಾರವು ಅಂತಿಮ ಆಯ್ಕೆಯ ಬಗ್ಗೆ ಖಾತೆದಾರರಿಗೆ ತಿಳಿಸುತ್ತದೆ. ಆಗ ನೋಂದಣಿ ಒಪ್ಪಿಗೆಯಾಗಿದ್ದರೆ, ವೀಸಾ ಮುಂದಿನ ಪ್ರಕ್ರಿಯೆ ಸಾಧ್ಯವಾಗುತ್ತದೆ.

Exit mobile version