Site icon Vistara News

ಅಮೆರಿಕ ಅಧ್ಯಕ್ಷ ಬೈಡೆನ್ ಮೊಮ್ಮಗಳ ಕಾರ್ ಮೇಲೆ ದಾಳಿ! ಗುಂಡು ಹಾರಿಸಿದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್!

US President granddaughter's car attacked

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಮೊಮ್ಮಗಳು ನವೋಮಿ ಬೈಡೆನ್ (Naomi Biden) ಅವರ ಕಾರು (Car) ಒಡೆಯಲು ಯತ್ನಿಸಿದ ಮೂವರ ವಿರುದ್ಧ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು (Secret service agents) ಗುಂಡು ಹಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನವೋಮಿ ಬೈಡೆನ್ ಅವರನ್ನು ರಕ್ಷಿಸಲು ನಿಯೋಜಿಸಲಾದ ಏಜೆಂಟ್‌ಗಳು, ಜಾರ್ಜ್‌ಟೌನ್ ನೆರೆಹೊರೆಯಲ್ಲಿ ಅವಳೊಂದಿಗೆ ಹೊರಗಿದ್ದರು. ಅವರು ನಿಲ್ಲಿಸಿದ ಮತ್ತು ಖಾಲಿಯಿಲ್ಲದ ಎಸ್‌ಯುವಿಯ ಕಿಟಕಿಯನ್ನು ಮೂರು ಜನರು ಒಡೆಯುವುದನ್ನು ನೋಡಿದರು. ಬಳಿಕ ಕ್ರಮಕ್ಕೆ ಮುಂದಾದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಕುರಿತಾದ ತನಿಖೆಯ ವಿವರವನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಕಾರು ಒಡೆಯುತ್ತಿದ್ದವರತ್ತ ಏಜೆಂಟರ್‌ಗಳ ಪೈಕಿ ಒಬ್ಬರು ಗುಂಡು ಹಾರಿಸಿದ್ದಾರೆ. ಆದರೆ, ಇದರಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಸೀಕ್ರೆಟ್ ಏಜೆಂಟ್ ಸೇವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗುಂಡು ಹಾರಿಸುತ್ತಿದ್ದಂತೆ ಕಾರ್ ಒಡೆಯುತ್ತಿದ್ದ ಮೂವರು ಕೆಂಪು ಬಣ್ಣದ ಕಾರಿನಲ್ಲಿ ಪರಾರಿಯಾದರು ಎಂದು ಹೇಳಲಾಗಿದೆ. ಈ ಮಧ್ಯೆ ಪರಾರಿಯಾಗಿರುವರ ಪತ್ತೆಗಾಗಿ ಮೆಟ್ರೋಪಾಲಿಟನ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸೀಕ್ರೆಂಟ್ ಏಜೆಂಟ್ ಸರ್ವಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ರೀತಿಯ ಘಟನೆಯೊಂದು ಕಳೆದ ತಿಂಗಳು ಕೂಡ ನಡೆದಿತ್ತು. ಟೆಕ್ಸಾಸ್‌ನ ಯುಎಸ್ ಪ್ರತಿನಿಧಿ ಹೆನ್ರಿ ಕ್ಯುಲ್ಲರ್ ಅವರನ್ನು ಕಳೆದ ತಿಂಗಳು ಕ್ಯಾಪಿಟಲ್ ಬಳಿ ಮೂರು ಶಸ್ತ್ರಸಜ್ಜಿತ ಆಕ್ರಮಣಕಾರರು ಅಡ್ಡಗಟ್ಟಿದ್ದರು. ಈ ಆರಪಿಗಳು ಅವರ ಕಾರನ್ನು ಕದ್ದಿದ್ದಾರೆ. ಆದರೆ ಕ್ಯುಲ್ಲರ್ ಅವರಿಗೆ ದೈಹಿಕವಾಗಿ ಹಾನಿ ಮಾಡಲಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ, ಮಿನ್ನೇಸೋಟಾದ ಆಂಜಿ ಕ್ರೇಗ್ ತನ್ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಹಲ್ಲೆಗೊಳಗಾಗಿದ್ದರು. ಈ ವೇಳೆ ಗಂಭೀರ ಗಾಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಮೊಮ್ಮಗಳಾದ ನವೋಮಿ ಬೈಡೆನ್ ಅವರು ನವೆಂಬರ್ 2022ರಲ್ಲಿ ಪೀಟರ್ ನೀಲ್ ಜತೆ ವೈಟ್‌ಹೌಸ್‌ನಲ್ಲಿ ವಿವಾಹವಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಏಕೆಂದರೆ, ವೈಟ್‌ಹೌಸ್‌ನ ಸೌತ್ ಲಾನ್‌ನಲ್ಲಿ ಮದುವೆಯಾದ ಮೊದಲ ವಧು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ನವೋಮಿ ಮತ್ತು ಪೀಟರ್ ಸಹ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರೊಂದಿಗೆ 1600 ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿ ಆಗಸ್ಟ್ 2021 ರಿಂದ ವಾಸಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Joe Biden: ಚುನಾವಣೆ ಮೊದಲೇ ಜೋ ಬೈಡೆನ್‌ಗೆ ಸಂಕಷ್ಟ; ಮಗನ ವಿರುದ್ಧ ಕ್ರಿಮಿನಲ್‌ ಚಾರ್ಜ್‌ಶೀಟ್!

Exit mobile version