Site icon Vistara News

Omar Sultan Al Olama | ವಿದೇಶಾಂಗ ಸಚಿವ ಜೈಶಂಕರ್‌ಗೆ ಯುಎಇ ಸಚಿವ ಮೆಚ್ಚುಗೆ, ಶ್ಲಾಘನೆಗೆ ಕಾರಣವೇನು?

Jaishankar

ಅಬುಧಾಬಿ: ಉಕ್ರೇನ್‌ ಹಾಗೂ ರಷ್ಯಾ ಬಿಕ್ಕಟ್ಟಿನ ವಿಷಯದಲ್ಲಿ ಭಾರತ ತಟಸ್ಥ ನಿಲುವು ಹೊಂದಿ, ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದ ಕುರಿತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಯುಎಇ ಸಚಿವ ಒಮರ್‌ ಸುಲ್ತಾನ್‌ ಅಲ್‌ ಒಲಾಮಾ (Omar Sultan Al Olama) ಕೂಡ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರ ಕುರಿತು ಶ್ಲಾಘಿಸಿದ್ದಾರೆ.

ಅಬುಧಾಬಿಯಲ್ಲಿ ದೆಹಲಿ ಮೂಲದ ಸಂಸ್ಥೆಯೊಂದು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯುಎಇ ಕೃತಕ ಬುದ್ಧಿಮತ್ತೆ (Artificial Intelligence) ಖಾತೆ ಸಹಾಯಕ ಸಚಿವ ಒಮರ್‌ ಸುಲ್ತಾನ್‌, “ಜಾಗತಿಕವಾಗಿ ಭೌಗೋಳಿಕತೆಗೆ ಸಂಬಂಧಿಸಿದಂತೆ ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಉತ್ತಮ ನೀತಿಗಳನ್ನು ಹೊಂದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನನಗೆ ಅವರು ತುಂಬ ಇಷ್ಟ ಆಗುತ್ತಾರೆ” ಎಂದು ಹೇಳಿದ್ದಾರೆ.

“ಜಗತ್ತಿನಾದ್ಯಂತ ಏಕಪಕ್ಷೀಯ, ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ನಿಲುವುಗಳನ್ನು ಹೊಂದಿರುವ ರಾಷ್ಟ್ರಗಳಿವೆ. ಆದರೆ, ನಿಲುವುಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ಎಸ್‌.ಜೈಶಂಕರ್‌ ಚಾಣಾಕ್ಷರಾಗಿದ್ದಾರೆ. ನಾನು ಅವರ ಕೆಲವೊಂದಿಷ್ಟು ಭಾಷಣಗಳನ್ನು ಕೇಳಿದ್ದೇನೆ. ಅವರು ಹೊಂದಿರುವ ನಿಲುವುಗಳು ತುಂಬ ಇಷ್ಟವಾಗಿವೆ. ಇದು ಭಾರತ ಹಾಗೂ ಯುಎಇ ಸಂಬಂಧ ವೃದ್ಧಿಗೂ ಅನುಕೂಲವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್‌ ಮಾತು

Exit mobile version