Site icon Vistara News

Israel Palestine War: ಇಸ್ರೇಲ್ ತಲುಪಿದ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳು!

US Sends its advanced weapons and equipment to Israel

ಟೆಲ್‌ ಅವಿವ್: ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರ (Hamas Attack) ಜತೆ ಪೂರ್ಣ ಪ್ರಮಾಣದಲ್ಲಿ ಯುದ್ಧ ಸಾರಿರುವ ಇಸ್ರೇಲ್‌ಗೆ (Israel) ಅಮೆರಿಕದ (America) ಬೆಂಬಲ ದೊರೆಯುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಅಮೆರಿಕವು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯವು (Israel Ministry of Defence) ಬುಧವಾರ ತಿಳಿಸಿದೆ. ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಕ್ಷಿಪಣಿಗಳ ಸುರಿ ಮಳೆಯನ್ನು ಸುರಿಸುವ ಮೂಲಕ ಸಾವಿರಾರು ಇಸ್ರೇಲಿಗಳಿಗೆ ಕೊಂದು ಹಾಕಿದರು. ಪರಿಣಾಮ, ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿ, ಬಂಡುಕೋರರನ್ನು ಬೇಟೆಯಾಡುತ್ತಿದೆ(Israel Palestine War).

ಇಸ್ರೇಲ್‌ನ ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿದ ವೀಡಿಯೊಗಳು ಮತ್ತು ಚಿತ್ರಗಳು ಕಾರ್ಗೋ ವಿಮಾನದ ಲ್ಯಾಂಡಿಂಗ್ ಆಗುತ್ತಿರುವುದನ್ನು ತೋರಿಸಿವೆ. ಜಂಟಿ ಕಾರ್ಯಾಚರಣೆಗಾಗಿ ಅಮೆರಿಕವು ಇಸ್ರೇಲ್‌ಗೆ ಕಳುಹಿಸಲಾದ ಅತ್ಯಾಧುನಿಕ ಯುದ್ಧ ಸಾಮಾಗ್ರಿಗಳು ಅದರಲ್ಲಿವೆ.

ರಕ್ಷಣಾ ಸಚಿವಾಲಯದ ಉತ್ಪಾದನೆ ಮತ್ತು ಸಂಗ್ರಹಣೆಯ ನಿರ್ದೇಶನಾಲಯ, ಅಮೆರಿಕ ಸಂಗ್ರಹಣೆ ಮಿಷನ್ ಮತ್ತು ಇಸ್ರೇಲ್ ರಕ್ಷಣಾ ಸಚಿವಾಲಯದ ಅಂತಾರಾಷ್ಟ್ರೀಯ ಸಾರಿಗೆ ಘಟಕವು, ಸರಕು ವಿಮಾನದ ಮೇಲ್ವಿಚಾರಣೆ ಮಾಡಿತು. ಅಮೆರಿಕದಿಂದ ಶಸ್ತ್ರಾಸ್ತ್ರಗಳ ನೇರ ಸಾಗಣೆಯನ್ನು ಖಾತ್ರಿಪಡಿಸಿತು ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ವಕ್ತಾರ ಮಾಯನ್ ಲಾಜರೋವಿಚ್‌ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Ajay: ಭಾರತದಿಂದ ‘ಆಪರೇಷನ್ ಅಜಯ’ ಶುರು! ಇಸ್ರೇಲ್‌ಗೂ ಈ ಕಾರ್ಯಾಚರಣೆಗೂ ಏನು ಸಂಬಂಧ?

ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ಕ್ಷಿಪಣಿ ದಾಳಿಗಳನ್ನು ಮಾಡುತ್ತಿದ್ದಂತೆ ಅಮೆರಿಕವು ಇಸ್ರೇಲ್‌ಗೆ ತನ್ನ ಸಂಪೂರ್ಣವನ್ನು ಬೆಂಬಲವನ್ನು ವ್ಯಕ್ತಪಡಿಸಿತು. ಈ ಹಮಾಸ್ ದಾಳಿಯಲ್ಲಿ ಅಮೆರಿಕವು ತನ್ನ 14 ನಾಗರಿಕರು ಹತ್ಯೆಯಾಗಿದ್ದಾರೆಂದು ಖಚಿತಪಡಿಸಿದೆ. ಬಹುಶಃ ಈ ಸಾವಿನ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದೂ ಹೇಳಿದೆ. ಬೆಂಬಲ ಘೋಷಿಸಿದ್ದು ಮಾತ್ರವಲ್ಲದೇ, ಅಮೆರಿಕ ತನ್ನ ಮಿತ್ರ ಇಸ್ರೇಲ್‌ಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ರವಾನಿಸು ಮೂಲಕ ಪರೋಕ್ಷವಾಗಿ ಇಸ್ರೇಲ್ ಪರವಾಗಿ ಯುದ್ಧ ಮೈದಾನಕ್ಕೆ ಇಳಿದಂತಾಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version