Site icon Vistara News

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

US Presidential Election

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ(US Presidential Election) ರಂಗೇರಿದೆ. ಇದರ ಮೊದಲ ಭಾಗವಾಗಿ ಕಣದಲ್ಲಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ (Joe Biden) ಮತ್ತು ಅವರ ಪ್ರತಿ ಸ್ಪರ್ಧಿ, ರಿಪಬ್ಲಿನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಈ ಚರ್ಚೆ ಪೂರ್ಣಗೊಳ್ಳುತ್ತಿದ್ದಂತೆ ಡೆಮಾಕ್ರಟಿಕ್‌ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಿಸುತ್ತದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೋ ಬೈಡೆನ್‌ ಅವರ ಬದಲಿಗೆ ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಶೆಲ್‌ ಒಬಾಮಾ ಅವರ ಹೆಸರು ಬಹಳ ಕೇಳಿ ಬರುತ್ತಿದೆ.

ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಟೆಡ್‌ ಕ್ರೂಸ್‌ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಂದು ನಡೆದ ಬೃಹತ್‌ ಚರ್ಚೆಯನ್ನು ಗಮನಿಸಿದರೆ ಡೆಮಾಕ್ರಟಿಕ್‌ ಪಕ್ಷವು ತನ್ನ ಅಭ್ಯರ್ಥಿಯಾಗಿರುವ ಜೋ ಬೈಡೆನ್‌ ಅವರನ್ನು ಕೈಬಿಟ್ಟು ಅವರ ಬದಲಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನು ನಾನು ಒಂಬತ್ತು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದ್ದಾರೆ.

ಟ್ರಂಪ್‌ ವಿರುದ್ಧ ಬೈಡೆನ್‌ ಪ್ರಬಲ ಅಸ್ತ್ರ

ಟ್ರಂಪ್‌ರನ್ನು ಲೂಸರ್‌ ಎಂದು ಕರೆದಿರುವ ಬೈಡೆನ್‌, ಇರಾಕ್‌ನಲ್ಲಿರುವ ಅಮೆರಿಕ ಸೇನೆಯಲ್ಲಿ ಕರ್ತವ್ಯ ನಿರ್ಹಿಸಿ ಹುತಾತ್ಮನಾದ ತಮ್ಮ ಪುತ್ರ ಬ್ಯೂ ಬಗ್ಗೆ ಪ್ರಸ್ತಾಪಿಸಿದರು. ನನ್ನ ಪುತ್ರ ಧೀರ, ಧೈರ್ಯಶಾಲಿ. ಆದರೆ ಟ್ರಂಪ್‌ ಒಬ್ಬ ಲೂಸರ್‌, ಅಮಾಯಕರ ರಕ್ತ ಹೀರುವವರು ಎಂದು ಕಿಡಿ ಕಾರಿದರು.

ಉಕ್ರೇನ್‌ ದಾಳಿ ವಿಚಾರವನ್ನು ಮುಂದಿಟ್ಟುಕೊಂಡು ಬೈಡೆನ್‌ಗೆ ಟಾಂಗ್‌ ಕೊಟ್ಟ ಟ್ರಂಪ್‌, ನೀವು ನಿಜವಾಗಿಯೂ ಒಬ್ಬರು ಉತ್ತಮ ಅಧ್ಯಕ್ಷರಾಗಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್‌ ತಮ್ಮ ಬಗ್ಗೆ ಗೌರವ ಹೊಂದಿದ್ದರೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ ನಡೆಯುತ್ತಿರಲಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಬೈಡೆನ್‌, ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವೇ ಆಗುತ್ತಿಲ್ಲ ಎಂದರು.

ತಾವು ಅಧ್ಯಕ್ಷರಾಗಿದ್ದರೆ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಅನ್ನು ಎಂದಿಗೂ ಆಕ್ರಮಿಸುತ್ತಿರಲಿಲ್ಲ. ಬೈಡೆನ್‌ ಪ್ಯಾಲೆಸ್ತೀನಿಯನ್‌ ನಂತೆ ವರ್ತಿಸುತ್ತಿದ್ದಾರೆ. ಆದರೆ ಅವರು ಅವನನ್ನು ಇಷ್ಟಪಡುವುದಿಲ್ಲ ಏಕೆಂದರೆ ಅವರು ತುಂಬಾ ಕೆಟ್ಟ ಪ್ಯಾಲೆಸ್ತೇನಿಯನ್‌. ಅವರು ದುರ್ಬಲರು, ”ಎಂದು ಟ್ರಂಪ್ ಬಿಡೆನ್ ಬಗ್ಗೆ ಹೇಳಿದರು.

ಬೈಡೆನ್‌ ಅವರು ಚೀನಾದೊಂದಿಗೆ ವ್ಯವಹರಿಸಲು ಹೆದರುತ್ತಾರೆ ಏಕೆಂದರೆ ಅವರು ಅವರಿಂದ ಹಣವನ್ನು ಪಡೆಯುತ್ತಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ನಾವು ಈಗ ನಮ್ಮ ದೇಶದ ಇತಿಹಾಸದಲ್ಲಿ ಅತಿದೊಡ್ಡ ಸಮಸ್ಯೆಯನ್ನು ಹೊಂದಿದ್ದೇವೆ. ನಾವು ಚೀನಾದೊಂದಿಗೆ ಬಿಕ್ಕಟ್ಟು ಹೊಂದಿದ್ದೇವೆ. ಬೈಡೆನ್‌ ಚೀನಾದಿಂದ ಹಣ ಪಡೆಯುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ಹಣದುಬ್ಬರವು ನಮ್ಮ ದೇಶವನ್ನು ಕೊಲ್ಲುತ್ತಿದೆ. ಇದು ನಮ್ಮನ್ನು ಸಂಪೂರ್ಣವಾಗಿ ಕೊಲ್ಲುತ್ತಿದೆ ”ಎಂದು 2017-2021 ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಟ್ರಂಪ್ ಆರೋಪಿಸಿದರೆ, “ಎಲ್ಲವೂ ಉತ್ತಮವಾಗಿದೆ.” ಟ್ರಂಪ್ ಆಡಳಿತಾವಧಿಯಲ್ಲಿ ಅಡಿಯಲ್ಲಿ ಆರ್ಥಿಕತೆಯು ಕುಸಿದಿತ್ತು ಎಂದು ಬಿಡೆನ್ ತಿರುಗೇಟು ಕೊಟ್ಟರು.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Exit mobile version