Site icon Vistara News

Model Death: ರೆಫ್ರಿಜರೇಟರ್​ನಲ್ಲಿತ್ತು ಅಮೆರಿಕದ ಮಾಡೆಲ್​ಳ ಮೃತದೇಹ, ದೇಹದಲ್ಲಿತ್ತು ಕೊಕೇನ್​, ಮದ್ಯ

Maleesa Moony

ನವ ದೆಹಲಿ: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ರೂಪದರ್ಶಿ ಮಲೀಸಾ ಮೂನಿಯ ಮೃತದೇಹ ಕಳೆದ ತಿಂಗಳು ರೆಫ್ರಿಜರೇಟರ್ ನಲ್ಲಿ ತುಂಬಿದ ಸ್ಥಿತಿಯಲ್ಲಿ (Model Death) ಪತ್ತೆಯಾಗಿತ್ತು. ಆಕೆಯ ಪಾದಗಳನ್ನು ಕಟ್ಟಲಾಗಿತ್ತು ಹಾಗೂ ಬಾಯಿಯನ್ನು ಮುಚ್ಚಲಾಗಿತ್ತು ಎಂದು ನ್ಯೂಯಾರ್ಕ್ ಪೋಸ್ಟ್ ಪಡೆದ ಇತ್ತೀಚಿನ ಶವಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ. 31 ವರ್ಷದ ಮೂನಿ ಸೆಪ್ಟೆಂಬರ್ 12 ರಂದು ತನ್ನ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಎಲ್ಎ ಕೌಂಟಿ ವೈದ್ಯಕೀಯ ಸಿಬ್ಬಂದಿ ಅದು ಕೊಲೆ ಎಂದಯು ತೀರ್ಪು ನೀಡಿದ್ದರು. ಇದೀಗ ಅವರ ಅಪಾರ್ಟ್​​ಮೆಂಟ್​​ನಲ್ಲಿ ದೇಹದ ಅವಶೇಷಗಳು ಹೇಗೆ ಪತ್ತೆಯಾದವು ಎಂಬ ವಿವರಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಆಕೆ ಕೊಕೇನ್ ಮತ್ತು ಮದ್ಯ ಸೇವಿಸಿರುವುದು ಗೊತ್ತಾಗಿದೆ.

ಮೂನಿಯನ್ನು ಕೊಲೆ ಮಾಡಿ ರೆಫ್ರಿಜರೇಟರ್​​ನಲ್ಲಿ ತುಂಬುವ ಮೊದಲು ಥಳಿಸಲಾಗಿತ್ತು. ಶವಪರೀಕ್ಷೆಯ ವೇಳೆ ಆಕೆಯ ದೇಹದ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿರುವುದು ಬಹಿರಂಗಗೊಂಡಿತ್ತು. ಉಳಿದ ಪರೀಕ್ಷೆಗಳು ದೇಹದಲ್ಲಿ ಕೊಕೇನ್ ಮತ್ತು ಆಲ್ಕೋಹಾಲ್ ನ ಕುರುಹುಗಳನ್ನು ತೋರಿಸಿತ್ತು. ಅದೇ ರೀತಿ ಸಾಯುವ ವೇಳೆ ಅಕೆ ಗರ್ಭವತಿಯಾಗಿದ್ದಳು ಎಂದು ಹೇಳಲಾಗಿದೆ.

ಇದನ್ನೂ ಓದಿ : Leopard Attack : ಚಿರತೆ ದಾಳಿಗೆ 5 ವರ್ಷದ ಬಾಲಕಿ ಬಲಿ

ಶವಪರೀಕ್ಷೆಯಲ್ಲಿ ಗಮನಿಸಲಾದ ಗಾಯಗಳನ್ನು ಸಾಮಾನ್ಯವಾಗಿ ತೀವ್ರ ಮಾರಣಾಂತಿಕವೆಂದು ಪರಿಗಣಿಸಲಾಗುವುದಿಲ್ಲ ಎಂದು ವೈದ್ಯಕೀಯ ಪರೀಕ್ಷಕರು ಶವಪರೀಕ್ಷೆ ವರದಿಯಲ್ಲಿ ಬರೆದಿದ್ದಾರೆ. ಆದಾಗ್ಯೂ, ಮೂನಿ ಯಾವ ಸ್ಥಿತಿಯಲ್ಲಿ ಪತ್ತೆಯಾದರು ಎಂಬ ಸಂದರ್ಭಗಳ ಆಧಾರದ ಮೇಲೆ ಈ ಗಾಯಗಳು ಅವರು ಸಾಯುವ ಮೊದಲು ಆದ ಹಲ್ಲೆಯದ್ದು ಎಂದು ಹೇಳಲಾಗಿದೆ. ಹೀಗಾಗಿ ಮೂನಿ ಸಾವಿನಲ್ಲಿ ಡ್ರಗ್ಸ್ ಅಥವಾ ಆಲ್ಕೋಹಾಲ್ ಜತೆಗೆ ಬಾಹ್ಯ ಹೊಡೆತವೂ ಕಾರಣ ಎನ್ನಲಾಗಿದೆ.

ಮೂನಿಯ ಸುರಕ್ಷತೆಗಾಗಿ ಆಕೆಯ ತಾಯಿ ಪೊಲೀಸರಿಗೆ ಕರೆ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು. ಆಕೆ ತನ್ನ ಅಪಾರ್ಟ್​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಧಿಕಾರಿಗಳು ಅಪಾರ್ಟ್​ಮೆಂಟ್​ ಪ್ರವೇಶಿಸಿದಾಗ. ಆಕೆಯ ದೇಹದ ಕೆಳಗೆ ರಕ್ತ ಮಡುಗಟ್ಟಿತ್ತು. ಆಕೆಯ ದೇಹದಾದ್ಯಂತ ಕಂಡುಬಂದ ಬಲವಾದ ಗಾಯಗಳು ಮತ್ತು ಪತ್ತೆಯಾದ ಸ್ಥಿತಿಯ ಆಧಾರದ ಮೇಲೆ, ಅಧಿಕಾರಿಗಳು ಅವಳ ಸಾವಿನ ವಿಧಾನವನ್ನು ನರಹತ್ಯೆ ಎಂದು ಪರಿಗಣಿಸಿದ್ದರು.

ಗರ್ಭಿಣಿ ಎಂದ ಸಹೋದರಿ

ಮೂನಿ ಅವರ ಸಹೋದರಿ ಪೌಲಿನ್, ತಮ್ಮ ಸಹೋದರಿ ನಿಧನರಾದಾಗ ಎರಡು ತಿಂಗಳ ಗರ್ಭಿಣಿಯಾಗಿದ್ದರು ಮತ್ತು ತಾಯಿಯಾಗಲು ಬಯಸಿದ್ದರು ಎಂದು ಹೇಳಿದ್ದಾರೆ “ಅವಳು ತುಂಬಾ ಉತ್ಸುಕಳಾಗಿದ್ದಳು ಮತ್ತು ಅವಳು ನಿಜವಾಗಿಯೂ ಮಗುವನ್ನು ಬಯಸಿದ್ದಳು ಎಂದು ನನಗೆ ತಿಳಿದಿದೆ/ ಅವಳು ಯಾವಾಗಲೂ ಮಾತನಾಡುವ ವಿಷಯವಾಗಿತ್ತು ಎಂದು ಹೇಳಿದ್ದಾರೆ.

ಮೂನಿ ಅವರ ಸಾವು ಸ್ಥಳೀಯ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಡೌನ್ಟೌನ್ ಎಲ್ಎ ಪ್ರದೇಶದ ಮತ್ತೊಬ್ಬರು ರೂಪದರ್ಶಿ ಇದೇ ಮಾದರಿಯಲ್ಲಿ ಕೊಲೆಯಾಗಿದ್ದರು. ಎರಡು ಪ್ರಕರಣಗಳಲ್ಲಿ ಸಾಮ್ಯತೆಗಳಿದ್ದರೂ, ಎರಡು ಘಟನೆಗಳಿಗೆ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Exit mobile version