ವಾಷಿಂಗ್ಟನ್: ‘ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ(Dog Bits Man). ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ’ ಎಂಬ ಪಾಠವನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಡಲಾಗುತ್ತದೆ. ಆದರೆ, ಅಮೆರಿಕದ ಈ ನಾಯಿ ಕಚ್ಚಿದ ಘಟನೆಯು ಜಗತ್ತಿನಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಹೌದು, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರ ನಾಯಿ ‘ಕಮಾಂಡರ್’ (Pet German Shepherd Dog Commander) ಮತ್ತೊಬ್ಬ ಸೀಕ್ರೆಟ್ ಸರ್ವೀಸ್ ಏಜೆಂಟ್ (secret service agent) ಒಬ್ಬರಿಗೆ ಕಚ್ಚಿದೆ. ಈ ಘಟನೆ ಸೆಪ್ಟೆಂಬರ್ 25ರಂದ ನಡೆದಿದ್ದು, ಅಧಿಕಾರಿಗೆ ಚಿಕಿತ್ಸೆ ನೀಡಲಾಗಿದೆ.
ಯುಎಸ್‌ಎಸ್‌ಎಸ್ ಮುಖ್ಯಸ್ಥ ಆಂಥೋನಿ ಗುಗ್ಲಿಲ್ಮಿ ಸಿಎನ್‌ಎನ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 25ರ ರಾತ್ರಿ 8 ಗಂಟೆ ಸುಮಾರಿಗೆ, ರಹಸ್ಯ ಸೇವೆಯ ಸಮವಸ್ತ್ರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರಿಗೆ ಅಧ್ಯಕ್ಷ ಕುಟುಬದ ಪೆಟ್ ನಾಯಿ ಕಮಾಂಡರ್ ಕಚ್ಚಿತು. ಶ್ವೇತಭವನದಲ್ಲೇ ಅವರಿಗೆ ವೈದ್ಯಕೀಯ ಸಿಬ್ಬಂದಿಯಿಂದ ಅಧಿಕಾರಿಗೆ ಚಿಕಿತ್ಸೆ ನೀಡಲಾಯಿತು ಹೇಳಿದರು. ನಾಯಿಯಿಂದ ಕಚ್ಚಿಸಿಕೊಂಡ ಅಧಿಕಾರಿಯು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷರ ಪೆಟ್ ಕಮಾಂಡರ್, ಏಜೆಂಟರ್ ಮೇಲೆ ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಜರ್ಮನ್ ಶೇಫರ್ಡ್ ಕನಿಷ್ಠ 19 ಸೀಕ್ರೆಟ್ ಸರ್ವೀಸ್ ಏಜೆಂಟರ್‌ಗೆ ಕಚ್ಚಿದೆ. ಜುಡಿಷಿಯಲ್ ವಾಚ್ ಹಂಚಿಕೊಂಡಿರುವ ಆಂತರಿಕ ಇಮೇಲ್‌ಗಳಿಂದ ಈ ಮಾಹಿತಿಯು ಬಹಿರಂಗವಾಗಿದೆ. ಇಮೇಲ್‌ಗಳ ಪ್ರಕಾರ, ಕಮಾಂಡರ್ ಅವರು ಜೋ ಬೈಡೆನ್ ಅವರು ಕುಟುಂಬವು 2021ರಲ್ಲಿ ಶ್ವೇತಭವನಕ್ಕೆ ಸ್ಥಳಾಂತರಗೊಂಡ ಬಳಿಕ ಹೊಸ ಪ್ರದೇಶಕ್ಕೆ ಹೊಂದಿಗಳು ನಾಯಿಗಳು ಕಷ್ಟಪಡುತ್ತಿದ್ದವು. ಇದಕ್ಕೂ ಮೊದಲು ಅಧ್ಯಕ್ಷರ ಕುಟುಂಬವು ಡೆಲ್‌ವೇರ್‌ನಲ್ಲಿ ವಾಸವಾಗಿದ್ದರು.
ಈ ಸುದ್ದಿಯನ್ನೂ ಓದಿ: Indian Army Dog: ದೇಶದ ಸೇನೆಯಲ್ಲಿ ಶ್ವಾನವೂ ಸೈನಿಕ; ಯೋಧನ ರಕ್ಷಿಸಲು ಹೋದ ಶ್ವಾನ ಹುತಾತ್ಮ
2022ರ ನವೆಂಬರ್‌ನಲ್ಲಿ ಜೈ ಬೈಡೆನ್ ಅವರ ನಾಯಿ ಕಮಾಂಡರ್ ಅಧಿಕಾರಿಯೊಬ್ಬರ ತೋಳು ಮತ್ತು ತೊಡೆಗೆ ಕಚ್ಚಿತ್ತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಘಟನೆಯ ಒಂದು ವಾರದ ನಂತರ, ಕಮಾಂಡರ್ ಅವರು ಜಿಲ್ ಬಿಡೆನ್ ಅವರೊಂದಿಗೆ ವಾಕ್ ಮಾಡಲು ಹೊರಟಿದ್ದಾಗ ಇನ್ನೊಬ್ಬ ಏಜೆಂಟ್‌ಗೆ ಕಚ್ಚಿತ್ತು. ಅಕ್ಟೋಬರ್ 2022 ರಿಂದ ಜನವರಿ 2023 ರವರೆಗೆ, ನಾಯಿ ಕಮಾಂಡರ್ ಒಟ್ಟು ಆರು ಜನರಿಗೆ ಕಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.