Site icon Vistara News

US Presidential Election: ಚುನಾವಣಾ ಪೂರ್ಣ ಸಮೀಕ್ಷೆ ಔಟ್‌; ಕಮಲಾ ಹ್ಯಾರಿಸ್‌ಗೆ ಮುನ್ನಡೆ

US Presidential Election

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election) ದಿನೇ ದಿನೇ ರಂಗೇರುತ್ತಿದೆ. ಹಾಲಿ ಅಧ್ಯಕ್ಷ ಜೋ ಬೈಡೆನ್‌(Joe Biden) ಸ್ಪರ್ಧೆಯಿಂದ ಹಿಂದೆ ಸರಿದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌(Kamala Harris) ಅವರ ಹೆಸರು ಸೂಚಿಸಿದ ಬೆನ್ನಲ್ಲೇ ಚುನಾವಣಾ ಪೂರ್ಣ ಮರು ಸಮೀಕ್ಷೆಗಳು ಹೊರಬಿದ್ದಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌(Donald Trump) ಅವರನ್ನು ಹಿಂದಿಕ್ಕಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಮುನ್ನಡೆ ಸಾಧಿಸಿದ್ದಾರೆ.

ಭಾನುವಾರ ತಾವು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಬೈಡೆನ್‌ ಘೋಷಿಸಿದ ಎರಡು ದಿನಗಳ ಬಳಿಕ ರೂಟರ್ಸ್‌ ಮತ್ತು ಮಾರ್ಕೆಟಿಂಗ್‌ ರಿಸರ್ಚ್‌ ಕಂಪನಿಗಳ ದಿಗ್ಗಜ Ipsos ಈ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಕಲಮಾ ಹ್ಯಾರಿಸ್‌ಗೆ ಶೇ.44 ಮತಗಳನ್ನು ಪಡೆಯುವ ಮೂಲಕ ಡೊನಾಲ್ಡ್‌ ಟ್ರಂಪ್‌ ಅವರನ್ನು ಎರಡು ಪಾಯಿಂಟ್‌ಗಳಿಂದ ಹಿಂದಿಕ್ಕಿದ್ದಾರೆ. ಟ್ರಂಪ್‌ ಶೇ.42ಮತಗಳನ್ನು ಪಡೆದಿದ್ದಾರೆ.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಮನಿರ್ದೇಶನವನ್ನು ಗೆಲ್ಲಲು ಸಾಕಾಗುವಷ್ಟು ಡೆಮಾಕ್ರಟಿಕ್ ಪ್ರತಿನಿಧಿಗಳ ಬೆಂಬಲ ಗಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ. ಮೊದಲ ಮತದಾನದಲ್ಲಿ ನಾಮನಿರ್ದೇಶನವನ್ನು ಗೆಲ್ಲಲು ಅಗತ್ಯವಿರುವ 1,976ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳ ಬೆಂಬಲವನ್ನು ಇದುವರೆಗೆ ಹ್ಯಾರಿಸ್ ಗಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಮಲಾ ಹ್ಯಾರಿಸ್‌, `ಇವತ್ತು ನಮ್ಮ ಪಕ್ಷದ ಅಭ್ಯರ್ಥಿಯಾಗಲು ಅಗತ್ಯವಿರುವ ಬೆಂಬಲವನ್ನು ಗಳಿಸಿದ್ದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ಮುಂದಿನ ತಿಂಗಳು ನಾನು ದೇಶದಾದ್ಯಂತ ಪ್ರಯಾಣಿಸುತ್ತೇನೆ ಎಂದಿದ್ದಾರೆ.

ಸೋಮವಾರ ನಡೆಸಿದ PBS ನ್ಯೂಸ್/ಎನ್‌ಪಿಆರ್/ಮಾರಿಸ್ಟ್ ಸಮೀಕ್ಷೆಯಲ್ಲಿ, ಟ್ರಂಪ್ ಹ್ಯಾರಿಸ್‌ಗೆ ಶೇ.46 ರಿಂದ 45 ರಷ್ಟು US ನೋಂದಾಯಿತ ಮತದಾರರ ಬೆಂಬಲ ಹೊಂದಿದ್ದು, ಒಂಬತ್ತು ಪ್ರತಿಶತ ನಿರ್ಧಾರವಾಗಿಲ್ಲ. ಮೂರನೇ ಪಕ್ಷದ ಅಭ್ಯರ್ಥಿಗಳು ಅಥವಾ ಸ್ವತಂತ್ರ ಅಭ್ಯರ್ಥಿಗಳನ್ನು ಸ್ಪರ್ಧೆಯಲ್ಲಿ ಸೇರಿಸಿದರೆ, ಟ್ರಂಪ್ ಮತ್ತು ಹ್ಯಾರಿಸ್ ಶೇಕಡಾ 42 ರಷ್ಟು ಸಮಬಲ ಹೊಂದಿದ್ದಾರೆ.

ಕಮಲಾ ಹ್ಯಾರಿಸ್​ ಮೂಲತಃ ಭಾರತದವರು. ಅವರ ತಾಯಿ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಬಳಿಕ ಯುಎಸ್​ಗೆ ತೆರಳಿ, ಅಲ್ಲಿನವರನ್ನೇ ಮದುವೆಯಾಗಿ ನೆಲೆಸಿದ್ದರು. ಯುಎಸ್​ ಉಪಾಧ್ಯಕ್ಷೆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೂ ಕಮಲಾ ಹ್ಯಾರಿಸ್​ ಪಾತ್ರರಾಗಿದ್ದಾರೆ. ಅವರು ಯುಎಸ್​ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗ ಚೆನ್ನೈನಲ್ಲಿರುವ ಅವರ ಪೂರ್ವಜರ ಊರಿನಲ್ಲಿ ಭರ್ಜರಿ ಸಂಭ್ರಮ ಏರ್ಪಟ್ಟಿತ್ತು. ಸಿಹಿ ವಿತರಣೆಯೂ ನಡೆದಿತ್ತು.

ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾದೇವಿ ಹ್ಯಾರಿಸ್ ಅವರ ತಂದೆ ಜಮೈಕಾ ಮೂಲದವರಾದರೆ ತಾಯಿ ಭಾರತೀಯ ಮೂಲದವರು. ಉನ್ನತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಕಮಲಾ, ಪೊಲೀಸ್ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ತಂದು ಗಮನ ಸೆಳೆದರು. ನಂತರ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ ಕಮಲಾದೇವಿ ಹ್ಯಾರಿಸ್, 2020ರಲ್ಲಿ ಅಮೆರಿಕದ ಉಪಾಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಮೈಕ್ ಪೆನ್ಸೆ ಅವರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

Exit mobile version